Saturday, 23rd November 2024

ನ್ಯೂಜಿಲೆಂಡ್ ಎದುರು ದಾಖಲೆ ನಿರ್ಮಿಸಲು ಕೊಹ್ಲಿಗಿದೆ ಅವಕಾಶ

ದುಬೈ: ಟಿ20 ಕ್ರಿಕೆಟ್​ನಲ್ಲಿ ಕೊಹ್ಲಿ ನಾಯಕನಾಗಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತನ್ನ ಖಾತೆಗೆ ಮತ್ತೆ ಸೇರಿಸಲು ತುದಿ ಗಾಲಿನಲ್ಲಿ ನಿಂತಿದ್ದಾರೆ.

ಐಸಿಸಿ ಟಿ-20 ವಿಶ್ವಕಪ್​​ನ ಗ್ರೂಪ್​ 2ರಲ್ಲಿಂದು ಹೈವೋಲ್ಟೇಜ್ ಕದನ ನಡೆಯ ಲಿದೆ. ವಿಶ್ವ ಕ್ರಿಕೆಟ್​ನ ಬಲಿಷ್ಠ ತಂಡಗಳಾದ ಭಾರತ ಹಾಗೂ ನ್ಯೂಜಿಲೆಂಡ್  ಮುಖಾಮುಖಿಯಾಗುತ್ತಿವೆ. ಸೆಮಿಫೈನಲ್​ ಹಾದಿ ಸುಗಮಗೊಳಿಸುವ ಉದ್ದೇಶ ದಿಂದ ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ. ಎರಡು ತಂಡಗಳು ಪಾಕ್  ವಿರುದ್ಧ ಆಡಿರುವ ಪಂದ್ಯದಲ್ಲಿ ಸೋಲು ಕಂಡಿದ್ದರಿಂದ ಗೆಲುವಿನ ಖಾತೆ ತೆರೆಯುವ ಪ್ಲಾನ್​ನಲ್ಲಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ.

ಕೊಹ್ಲಿ ನಾಯಕನಾಗಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತನ್ನ ಖಾತೆಗೆ ಮತ್ತೆ ಸೇರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಸದ್ಯ ಪಾಕ್ ನಾಯಕ ಬಾಬರ್ ಅಜಾಮ್ ಅವರಿದ್ದು, ಇವರು 26 ಟಿ20 ಇನ್ನಿಂಗ್ಸ್​ಗಳಲ್ಲಿ 13 ಹಾಫ್ ಸೆಂಚುರಿ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ 44 ಇನ್ನಿಂಗ್ಸ್​ಗಳಲ್ಲಿ 13 ಅರ್ಧಶತಕ ಬಾರಿಸಿದ್ದಾರೆ.

ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್​ನಲ್ಲಿ 100 ಸಿಕ್ಸರ್ ಸಿಡಿಸುವ ಸನಿಹದಲ್ಲಿ ದ್ದಾರೆ. ಟೀಮ್ ಇಂಡಿಯಾ ನಾಯಕ ಖಾತೆಯಲ್ಲಿ ಸದ್ಯ 91 ಸಿಕ್ಸರ್​ಗಳಿವೆ. ಕೊಹ್ಲಿ ಸಿಕ್ಸರ್​ಗಳ ಸಂಖ್ಯೆ ಮೂರಂಕಿ ದಾಟಿದರೆ ಮಾರ್ಟಿನ್ ಗಪ್ಟಿಲ್, ರೋಹಿತ್ ಶರ್ಮಾ, ಕ್ರಿಸ್ ಗೇಲ್, ಇಯಾನ್ ಮಾರ್ಗನ್ ಜೊತೆ ಸ್ಥಾನ ಹಂಚಿಕೊಳ್ಳಲಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡ ಇದುವರೆಗೂ ನ್ಯೂಜಿಲೆಂಡ್ ಎದುರು ಗೆದ್ದಿಲ್ಲ.