ಮುಂಬಯಿ: ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡು ಟೀಕೆಗೆ ಗುರಿಯಾಗಿರುವ ವಿರಾಟ್ ಕೊಹ್ಲಿಗೆ(Virat Kohli) ಮಾಜಿ ಆಟಗಾರ ದಿನೇಶ್ ಕಾರ್ತಿಕ್(Dinesh Karthik) ಅಮೂಲ್ಯ ಸಲಹೆಯೊಂದನ್ನು ನೀಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ(Domestic Cricket ) ಆಡಿದರೆ ಕೊಹ್ಲಿ ಮತ್ತೆ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಬಹುದು ಎಂದು ಹೇಳಿದ್ದಾರೆ.
ಕ್ರಿಕ್‌ಬಜ್ ಸಂದರ್ಶನದಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ರನ್ ಗಳಿಸಲು ಪರದಾಟ ನಡೆಸುತ್ತಿದ್ದಾರೆ. ಅಲ್ಲದೆ ಕಿವೀಸ್ ಸರಣಿ ಕೂಡ ಅವರಿಗೆ ಕೆಟ್ಟ ಅನುಭವ ನೀಡಿದೆ. ಕಳೆದ 4 ಇನಿಂಗ್ಸ್‌ನಲ್ಲಿ ಮೂರು ಪಂದ್ಯಗಳಲ್ಲಿ ಸ್ಪಿನ್ನರ್‌ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಲಯ ಕಂಡುಕೊಳ್ಳಬೇಕಿದ್ದರೆ, ರಣಜಿ ಸೇರಿದಂತೆ ಹಲವು ದೇಶಿ ಕ್ರಿಕೆಟ್‌ಗಳಲ್ಲಿ ಆಡಬೇಕು ಎಂದು ಸಲಹೆ ನೀಡಿದ್ದಾರೆ.
ಭಾರತ ತವರಿನಲ್ಲೇ ವೈಟ್ವಾಶ್ ಮುಖಭಂಗ ಎದುರಾಗುವುದನ್ನು ತಪ್ಪಿಸಲು ಮುಂಬೈನಲ್ಲಿ ಸುಧಾರಿತ ನಿರ್ವಹಣೆ ತೋರಬೇಕಾಗಿದೆ. ಅಲ್ಲದೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಸತತ 3ನೇ ಬಾರಿ ಫೈನಲ್ಗೇರುವ ಆಸೆಯನ್ನು ಜೀವಂತವಿರಿಸಲು ಭಾರತಕ್ಕೆ ಗೆಲುವಿನ ಅನಿವಾರ್ಯತೆ ಇದೆ. ಭಾರತ ತಂಡದ ಆಟಗಾರರು ಈಗಾಗಲೇ ಮುಂಬೈ ತಲುಪಿದ್ದು ಅಭ್ಯಾಸ ಆರಂಭಿಸಿದ್ದಾರೆ.
ರೋಹಿತ್ ಶರ್ಮ ಕೂಡ 23 ಇನಿಂಗ್ಸ್ಗಳಲ್ಲಿ 18 ಬಾರಿ ಸ್ಪಿನ್ನರ್‌ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಹ್ಲಿ ಜತೆಗೆ ರೋಹಿತ್ ಕೂಡ ದೇಶಿಯ ಕ್ರಿಕೆಟ್ ಆಡಿದರೆ ಉತ್ತಮ ಎನ್ನುವುದು ಮಾಜಿ ಆಟಗಾರರ ಸಲಹೆ. ಒಂದು ವೇಳೆ ಭಾರತ ತಂಡ ಸತತ 3ನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್ಗೇರಿದರೂ, ರೋಹಿತ್ ಶರ್ಮ ಮುಂದಿನ ಡಬ್ಲ್ಯುಟಿಸಿ ಆವೃತ್ತಿಗೆ ಅಂದರೆ 2027ರವರೆಗೆ ಟೆಸ್ಟ್ ತಂಡದ ನಾಯಕರಾಗಿ ಮುಂದುವರಿಯುವುದು ಅನುಮಾನವೆನಿಸಿದೆ.
ಇದನ್ನೂ ಓದಿ IND vs NZ: ಮೂರನೇ ಪಂದ್ಯಕ್ಕೂ ವಿಲಿಯಮ್ಸನ್ ಅಲಭ್ಯ
ಕೊಹ್ಲಿಯ ಕೊನೆಯ 12 ಇನ್ನಿಂಗ್ಸ್
17 ರನ್ (40 ಎಸೆತಗಳು) vs ನ್ಯೂಜಿಲೆಂಡ್, ಪುಣೆ
1 (9) vs ನ್ಯೂಜಿಲೆಂಡ್, ಪುಣೆ
70 (102) vs ನ್ಯೂಜಿಲೆಂಡ್, ಬೆಂಗಳೂರು
0 (9) vs ನ್ಯೂಜಿಲೆಂಡ್, ಬೆಂಗಳೂರು
29 (37)* vs ಬಾಂಗ್ಲಾದೇಶ, ಕಾನ್ಪುರ
47 (35) vs ಬಾಂಗ್ಲಾದೇಶ, ಕಾನ್ಪುರ
17 (37) vs ಬಾಂಗ್ಲಾದೇಶ, ಚೆನ್ನೈ
6 (6) vs ಬಾಂಗ್ಲಾದೇಶ, ಚೆನ್ನೈ
12 (11) vs ದಕ್ಷಿಣ ಆಫ್ರಿಕಾ, ಕೇಪ್ ಟೌನ್
46 (59) vs ದಕ್ಷಿಣ ಆಫ್ರಿಕಾ, ಕೇಪ್ ಟೌನ್
76 (82) vs ದಕ್ಷಿಣ ಆಫ್ರಿಕಾ, ಜೋಹಾನ್ಸ್‌ಬರ್ಗ್
38 (64) vs ದಕ್ಷಿಣ ಆಫ್ರಿಕಾ, ಜೋಹಾನ್ಸ್‌ಬರ್ಗ್