ಮುಂಬೈ: ಭಾರತದ ಕ್ರಿಕೆಟಿಗ, ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಅವರ ತಮ್ಮ ಬಹುಕಾಲದ ಗೆಳತಿ ಶ್ರುತಿ ರಘುನಾಥನ್ ಜತೆಗೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
2023ರ ನವೆಂಬರ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಇಂದು ತಮ್ಮ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಐಪಿಎಲ್ 2024 ರ ಟೂರ್ನಿಯಲ್ಲಿ ಕೆಕೆಆರ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಅಯ್ಯರ್ ಅವರ ಅದ್ಭುತ ಪ್ರದರ್ಶನವೂ ಒಂದಾಗಿತ್ತು. 14 ಪಂದ್ಯಗಳಲ್ಲಿ, ಅಯ್ಯರ್ 158.80 ಸ್ಟ್ರೈಕ್ ರೇಟ್ನಲ್ಲಿ 370 ರನ್ ಗಳಿಸಿದರು. ಅವರು ನಾಲ್ಕು ಅರ್ಧ ಶತಕಗಳನ್ನು ಸಿಡಿಸಿದರು ಮತ್ತು ಐಪಿಎಲ್ 2024 ರಲ್ಲಿ ತಮ್ಮ ಅತ್ಯಧಿಕ ಸ್ಕೋರ್ 70 ಅನ್ನು ದಾಖಲಿಸಿದರು.