Sunday, 24th November 2024

Viral Video: ಬುಮ್ರಾ ಶೈಲಿಯಲ್ಲಿ ಬೌಲಿಂಗ್‌ ನಡೆಸಿ ಪತಿಯ ವಿಕೆಟ್‌ ಪಡೆದ ಪತ್ನಿ; ಇಲ್ಲಿದೆ ವಿಡಿಯೊ

ಬೆಂಗಳೂರು: ಕ್ರಿಕೆಟ್ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತಹ ಕ್ರೀಡೆ. ಅನೇಕ ದೇಶದಲ್ಲಿ ಕ್ರಿಕೆಟ್ ಆಡುತ್ತಾರೆ. ಆದರೆ ಭಾರತೀಯರಿಗೆ ಕ್ರಿಕೆಟ್‌ ಅಂದರೆ ಒಂದು ಎಮೋಷನ್. ನಮ್ಮವರಿಗೆ ಕ್ರಿಕೆಟ್‌ ಆಡಲು ಮೈದಾನವೇ ಬೇಕೆಂದಿಲ್ಲ ಸಣ್ಣದೊಂದು ಗಲ್ಲಿ ಇದ್ದರೂ ಸಾಕು. ಅಲ್ಲೆ ವಿಕೆಟ್‌ ಊರಿ ಪಂದ್ಯವನ್ನಾಡುತ್ತಾರೆ. ಇದೀಗ ಗಂಡ ಮತ್ತು ಹೆಂಡತಿ ಮನೆಯಂಗಳದಲ್ಲಿ ಕ್ರಿಕೆಟ್‌ ಆಡಿದ ವಿಡಿಯೊವೊಂದು ವೈರಲ್‌(Viral Video) ಆಗಿದೆ.

ವೈರಲ್‌ ಆಗುತ್ತಿರುವ ವಿಡಿಯೊದಲ್ಲಿ ಹೆಂಡತಿ ತಮ್ಮ ಮನೆಯ ಅಂಗಳದಲ್ಲಿ ಗಂಡನ ಜತೆ ಕ್ರಿಕೆಟ್‌ ಆಡುತ್ತಿರುವುದನ್ನು ಕಾಣಬಹುದು. ಜಸ್‌ಪ್ರೀತ್‌ ಬುಮ್ರಾ ಶೇಲಿಯಲ್ಲಿ ಓಡಿ ಬಂದು ಬೌಲಿಂಗ್‌ ನಡೆಸಿದ ಪತ್ನಿ ಕ್ಯಾಚ್‌ ಹಿಡಿದು ಗಂಡನ ವಿಕೆಟ್‌ ಪಡೆದಿದ್ದಾಳೆ. ಈ ವಿಡಿಯೊ ಕಂಡ ಅನೇಕ ಅವಿವಾಹಿತ ಕ್ರಿಕೆಟ್‌ ಪ್ರಿಯರು ಭವಿಷ್ಯದಲ್ಲಿ ಸಿಗುವ ಮಡದಿ ಇದೇ ರೀತಿಯ ಕ್ರಿಕೆಟ್‌ ಪ್ರೇಮಿಯಾಗಿರಲಿ ಎಂದು ಹಾಸ್ಯಮಯ ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಇಂತಹ ಪತ್ನಿಯನ್ನು ಪಡೆದ ನೀವೇ ಮ್ಯಾನ್‌ ಆಫ್‌ದಿ ಮ್ಯಾಚ್‌ ವಿನ್ನರ್‌ ಎಂದು ತಮಾಷೆ ಮಾಡಿದ್ದಾರೆ.

ಕೆಲ ತಿಂಗಳ ಹಿಂದೆ ಅಜ್ಜನೊಬ್ಬ ತಮ್ಮ ಇಳಿ ವಯಸ್ಸಿನಲ್ಲೂ ಕ್ರಿಕೆಟ್‌ ಆಡಿ ಗಮನಸೆಳೆದಿದ್ದರು. ಹಕ್ಕಿಯಂತೆ ಹಾರಿ ಒಂದೇ ಕೈಯಲ್ಲಿ ಹಿಡಿದ ಕ್ಯಾಚ್‌ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿತ್ತು. ಸರಿ ಸುಮಾರು 60 ವರ್ಷಕ್ಕಿಂತ ಮೇಲ್ಪಟ್ಟವರಂತೆ ಕಾಣುವ ಈ ಅಜ್ಜ ಯುವಕರ ಜತೆಗಿನ ಸ್ಥಳೀಯ ಕ್ರಿಕೆಟ್‌ ಪಂದ್ಯವೊಂದರಲ್ಲಿ ಬೌಲಿಂಗ್‌ ನಡೆಸಿ, ಬ್ಯಾಟರ್‌ ಹೊಡೆದ ಸ್ಟ್ರೈಟ್‌ ಡ್ರೈವ್‌ ಹೊಡೆತವನ್ನು ಜಿಗಿದು ಒಂದೇ ಕೈಯಲ್ಲಿ ಕ್ಯಾಚ್‌ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕ್ಯಾಚ್‌ ವಿಡಿಯೊ ಕಂಡು ಫೀಲ್ಡ್‌ ಅಂಪೈರ್‌ ಒಂದು ಕ್ಷಣ ದಂಗಾಗಿದ್ದರು.

ಇದನ್ನೂ ಓದಿ Viral Photo: ಬಿಗ್‌ ಬಾಸ್‌ ಮನೆಯಲ್ಲಿ ಒಂದೇ ಬೆಡ್ ಮೇಲೆ ಜೋಡಿಯ ಖುಲ್ಲಾಂಖುಲ್ಲಾ ರೊಮ್ಯಾನ್ಸ್‌! ಫೋಟೋ ಭಾರೀ ವೈರಲ್‌-ನೆಟ್ಟಿಗರು ಕಿಡಿ

ಲಿಂಗ ಪರಿವರ್ತನೆ ಮಾಡಿಕೊಂಡು ಹುಡುಗಿಯಾದ ಸಂಜಯ್ ಬಂಗಾರ್ ಪುತ್ರ

ಲಂಡನ್‌: ಮಾಜಿ ಟೀಮ್ ಇಂಡಿಯಾ ಆಟಗಾರ ಹಾಗೂ ಬ್ಯಾಟಿಂಗ್ ಕೋಚ್ ಆಗಿದ್ದ ಸಂಜಯ್ ಬಂಗಾರ್(Sanjay Bangar) ಅವರ ಹಿರಿಯ ಪುತ್ರ ಆರ್ಯನ್ ಲಿಂಗ ಪರಿವರ್ತನೆ(hormonal transformation) ಮಾಡಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಆರ್ಯನ್ ಆಗಿದ್ದ ಬಂಗಾರ್ ಪುತ್ರ ಇದೀಗ ಅನಯಾ(Aryan to Anaya) ಆಗಿ ಬದಲಾಗಿದ್ದಾರೆ. ತನ್ನ ನಿರ್ಧಾರದ ಬಗ್ಗೆ ತುಂಬಾ ತೃಪ್ತಿಯಿದೆ ಎಂದು ಅನಯಾ ತಿಳಿಸಿದ್ದಾರೆ.

ಅನಯಾ ಕಳೆದ 10 ತಿಂಗಳಿಂದ ಹಾರ್ಮೋನ್ ಬದಲಾವಣೆಗಾಗಿ ಚಿಕಿತ್ಸೆ ಪಡೆದಿದ್ದಾರೆ. ಇದೀಗ 10 ತಿಂಗಳ ಶಸ್ತ್ರಚಿಕಿತ್ಸೆಯ ನಂತರ ಹುಡುಗಿಯಾಗಿ ರೂಪಾಂತರಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ ಇದಕ್ಕಾಗಿ ನನ್ನ ಕ್ರಿಕೆಟ್ ಕೆರಿಯರ್ ಅನ್ನು ತ್ಯಾಗ ಮಾಡಿರುವುದಾಗಿ ಅನಯಾ ಹೇಳಿದ್ದಾರೆ.