Sunday, 15th December 2024

‘ಚೇಸ್​ ಮಾಸ್ಟರ್’ ವಿರಾಟ್​ ಕೊಹ್ಲಿ ಜನ್ಮದಿನ ಇಂದು

ವದೆಹಲಿ: ಭಾರತದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಜನ್ಮದಿನ ಇಂದು. 35ನೇ ಹುಟ್ಟಹಬ್ಬ ಆಚರಿಸುತ್ತಿರುವ ವಿರಾಟ್​, ವಿಶ್ವದ ಅಗ್ರಗಣ್ಯ ಕ್ರಿಕೆಟ್​​ ತಾರೆಗಳಲ್ಲಿ ಒಬ್ಬರು.

ಅಪಾರ ಸಂಖ್ಯೆಯ ಅಭಿಮಾನಿಗಳು ಇವರ ಬೆನ್ನಿಗಿದ್ದಾರೆ. ಅದ್ಭುತ ಬ್ಯಾಟಿಂಗ್​ನಿಂದ ಟೀಮ್​ ಇಂಡಿಯಾಗೆ ನೆರವಾಗುವ ಕೊಹ್ಲಿ, ‘ಚೇಸ್​ ಮಾಸ್ಟರ್’​ ಎಂದು ಪ್ರಸಿದ್ಧಿ ಗಳಿಸಿದ್ದಾರೆ.

ವಿರಾಟ್​ ಕೊಹ್ಲಿ ಕ್ರೀಸಿಗೆ ಬಂದರೆಂದರೆ ಸಾಕು ಅಭಿಮಾನಿಗಳ ಉತ್ಸಾಹ ಉತ್ತುಂಗಕ್ಕೇರುತ್ತದೆ. ವಿರಾಟ್​ ಎಂಬ ಹೆಸರು ಮೈದಾನದಲ್ಲೆಲ್ಲಾ ಮಾರ್ದ ನಿಸುತ್ತದೆ. ಅಭಿಮಾನಿಗಳ ಇಂಥ ಉತ್ಸಾಹಕ್ಕೆ ಎದುರಾಳಿ ತಂಡ ಪ್ರಾರಂಭದಲ್ಲೇ ತನ್ನ ಆತ್ಮವಿಶ್ವಾಸ ಕಳೆದುಕೊಳ್ಳುವಂತಾಗುತ್ತದೆ. ಪ್ರತಿ ಪಂದ್ಯಗಳಲ್ಲಿ ಅಗ್ರೆಸ್ಸಿವ್​ ಆಗಿ ಆಡುವ ವಿರಾಟ್​​, ಎದುರಾಳಿ ತಂಡದ ಜಂಘಾಬಲ ಉಡುಗಿಸಬಲ್ಲರು. ಮೈದಾನಕ್ಕಿಳಿದರೆ ಕೊಹ್ಲಿಯನ್ನು ಕಟ್ಟಿ ಹಾಕುವವರಿಲ್ಲ. ಬ್ಯಾಟಿಂಗ್​, ಫೀಲ್ಡಿಂಗ್​ನಲ್ಲೂ ಮ್ಯಾಜಿಕ್​ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಾರೆ. ಇವರ ಸಾಧನೆಗಳ ಮಾತೇ ಹೆಚ್ಚು.

ಇವರ ಹೆಸರು ಮುನ್ನಲೆಗೆ ಬಂದಿದ್ದು 2008ರಲ್ಲಿ ನಡೆದ U19 ವಿಶ್ವಕಪ್​ನಲ್ಲಿ. ಅದೇ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು.