ಮುಂಬೈ: ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವ ತ್ಯಜಿಸುವುದಾಗಿ ಘೋಷಿಸಿದ್ದು, ಈ ಕುರಿತು ಟ್ವೀಟ್ ಮಾಡಿದ್ದಾರೆ.
ಯುಎಇ ಮತ್ತು ಒಮನ್ʼನಲ್ಲಿ ನಡೆಯಲಿರುವ 2021 ರ ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಭಾರತೀಯ ಪುರುಷರ ಟಿ20 ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಆದಾಗ್ಯೂ ಟೆಸ್ಟ್ ಮತ್ತು ಏಕದಿನ ಪಂದ್ಯ ಗಳಲ್ಲಿ ಭಾರತವನ್ನು ಮುನ್ನಡೆಸುವುದನ್ನು ಮುಂದುವರಿಸಲಿದ್ದಾರೆ.
ಈ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದು, ಭವಿಷ್ಯದ ಮಾರ್ಗಸೂಚಿಯನ್ನು ಗಮನ ದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ‘ವಿರಾಟ್ ಭಾರತೀಯ ಕ್ರಿಕೆಟ್ ಗೆ ನಿಜವಾದ ಆಸ್ತಿಯಾಗಿದ್ದಾರೆ ಮತ್ತು ಉತ್ಸಾಹದಿಂದ ಮುನ್ನಡೆದಿ ದ್ದಾರೆ. ಅವರು ಎಲ್ಲಾ ಸ್ವರೂಪಗಳಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು’ ಎಂದು ಸೌರವ್ ಗಂಗೂಲಿ ಹೇಳಿದರು.
ಮುಂಬರುವ ವಿಶ್ವಕಪ್ ಮತ್ತು ಅದರಾಚೆಗೆ ನಾವು ಅವರಿಗೆ ಶುಭ ಹಾರೈಸುತ್ತೇವೆ ಮತ್ತು ಅವರು ಭಾರತದ ಪರ ಸಾಕಷ್ಟು ರನ್ ಗಳಿಸುವುದನ್ನು ಮುಂದು ವರಿಸುತ್ತಾರೆ ಎಂದು ಆಶಿಸುತ್ತೇವೆ’ ಎಂದು ಗಂಗೂಲಿ ಹೇಳಿ ದರು. ಮುಖ್ಯ ತರಬೇತುದಾರ ರವಿಶಾಸ್ತ್ರಿ, ಅವರ ಉತ್ತರಾಧಿಕಾರಿ ರೋಹಿತ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಶಾ ಅವರನ್ನು ಸಂಪರ್ಕಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.