ನವದೆಹಲಿ: 2024-25ನೇ ರಣಜಿ ಟ್ರೋಫಿ(Ranji Trophy) ಆವೃತ್ತಿಗಾಗಿ ಡೆಲ್ಲಿ ಕ್ರಿಕೆಟ್ ಮಂಡಳಿ ಸಂಭಾವ್ಯ ತಂಡವನ್ನು ಪ್ರಕಟಿಸಿದೆ. ಅಚ್ಚರಿ ಎಂದರೆ ಈ ತಂಡದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯ(Virat Kohli) ಹೆಸರು ಕೂಡ ಕಾಣಿಸಿಕೊಂಡಿದೆ. ಟೆಸ್ಟ್‌ನಲ್ಲಿ ಬ್ಯಾಟಿಂಗ್ ಪಾರ್ಮ್ ಕಳೆದುಕೊಂಡಿರುವ ಕೊಹ್ಲಿ ಮತ್ತೆ ಬ್ಯಾಟಿಂಗ್ ಲಯಕ್ಕೆ ಮರಳುವ ನಿಟ್ಟಿನಲ್ಲಿ ರಣಜಿ ಆಡುವ ಸಾಧ್ಯತೆಯೂ ಕಂಡು ಬಂದಿದೆ. ಒಂದೊಮ್ಮೆ ಕೊಹ್ಲಿ ಡೆಲ್ಲಿ ಪರ ಆಡಿದರೆ, 12 ವರ್ಷಗಳ ಬಳಿಕ ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿದಂತಾಗುತ್ತದೆ.
ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಡೆಲ್ಲಿ ಪರ ರಣಜಿ ಆಡಿದ್ದು 2012-13ರ ಆವೃತ್ತಿಯಲ್ಲಿ. ಅದು ಉತ್ತರ ಪ್ರದೇಶ ವಿರುದ್ಧದ ಪಂದ್ಯವಾಗಿತ್ತು. ಮೊದಲ ಇನಿಂಗ್ಸ್‌ನಲ್ಲಿ 14 ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ 42 ರನ್ ಬಾರಿಸಿ ಎರಡೂ ಇನಿಂಗ್ಸ್‌ನಲ್ಲಿಯೂ ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದ್ದರು. ಇದಾದ ಬಳಿಕ ಅವರು ಆಡಿಲ್ಲ. ಇದೀಗ 12 ವರ್ಷಗಳ ಬಳಿಕ ಮತ್ತೆ ರಣಜಿ ಆಡಲಿದ್ದಾರಾ ಎಂದು ಕಾದು ನೋಡಬೇಕಿದೆ. ವಿರಾಟ್ ಕೊಹ್ಲಿ ಜತೆ ರಿಷಭ್ ಪಂತ್ ಕೂಡ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೊಹ್ಲಿ 146 ಪ್ರಥಮ ದರ್ಜೆ ಪಂದ್ಯಗಳಿಂದ 49.86 ಸರಾಸರಿಯಲ್ಲಿ 11,120 ರನ್ ಗಳಿಸಿದ್ದಾರೆ. 36 ಶತಕಗಳು ಮತ್ತು 38 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಜೇಯ 254 ರನ್ ಅವರ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ.
ವಿರಾಟ್ ಈ ವರ್ಷ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಕಳಪೆ ಫಾರ್ಮ್ ಹೊಂದಿದ್ದಾರೆ. ಈ ವರ್ಷ 15 ಪಂದ್ಯಗಳು ಮತ್ತು 17 ಇನ್ನಿಂಗ್ಸ್‌ಗಳಲ್ಲಿ, ಅವರು 18.76 ರ ಸರಾಸರಿಯಲ್ಲಿ ಕೇವಲ 319 ರನ್‌ಗಳನ್ನು ಗಳಿಸಿದ್ದಾರೆ. ಕೇವಲ ಒಂದು ಅರ್ಧ ಶತಕ ಮಾತ್ರ ಬಾರಿಸಿದ್ದಾರೆ. ಇದು ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ T20 ವಿಶ್ವಕಪ್ ಫೈನಲ್‌ನಲ್ಲಿ ದಾಖಲಾಗಿತ್ತು. ಈ ಪಂದ್ಯದಲ್ಲಿ ಕೊಹ್ಲಿ 76 ರನ್ ಬಾರಿಸಿದ್ದರು. ಪ್ರಸಕ್ತ ಸಾಗುತ್ತಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಒಂದ್ಯದ ಎಡರೂ ಇನಿಂಗ್ಸ್‌ನಲ್ಲಿ ಕೊಹ್ಲಿ ವಿಫಲರಾಗಿದ್ದರು. ಕ್ರಮವಾಗಿ 6 ಮತ್ತು 17 ರನ್‌ಗೆ ವಿಕೆಟ್ ಒಪ್ಪಿಸಿದ್ದರು.
ಇದನ್ನೂ ಓದಿ Virat kohli : ಕೊಹ್ಲಿ ಕೊಟ್ಟ ಬ್ಯಾಟ್‌ನಲ್ಲಿ ನಾನು ಆಡುವುದಿಲ್ಲ; ಆಕಾಶ್ ದೀಪ್ ಈ ರೀತಿ ಹೇಳಿದ್ದು ಯಾಕೆ?
ಡೆಲ್ಲಿ ಸಂಭಾವ್ಯ ತಂಡ
ವಿರಾಟ್ ಕೊಹ್ಲಿ, ರಿಷಭ್ ಪಂತ್, ಹಿಮ್ಮತ್ ಸಿಂಗ್, ಪ್ರಾಂಶು ವಿಜಯನ್, ಅನಿರುದ್ಧ್ ಚೌಧರಿ, ಕ್ಷಿತಿಜ್ ಶರ್ಮಾ, ವೈಭವ್ ಕಂಡ್ಪಾಲ್, ಸಿದ್ಧಾಂತ್ ಬನ್ಸಾಲ್, ಸಮರ್ಥ್ ಸೇಠ್, ಜಾಂಟಿ ಸಿಧು, ಸಿದ್ಧಾಂತ್ ಶರ್ಮಾ, ಟಿಶಾಂತ್ ಶರ್ಮಾ ಸೈನಿ, ಹರ್ಷ್ ತ್ಯಾಗಿ, ಲಕ್ಷ್ಯ ತರೇಜಾ (WK), ಸುಮಿತ್ ಮಾಥುರ್, ಶಿವಾಂಕ್ ವಶಿಷ್ಠ, ಸಲಿಲ್ ಮಲ್ಹೋತ್ರಾ, ಆಯುಷ್ ಬಡೋನಿ, ಗಗನ್ ವಾಟ್ಸ್, ರಾಹುಲ್ ಎಸ್.ಡಾಗರ್, ಹೃತಿಕ್ ಶೌಕೀನ್, ಮಯಾಂಕ್ ರಾವತ್, ಅನುಜ್ ರಾವತ್(wk), ಸಿಮರ್ಜೀತ್ ಸಿಂಗ್, ಶಿವಂ ಕುಮಾರ್ ತ್ರಿಪಾಠಿ, ಕುಲ್ದೀಪ್ ತ್ರಿಪಾಠಿ ಯಾದವ್, ಲಲಿತ್ ಯಾದವ್, ಪ್ರಿನ್ಸ್ ಚೌಧರಿ, ಶಿವಂ ಕಿಶೋರ್ ಕುಮಾರ್, ಶಿವಂ ಗುಪ್ತಾ(wk), ವೈಭವ್ ಶರ್ಮಾ, ಜಿತೇಶ್ ಸಿಂಗ್, ರೋಹಿತ್ ಯಾದವ್, ಸುಮಿತ್ ಕುಮಾರ್, ಅನ್ಮೋಲ್ ಶರ್ಮಾ, ಕೇಶವ್ ದಾಬಾ, ಸನತ್ ಸಾಂಗ್ವಾನ್, ಶುಭಂ ಶರ್ಮಾ(wk), ಆರ್ಯನ್ ಚೌಧರಿ, ಆರ್ಯನ್ ರಾಣಾ , ಭಗವಾನ್ ಸಿಂಗ್, ಪ್ರಣವ್ ರಾಜವಂಶಿ(wk), ಸೌರವ್ ದಾಗರ್, ಮಣಿ ಗ್ರೆವಾಲ್, ಕುನ್ವರ್ ಬಿಧುರಿ, ನಿಖಿಲ್ ಸಂಗ್ವಾನ್, ಪುನೀತ್ ಚಹಾಲ್, ಪ್ರಿಯಾಂಶ್ ಆರ್ಯ, ಯಶ್ ಧುಲ್, ಪ್ರಿನ್ಸ್ ಯಾದವ್, ಹರ್ಷಿತ್ ರಾಣಾ, ಮಯಾಂಕ್ ಯಾದವ್, ಸುಯ್ಯಶ್ ಶರ್ಮಾ, ಅರ್ಪಿತ್ ರಾಣಾ, ದಿವಿಲ್ ಮೆಹ್ರಾ, ದಿವಿಜ್ ಮೆಹ್ರಾ ಸಿಂಗ್, ಹಾರ್ದಿಕ್ ಶರ್ಮಾ, ಹಿಮಾಂಶು ಚೌಹಾಣ್, ಆಯುಷ್ ದೋಸೇಜಾ, ಅಂಕಿತ್ ರಾಜೇಶ್ ಕುಮಾರ್, ಧ್ರುವ ಕೌಶಿಕ್, ಅಂಕುರ್ ಕೌಶಿಕ್, ಕ್ರಿಶ್ ಯಾದವ್, ವಂಶ್ ಬೇಡಿ, ಯಶ್ ಸೆಹ್ರಾವತ್, ವಿಕಾಸ್ ಸೋಲಂಕಿ, ರಾಜೇಶ್ ಶರ್ಮಾ, ತೇಜಸ್ವಿ ದಹಿಯಾ (wk), ರೌನಕ್ ಸಿಂಗ್ ವಘೇಲಾ, ಮನ್‌ಪ್ರೇತ್ ಸಿಂಗ್ ವಘೇಲಾ, , ಆರ್ಯನ್ ಸೆಹ್ರಾವತ್, ಶಿವಂ ಶರ್ಮಾ, ಸಿದ್ಧಾರ್ಥ್ ಶರ್ಮಾ, ಪರ್ವ್ ಸಿಂಗ್ಲಾ, ಯೋಗೇಶ್ ಸಿಂಗ್, ದೀಪೇಶ್ ಬಲ್ಯಾನ್, ಸಾಗರ್ ತನ್ವರ್, ರಿಷಭ್ ರಾಣಾ, ಅಖಿಲ್ ಚೌಧರಿ, ದಿಗ್ವೇಶ್ ರಾಠಿ, ಸಾರ್ಥಕ್ ರಂಜನ್, ಅಜಯ್ ಗುಲಿಯಾ.