Friday, 22nd November 2024

ವಾಷಿಂಗ್ಟನ್‌ಗೆ ಮಿಸ್ಸಾಯ್ತು ಶತಕ: ಮುನ್ನಡೆ ಪಡೆದ ಭಾರತ

ಅಹಮದಾಬಾದ್: ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಉತ್ತಮ ಮುನ್ನಡೆ ಸಾಧಿಸಿದೆ.

ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 365 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಇದರೊಂದಿಗೆ 160 ರನ್ ಗಳ ಬೃಹತ್ ಮುನ್ನಡೆ ಸಾಧಿಸಿದೆ. ಆಲ್ರೌಂಡರ್‌ ವಾಷಿಂಗ್ಟನ್ ಸುಂದರ್ ಶತಕ ವಂಚಿತರಾದರು. ಏಳು ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಆಲ್ ರೌಂಡರ್ ಗಳಾದ ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ನೆರವಾದರು. ಇವರಿಬ್ಬರೂ 106 ರನ್ ಗಳ ಜೊತೆಯಾಟ ನಡೆಸಿದರು. ಅಕ್ಷರ್ ಪಟೇಲ್ 43 ರನ್ ಗಳಸಿ ರನ್ ಔಟಾದರು.

96 ರನ್ ಗಳಿಸಿ ಚೊಚ್ಚಲ ಟೆಸ್ಟ್ ಶತಕದ ಆಸೆಯಲ್ಲಿದ್ದ ವಾಷಿಂಗ್ಟನ್ ಸುಂದರ್ ಗೆ ನಿರಾಸೆಯಾಯಿತು. ಅಕ್ಷರ್ ಪಟೇಲ್ ರನ್ ಔಟ್ ಆದರೆ, ಬೆನ್ನು ಬೆನ್ನಲ್ಲೇ ಇಶಾಂತ್ ಶರ್ಮಾ ಮತ್ತು ಸಿರಾಜ್ ಔಟಾದ ಕಾರಣ ತಂಡ ಆಲ್ ಔಟಾಯಿತು.

ವಾಷಿಂಗ್ಟನ್ ಶತಕ ವಂಚಿತರಾಗಿ ನಿರಾಸೆಯಿಂದ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.