ಕೋಲ್ಕತ್ತ: ಭಾರತ ಕ್ರಿಕೆಟ್ ತಂಡದ ಕ್ರಿಕೆಟಿಗ ವಿರಾಟ್ ಕೊಹ್ಲಿ ನವೆಂಬರ್ 5ರಂದು 35ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಂದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯ ಆಡಲಿದೆ.
ಈ ಪಂದ್ಯದ ಸಂದರ್ಭ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರಿಗೆ ಚಿಯರ್ ಮಾಡಲು ಮೈದಾನಕ್ಕೆ ಬರುವ 70,000 ಅಭಿಮಾನಿಗಳಿಗೆ ಉಚಿತವಾಗಿ ‘ವಿರಾಟ್ ಕೊಹ್ಲಿ ಮಾಸ್ಕ್’ವಿತರಿಸಲು ನಿರ್ಧರಿಸಲಾಗಿದೆ.
ಕೊಹ್ಲಿ ಅವರ ಕುಟ್ಟುಹಬ್ಬವನ್ನು ಸ್ಮರಣೀಯಗೊಳಿಸುವ ಉದ್ದೆಶದಿಂದ ಪಶ್ಚಿಮ ಬಂಗಾಳ ಕ್ರಿಕೆಟ್ ಮಂಡಳಿಯು(ಸಿಎಬಿ) ಈ ಯೋಜನೆ ಮಾಡಿ ಕೊಂಡಿದೆ.
ಮಾಸ್ಕ್‌ಗಳ ವಿತರಣೆ ಜೊತೆಗೆ ಪಂದ್ಯ ಆರಂಭಕ್ಕೂ ಮುನ್ನ, ಕೇಕ್ ಕತ್ತರಿಸುವ ಮತ್ತು ಮೆಮೆಂಟೊ ವಿತರಣೆ ಕಾರ್ಯಕ್ರಮವನ್ನೂ ಸಿಎಬಿ ಹಮ್ಮಿ ಕೊಂಡಿದೆ.
ವಿರಾಟ್ ಕೊಹ್ಲಿಗೆ ಈ ದಿನವನ್ನು ಅವಿಸ್ಮರಣೀಯಗೊಳಿಸಲು ನಾವು ಇಚ್ಛಿಸುತ್ತೇವೆ ಎಂದು ಸಿಎಬಿ ಅಧ್ಯಕ್ಷ ಸ್ನೇಹಸಿಶ್ ಗಂಗೂಲಿ ಹೇಳಿದ್ದಾರೆ.
ನವೆಂಬರ್ 2013ರಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ 199ನೇ ಟೆಸ್ಟ್ ಪಂದ್ಯ ಆಡಿದಾಗಲೂ ಈಡನ್ ಗಾರ್ಡನ್‌ನಲ್ಲಿ ಇದೇ ರೀತಿಯ ವಾತಾರಣವಿತ್ತು