Sunday, 15th December 2024

ಕಾಮನ್‌ವೆಲ್ತ್ ಗೇಮ್ಸ್‌ ವೀರರಿಗೆ ಅದ್ಧೂರಿ ಸ್ವಾಗತ

ನವದೆಹಲಿ: ಭಾರತದ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಪೂಜಾ ಸಿಹಾಗ್ ಮತ್ತು ಪೂಜಾ ಗೆಹ್ಲೋಟ್ ಅವರು ಪ್ರಶಸ್ತಿಗಳ ಸಮೇತ ಮಂಗಳವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಅವರ ಸಂಬಂಧಿಕರುಗಳು ಸೇರಿದಂತೆ ಅನೇಕರು ಅದ್ಧೂರಿ ಸ್ವಾಗತ ಕೋರಿದ್ದಾರೆ.

ಯುವ ಕುಸ್ತಿಪಟು ಹಾಗೂ ಕಂಚಿನ ಪದಕ ವಿಜೇತೆ ಪೂಜಾ ಸಿಹಾಗ್ ಅವರು ತಮ್ಮ ಪದಕದ ಶ್ರೇಯವನ್ನು ಕೋಚ್‌ಗೆ ನೀಡಿ, ಪದಕದೊಂದಿಗೆ ಮರಳಿ ಮನೆಗೆ ಬಂದಿರುವುದು ಸಂತಸ ತಂದಿದೆ. ನನ್ನ ಕೋಚ್‌ಗೆ ಕ್ರೆಡಿಟ್ ನೀಡಲು ಬಯಸು ತ್ತೇನೆ’ ಎಂದು ಹೇಳಿದರು.

ಕಂಚಿನ ಪದಕ ವಿಜೇತೆ ಪೂಜಾ ಗೆಹ್ಲೋಟ್ ಅವರು ತಮ್ಮ ಸಂತೋಷದ ಭಾವನೆಗಳನ್ನು ವ್ಯಕ್ತಪಡಿಸಿದ್ದು, ದೇಶದ ಜನರಿಗೆ  ಧನ್ಯವಾದ ಹೇಳಿದರು. ‘ದೇಶಕ್ಕಾಗಿ ಪದಕ ಗೆಲ್ಲುವುದು ಭಾವನೆಯಾಗಿದೆ. ನಾನು ಪ್ರತಿಯೊಬ್ಬ ಭಾರತೀ ಯನಿಗೂ ಮನ್ನಣೆ ನೀಡುತ್ತೇನೆ’ ಎಂದು ಹೇಳಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತ 22 ಚಿನ್ನ, 15 ಬೆಳ್ಳಿ ಮತ್ತು 23 ಕಂಚಿನ ಪದಕಗಳೊಂದಿಗೆ ಒಟ್ಟು 61 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಗಳಿಸಿತು.