Wednesday, 18th December 2024

Vijay Hazare Trophy: ವಿದರ್ಭ ತಂಡಕ್ಕೆ ಕರುಣ್ ನಾಯರ್ ನಾಯಕ

ಅಹಮದಾಬಾದ್‌: ಇದೇ 21ರಿಂದ ಅಹಮದಾಬಾದಿನಲ್ಲಿ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ(Vijay Hazare Trophy) ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ಕರುಣ್ ನಾಯರ್(Karun Nair) ಅವರು ವಿದರ್ಭ ಕ್ರಿಕೆಟ್ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಕರುಣ್ ಅವರು ಕರ್ನಾಟಕ ತಂಡವನ್ನು ತೊರೆದ ಬಳಿಕ ಕಳೆದ ಋತುವಿನಿಂದ ವಿದರ್ಭ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ತಂಡ

ಕರುಣ್ ನಾಯರ್ (ನಾಯಕ), ಧ್ರುವ ಶೋರೆ, ಅಥರ್ವ ತೈಡೆ, ಯಶ್ ರಾಥೋಡ್, ಅಪೂರ್ವ್ ವಾಂಖೆಡೆ, ಶುಭಂ ದುಬೆ, ಅಮನ್ ಮೊಖಡೆ, ಯಶ್ ಕದಂ, ಜಿತೇಶ್ ಶರ್ಮಾ, ಅಕ್ಷಯ್ ವಾಡಕರ್, ಹರ್ಷ ದುಬೆ, ಪಾರ್ಥ ರೆಖಡೆ, ಯಶ್ ಠಾಕೂರ್, ಆದಿತ್ಯ ಠಾಕರೆ, ಪ್ರಫುಲ್ ಹಿಂಜೆ, ದರ್ಶನ್ ನಾಯ್ಕಂಡೆ, ನಚಿಕೇತ್ ಭೂತೆ. ಕೋಚ್: ಉಸ್ಮಾನ್ ಗಣಿ, ಸಹಾಯಕ ಕೋಚ್: ಅತುಲ್ ರಾನಡೆ.

ಯುಪಿ ತಂಡಕ್ಕೆ ರಿಂಕು ಸಿಂಗ್ ನಾಯಕ

ಲಕ್ನೋ: ಭಾರತ ಕ್ರಿಕೆಟ್‌ ತಂಡದ ಸ್ಫೋಟಕ ಎಡಗೈ ಬ್ಯಾಟರ್‌ ರಿಂಕು ಸಿಂಗ್(Rinku Singh) ಅವರು ವಿಜಯ್ ಹಜಾರೆ ಟ್ರೋಫಿ(Vijay Hazare Trophy) ಟೂರ್ನಿಯಲ್ಲಿ ಉತ್ತರ ಪ್ರದೇಶ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ ಐಪಿಎಲ್‌ನಲ್ಲಿ ಮಿಂಚಿದ ತಾರಾ ಆಟಗಾರರ ದಂಡೇ ಒಳಗೊಂಡಿದೆ.

ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆಯು ಒಂದೊಂದು ಕ್ರಿಕೆಟ್‌ ಮಾದರಿಗೂ ಒಂದೊಂದು ನಾಯಕರನ್ನು ನೇಮಕ ಮಾಡಿರುವುದು ವಿಶೇಷ. ರಣಜಿ ತಂಡಕ್ಕೆ ಆರ್ಯನ್ ಜುಯಲ್, ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ವೇಗಿ ಭುವನೇಶ್ವರ್ ಕುಮಾರ್, ಇದೀಗ ವಿಜಯ್ ಹಜಾರೆ ಟ್ರೋಫಿ ಟೂರ್ನಿಗೆ ರಿಂಕುಗೆ ನಾಯಕ ಪಟ್ಟ ಕಟ್ಟಲಾಗಿದೆ.

ಇದನ್ನೂ ಓದಿ Ankit Rajpoot: ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಅಂಕಿತ್ ರಜಪೂತ್

ಉತ್ತರ ಪ್ರದೇಶ ತಂಡದಲ್ಲಿ ಭುವನೇಶ್ವರ್ ಕುಮಾರ್, ನಿತೀಶ್ ರಾಣಾ, ಮೊಹ್ಸಿನ್ ಖಾನ್, ರಿಂಕು ಸಿಂಗ್ ಹಾಗೂ ಶಿವಂ ಮಾವಿ ಅವರಂತಹ ತಾರಾ ಆಟಗಾರರು ಕಾಣಿಸಿಕೊಂಡಿದ್ದಾರೆ. ರಿಂಕು ಸಿಂಗ್ ಕಳೆದ ಬಾರಿಯ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ 9 ಪಂದ್ಯಗಳನ್ನಾಡಿ 69ರ ಸರಾರಿಯಲ್ಲಿ 277 ರನ್ ಸಿಡಿಸಿದ್ದರು.

ಯುಪಿ ತಂಡ

ರಿಂಕು ಸಿಂಗ್ (ನಾಯಕ), ಭುವನೇಶ್ವರ್ ಕುಮಾರ್, ಮಾಧವ್ ಕೌಶಿಕ್, ಕರಣ್ ಶರ್ಮಾ, ಪ್ರಿಯಮ್ ಗಾರ್ಗ್, ನಿತೀಶ್ ರಾಣಾ, ಅಭಿಷೇಕ್ ಗೋಸ್ವಾಮಿ, ಅಕ್ಷದೀಪ್ ನಾಥ್, ಆರ್ಯನ್ ಜುಯಲ್, ಆರಾಧ್ಯ ಯಾದವ್, ಸೌರಭ್ ಕುಮಾರ್, ಕೃತಜ್ಞ ಕುಮಾರ್ ಸಿಂಗ್, ವಿಪ್ರಜ್ ನಿಗಮ್, ಮೊಹ್ಸಿನ್ ಖಾನ್, ಶಿವಂ ಮಾವಿ, ಖಾನ್, ಅಟಲ್ ಬಿಹಾರಿ ರೈ, ಕಾರ್ತಿಕ್ಯ ಜೈಸ್ವಾಲ್, ವಿನೀತ್ ಪನ್ವಾರ್. ಸ್ಟ್ಯಾಂಡ್‌ ಬೈ ಆಟಗಾರರು: ಸಮರ್ಥ್ ಸಿಂಗ್, ಸಮೀರ್ ಚೌಧರಿ, ಅಂಕಿತ್ ರಜಪೂತ್, ಪ್ರಿನ್ಸ್ ಯಾದವ್. ನೆಟ್‌ ಬೌಲರ್ಸ್‌: ವೈಭವ್ ಚೌಧರಿ, ಯೋಗೇಂದ್ರ ದೋಯಾಲಾ, ಜೀಶನ್ ಅನ್ಸಾರಿ, ಅಂಶ್ ದ್ವಿವೇದಿ, ಯಶ್ ಗಾರ್ಗ್.