Thursday, 12th December 2024

ಆಂಗ್ಲರ ವಿರುದ್ಧ ಟಿ20 ಸರಣಿಗೆ ವಿಂಡೀಸ್​ ತಂಡ ಪ್ರಕಟ

ಬ್ರಿಡ್ಜ್‌ಟೌನ್: ಹಿರಿಯ ವೇಗದ ಬೌಲಿಂಗ್ ಆಲ್‌ರೌಂಡರ್ ಆಂಡ್ರೆ ರಸೆಲ್ ಅವರು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ವೆಸ್ಟ್ ಇಂಡೀಸ್‌ನ ಟಿ20 ತಂಡಕ್ಕೆ ಮರಳಿದ್ದಾರೆ.

2021ರ ಯುಎಇಯಲ್ಲಿ ನಡೆದ ಪುರುಷರ ಟಿ20 ವಿಶ್ವಕಪ್ ನಂತರ ಮೊದಲ ಬಾರಿಗೆ ರಸೆಲ್ ರಾಷ್ಟ್ರೀಯ ತಂಡದ ಚುಟುಕು ಮಾದರಿಯ ಕ್ರಿಕೆಟ್​​ನಲ್ಲಿ ಆಡುತ್ತಿದ್ದಾರೆ.

ರಸೆಲ್​ ಮಂಗಳವಾರ ಬ್ರಿಡ್ಜ್‌ಟೌನ್‌ನಲ್ಲಿ ನಡೆಯಲಿರುವ ಮೊದಲ ಟಿ20ಗೆ ಮುಂಚಿತವಾಗಿ ವೆಸ್ಟ್ ಇಂಡೀಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. 2024ರ ವಿಶ್ವಕಪ್​​ ತಯಾರಿ ಹಿನ್ನೆಲೆಯಲ್ಲಿ ಇಂಗ್ಲೆಂಡ್​ 5ಟಿ 20 ಪಂದ್ಯಗಳ ಸರಣಿಯನ್ನು ಆಡುತ್ತಿದೆ. ಬಾರ್ಬಡೋಸ್​​ನಲ್ಲಿ 1, ಗ್ರೆನಡಾದಲ್ಲಿ 2 ಮತ್ತು ಟ್ರಿನಿಡಾಡ್​ನಲ್ಲಿ 2 ಟಿ20 ಪಂದ್ಯಗಳು ನಡೆಯಲಿದೆ.

ಎಡಗೈ ಸ್ಪಿನ್ನರ್ ಗುಡಾಕೇಶ್ ಮೋಟಿ, ನಿಕೋಲಸ್ ಪೂರನ್ ಮತ್ತು ಜೇಸನ್ ಹೋಲ್ಡರ್ ಮುಂದುವರೆದಿದ್ದಾರೆ. ರೋವ್‌ಮನ್ ಪೊವೆಲ್‌ ಟಿ20 ನಾಯಕ ರಾದರೆ, ಏಕದಿನ ಕ್ಯಾಪ್ಟನ್​ ಶಾಯ್ ಹೋಪ್ ಉಪನಾಯಕರಾಗಿದ್ದಾರೆ.

ವೆಸ್ಟ್ ಇಂಡೀಸ್ ತಂಡ: ರೋವ್​ಮನ್ ಪೊವೆಲ್ (ನಾಯಕ), ಶಾಯ್ ಹೋಪ್ (ಉಪನಾಯಕ), ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಅಕೆಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಕೇಶ್ ಮೋಟಿ, ನಿಕೋಲಸ್ ಪೂರನ್ ಮತ್ತು , ಶೆರ್ಫೇನ್ ರುದರ್ಫೋರ್ಡ್ ಮತ್ತು ರೊಮಾರಿಯೋ ಶೆಫರ್ಡ್