Wednesday, 11th December 2024

ವಿರಾಟ್ ಕೊಹ್ಲಿ 25,500 ರನ್: ಹೊಸ ದಾಖಲೆ

ಪೋರ್ಟ್​ ಆಫ್​ ಸ್ಪೇನ್ : ವೆಸ್ಟ್​ಇಂಡೀಸ್ ಮತ್ತು ಭಾರತದ ನಡುವಣ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತದ ವಿರಾಟ್ ಕೊಹ್ಲಿ ಮತ್ತೊಂದು ವಿಕ್ರಮ ಸಾಧಿಸಿದರು.

ದಕ್ಷಿಣ ಆಫ್ರಿಕಾದ ಕಾಲಿಸ್ ಅವರನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸ ದಲ್ಲಿ 25,500 ರನ್​ಗಳನ್ನು ಪೂರೈಸುವ ಮೂಲ ವಿಶ್ಕವದ 5ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಕೊಹ್ಲಿ ತಮ್ಮ ವೃತ್ತಿಜೀವನದ 500ನೇ ಅಂತಾ ರಾಷ್ಟ್ರೀಯ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು ಗಮನಾರ್ಹ.

ವಿರಾಟ್ ಕೊಹ್ಲಿ 161 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ 87 ರನ್ ಗಳಿಸುವ ಮೂಲಕ ಅರ್ಧಶತಕ ಬಾರಿಸಿ, ಕ್ರೀಸ್​ ಕಾಯ್ದು ಕೊಂಡಿದ್ದಾರೆ. ವೈಯಕ್ತಿಕವಾಗಿ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾದರು.

ಪ್ರಸ್ತುತ ವಿರಾಟ್​ ಕೊಹ್ಲಿ 500 ಪಂದ್ಯಗಳಲ್ಲಿ 53.67 ಸರಾಸರಿಯೊಂದಿಗೆ 25,548 ರನ್​ ಗಳಿಸಿದ್ದಾರೆ. ಈ ಪೈಕಿ 75 ಶತಕ ಮತ್ತು 132 ಅರ್ಧ ಶತಕಗಳು ಸೇರಿವೆ. 254 ರನ್ ಇವರ ಅತ್ಯುತ್ತಮ ಸ್ಕೋರ್ ಆಗಿದೆ. ಈ ಮೂಲಕ 519 ಪಂದ್ಯಗಳಲ್ಲಿ 62 ಶತಕ ಮತ್ತು 149 ಅರ್ಧಶತಕಗಳೊಂದಿಗೆ 25,534 ರನ್ ಗಳಿಸಿದ ಕಾಲಿಸ್ ಅವರ ದಾಖಲೆಯನ್ನು ಕೊಹ್ಲಿ ಬ್ರೇಕ್ ಮಾಡಿದ್ದಾರೆ.

ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಶ್ರೀಲಂಕಾದ ಮಹೇಲಾ ಜಯವರ್ಧನೆ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, ಕುಮಾರ ಸಂಗಕ್ಕಾರ ಕೊಹ್ಲಿಗಿಂತ ಮುಂದಿದ್ದಾರೆ.