Sunday, 15th December 2024

ಸಾಮಾಜಿಕ ಜಾಲತಾಣದಲ್ಲೂ ಕೊಹ್ಲಿಗೆ ಕೋಟಿ ಹಣ ಸಂಪಾದನೆ..!

ನವದೆಹಲಿ: ಭಾರತ ತಂಡದ ವಿರಾಟ್‌ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಒಂದು ಪೋಸ್ಟ್‌ ಗೆ ಎಷ್ಟು ಸಂಪಾದಿಸುತ್ತಾರೆ ಎಂದು ತಿಳಿದರೆ ಆಶ್ವರ್ಯ ಆಗುವುದರಲ್ಲಿ ಅನುಮಾನವೇ ಇಲ್ಲ,

ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಅದರಲ್ಲೂ ಒಂದು ಇನ್‌ ಸ್ಟಾಗ್ರಾಂ ಪೋಸ್ಟ್‌ ಗೆ ತಾನು ಎಷ್ಟು ಹಣ ಪಡೆಯುತ್ತೇನೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಇನ್‌ ಸ್ಟಾಗ್ರಾಂನಲ್ಲಿ ಒಂದು ಕಮರ್ಷಿಯಲ್‌ ಪೋಸ್ಟ್‌ ಹಾಕಲು ವಿರಾಟ್‌ ಕೊಹ್ಲಿ 14 ಕೋಟಿ ರೂ. ಪಡೆಯು ತ್ತಾರಂತೆ. ಇದು ಒಂದು ಪೋಸ್ಟ್‌ ಗೆ ನೀಡಲಾಗುತ್ತಿರುವ ಅತ್ಯಂತ ಹೆಚ್ಚು ಶುಲ್ಕವಂತೆ! 2023ರಿಂದ ವಿರಾಟ್‌ ಕೊಹ್ಲಿ ಇಷ್ಟು ದೊಡ್ಡ ಮೊತ್ತದ ಪ್ರಾಯೋಜಿತ ಅಂದರೆ ಜಾಹಿರಾತಿಗೆ ಸಂಬಂಧಿಸಿದ ಪೋಸ್ಟ್‌ ಗಳಿಂದ ಹಣ ಪಡೆಯುತ್ತಿದ್ದಾರಂತೆ.

ಒಂದು ಇನ್‌ ಸ್ಟಾಗ್ರಾಂ ಪೋಸ್ಟ್‌ ನಿಂದ ಅತೀ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪೈಕಿ ಕ್ರಿಸ್ಟಿ ಯಾನೊ ರೊನಾಲ್ಡೊ, ಅರ್ಜೆಂಟೀನಾದ ಲಿಯೊನೆಲ್‌ ಮೆಸ್ಸಿ ನಂತರ ವಿರಾಟ್‌ ಕೊಹ್ಲಿ ಮೂರನೇ ಸ್ಥಾನ ದಲ್ಲಿದ್ದಾರೆ.

ಕ್ರಿಸ್ಟಿಯಾನೊ ರೊನಾಲ್ಡೊ ಒಂದು ಪೋಸ್ಟ್‌ ಗೆ 26.75 ಕೋಟಿ ರೂ. ಪಡೆಯುತ್ತಿದ್ದರೆ, ಲಿಯೊನೆಲ್‌ ಮೆಸ್ಸಿ 21.49 ಕೋಟಿ ರೂ. ಗಳಿಸುತ್ತಿದ್ದಾರೆ.

ವಿರಾಟ್‌ ಕೊಹ್ಲಿ ಇನ್‌ ಸ್ಟಾಗ್ರಾಂನಲ್ಲಿ 245 ದಶಲಕ್ಷ ಫಾಲೋವರ್ಸ್‌ ಹೊಂದಿದ್ದು, ಒಂದು ಪೋಸ್ಟ್‌ ಗೆ ಆರಂಭದಲ್ಲಿ 11.46 ಕೋಟಿ ರೂ. ಗಳಿಸುತ್ತಿದ್ದು, ಇದೀಗ 14 ಕೋಟಿಗೆ ಏರಿಕೆಯಾಗಿದೆ.