ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಭಾರತದ ಎರಡನೇ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಯುವ ಅಭಿಮಾನಿಗಳಿಗೆ ಆಟೋಗ್ರಾಫ್‌ಗಳನ್ನ ನಿಡಿದರು. 35 ವರ್ಷದ ಅವರು ತಮ್ಮ ಇಬ್ಬರು ಕಟ್ಟಾ ಅಭಿಮಾನಿಗಳ ಬ್ಯಾಟ್‌ಗೆ ಸಹಿ ಹಾಕಿದರು ಮತ್ತು ಅವರ ಮುಖದಲ್ಲಿ ನಗುವನ್ನು ತಂದರು. ವೀಡಿಯೊದಲ್ಲಿ ಅವರು ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವುದನ್ನು ಕೇಳಬಹುದು.
A lucky little fan got an autograph of Virat Kohli in his bat 😍❤️
— Virat Kohli Fan Club (@Trend_VKohli) October 23, 2024
– Dream Come True Moment for a Little Fan. pic.twitter.com/kbz68r6KRH
ಬೆಂಗಾಳಿ ಮಾತನಾಡಿದ ವಿರಾಟ್ ಕೊಹ್ಲಿ; ವಿಡಿಯೊ ವೈರಲ್
ಕಾನ್ಪುರದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಅಂತರದಿಂದ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಸಾಧನೆಗೈದಿತ್ತು. ಈ ಪಂದ್ಯದ ಬಳಿಕ ಬಾಂಗ್ಲಾದೇಶದ ಸ್ಪಿನ್ನರ್ ಮೆಹಿದಿ ಹಸನ್ ಮಿರಾಜ್(Mehidy Hasan Miraz) ಅವರು ವಿರಾಟ್ ಕೊಹ್ಲಿಗೆ(Virat Kohli) ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವೇಳೆ ಕೊಹ್ಲಿ ಬೆಂಗಾಳಿಯಲ್ಲಿ(Kohli Speaks Bengali) ಮಾತನಾಡಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಮೆಹಿದಿ ಹಸನ್ ಅವರು ತಮ್ಮದೇ ಕಂಪನಿಯಲ್ಲಿ ತಯಾರಾದ ಬ್ಯಾಟ್ ಅನ್ನು ತಮ್ಮ ನೆಚ್ಚಿನ ಆಟಗಾರನಾದ ಕೊಹ್ಲಿಗೆ ಉಡುಗೊರೆಯಾಗಿ ನೀಡಿದರು. ಬ್ಯಾಟ್ ಸ್ವೀಕರಿಸಿದ ವಿರಾಟ್ ಕೊಹ್ಲಿ ಬೆಂಗಾಲಿಯಲ್ಲಿ ಪ್ರತಿಕ್ರಿಯಿಸಿದರು. “ಖೂಬ್ ಭಲೋ ಆಚಿ (ಇದು ತುಂಬಾ ಚೆನ್ನಾಗಿದೆ)” ಎಂದು ಮಿರಾಜ್ ಅವರಿಗೆ ಬ್ಯಾಟ್ ನೀಡಿದ್ದಕ್ಕೆ ನಗುನಗುತ್ತಾ ಕೊಹ್ಲಿ ಧನ್ಯವಾದ ತಿಳಿಸಿದರು. ಇದೇ ವೇಳೆ ಕೊಹ್ಲಿ “ವಿಶ್ ಯು ಆಲ್ ದಿ ಬೆಸ್ಟ್. ಒಳ್ಳೆ ಕೆಲಸವನ್ನು ಮುಂದುವರಿಸಿ ಎಂದು ಕೊಹ್ಲಿ ಸಲಹೆ ನೀಡಿದರು. ಈ ಹಿಂದೆ ರೋಹಿತ್ ಶರ್ಮ ಅವರಿಗೂ ಮೆಹಿದಿ ಹಸನ್ ಬ್ಯಾಟ್ ಗಿಫ್ಟ್ ನೀಡಿದ್ದರು.
ಇದನ್ನೂ ಓದಿ: R Ashwin : ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ಆರ್. ಅಶ್ವಿನ್
“ನನಗೆ ಮೆಹಿದಿ ಬಹಳ ಹಿಂದಿನಿಂದಲೂ ಗೊತ್ತು. ಆತ ಪ್ರತಿಭಾನ್ವಿತ ಕ್ರಿಕೆಟಿಗ. ಅವರು ತಮ್ಮ ಸ್ನೇಹಿತರ ಜತೆಗೆ ಸೇರಿಕೊಂಡು ತನ್ನದೇ ಆದ ಬ್ಯಾಟ್ ಕಂಪನಿಯನ್ನು ಪ್ರಾರಂಭಿಸಿದ್ದಕ್ಕಾಗಿ ನಾನು ಆತನ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ. ಅವರಿಗೆ ಶುಭ ಹಾರೈಸುತ್ತೇನೆ. ದೇವರು ಇನ್ನಷ್ಟು ಯಶಸ್ಸು ಮತ್ತು ಈ ಕಂಪನಿ ವಿಶ್ವದೆಲ್ಲೆಡೆ ಖ್ಯಾತಿ ಪಡೆಯಲಿ” ಎಂದು ವಿರಾಟ್ ಹಾರೈಸಿದರು.