ಬ್ರಿಸ್ಬೇನ್:
ಡೇವಿಡ್ ವಾರ್ನರ್ (ಔಟಾಗದೆ 151 ರನ್) ಹಾಗೂ ಜೋ ಬರ್ನ್‌ಸ್ (97 ರನ್) ಅವರ ಅಮೋಘ ಬ್ಯಾಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡ ಮೊದಲನೇ ಟೆಸ್‌ಟ್ ಪಂದ್ಯದ ಪ್ರಥಮ ಇನಿಂಗ್‌ಸ್ ನಲ್ಲಿ ಪಾಕಿಸ್ತಾಾನ ವಿರುದ್ಧ 72 ರನ್ ಮುನ್ನಡೆ ಸಾಧಿಸಿದೆ.
ಶುಕ್ರವಾರ ಪ್ರಥಮ ಇನಿಂಗ್‌ಸ್ ಆರಂಭಿಸಿದ ಆಸ್ಟ್ರೇಲಿಯಾ, ಎರಡನೇ ದಿನದಾಟ ಮುಕ್ತಾಾಯಕ್ಕೆೆ 87 ಓವರ್ ಗಳಿಗೆ ಒಂದು ವಿಕೆಟ್ ನಷ್ಟಕ್ಕೆೆ 312 ರನ್ ಗಳಿಸಿದೆ. ಆ ಮೂಲಕ 72 ರನ್ ಮುನ್ನಡೆ ಸಂಪಾದಿಸಿದೆ.
ಆ್ಯಷಸ್ ಟೆಸ್‌ಟ್ ಸರಣಿಯಲ್ಲಿ ಬ್ಯಾಾಟಿಂಗ್ ವೈಫಲ್ಯ ಅನುಭವಿಸಿದ್ದ ಡೇವಿಡ್ ವಾರ್ನರ್ ಪಾಕಿಸ್ತಾಾನ ವಿರುದ್ಧ ಮೊದಲನೇ ಟೆಸ್‌ಟ್ ಪಂದ್ಯದಲ್ಲಿ ವೃತ್ತಿಿ ಜೀವನದ 21 ಶತಕ ಪೂರೈಸಿದರು. 265 ಎಸೆತಗಳನ್ನು ಎದುರಿಸಿದ ಅವರು 10 ಬೌಂಡರಿಯೊಂದಿಗೆ 151 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾಾರೆ. ಇವರ ಇನಿಂಗ್‌ಸ್ ನಲ್ಲಿ 10 ಬೌಂಡರಿಗಳಿದ್ದವು. ವಾರ್ನರ್ ಜತೆ ಮತ್ತೊೊಂದು ತುದಿಯಲ್ಲಿ ಅದ್ಭುತ ಬ್ಯಾಾಟಿಂಗ್ ಮಾಡಿದ ಜೋ ಬರ್ನ್‌ಸ್ 166 ಎಸೆತಗಳಲ್ಲಿ 10 ಬೌಂಡರಿಯೊಂದಿಗೆ 97 ರನ್ ಗಳಿಸಿದರು. ಕೇವಲ ಮೂರು ರನ್ ಗಳಿಂದ ಶತಕ ವಂಚಿತರಾದರು. ವಾರ್ನರ್ ಹಾಗೂ ಜೋ ಬರ್ನ್‌ಸ್ ಅವರು ಮುರಿಯದ ಮೊದಲನೇ ವಿಕೆಟ್‌ಗೆ 222 ರನ್ ಗಳಿಸಿದರು. ಮಾರ್ನಸ್ ಲುಬುಸ್‌ಚಗ್ನೆೆ ಅಜೇಯ 55 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾಾರೆ.
ಸಂಕ್ಷಿಿಪ್ತ ಸ್ಕೋರ್
ಪಾಕಿಸ್ತಾನ
ಪ್ರಥಮ ಇನಿಂಗ್‌ಸ್: 240
ಆಸ್ಟ್ರೇಲಿಯಾ
ಪ್ರಥಮ ಇನಿಂಗ್‌ಸ್: 87 ಓವರ್ ಗಳಿಗೆ 312/1 (ಡೇವಿಡ್ ವಾರ್ನರ್ ಔಟಾಗದೆ 151, ಜೋ ಬರ್ನ್‌ಸ್ 97, ಮಾರ್ನಸ್ ಲಬುಸ್‌ಚಗ್ನೆೆ ಔಟಾಗದೆ 55; ಯಾಸೀರ್ ಶಾ 101 ಕ್ಕೆೆ 1)