Monday, 16th September 2024

ಹೆಟ್ಮೈರ್ ಬ್ಯಾಟಿಂಗ್ ಸಾಹಸ: ಸರಣಿ ಸೋಲಿನ ಭೀತಿಯಲ್ಲಿ ಆಸೀಸ್‌

ಸೈಂಟ್ ಲೂಸಿಯಾ: ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾ ವಿರುದ್ಧ ಸವಾರಿ ಮಾಡಿದೆ. ಯುವ ಆಟಗಾರ ಹೆಟ್ಮೈರ್ ಅವರ ಬ್ಯಾಟಿಂಗ್ ಸಾಹಸದಿಂದ ವಿಂಡೀಸ್ ತಂಡ 56 ರನ್ ಅಂತರದಿಂದ ಗೆಲುವು ಸಾಧಿಸಿದೆ.

ವೆಸ್ಟ್ ಇಂಡೀಸ್ ತಂಡ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಲೆಂಡ್ಲ್ ಸಿಮನ್ಸ್ 30 ರನ್ ಗಳಿಸಿದರೆ, ಫ್ಲೆಚರ್ ಮತ್ತು ಗೇಲ್ ಅಗ್ಗಕ್ಕೆ ಔಟಾದರು. ಹೆಟ್ಮೈರ್ 36 ಎಸೆತದಿಂದ 61 ರನ್ ಗಳಿಸಿದರು. ಅನುಭವಿ ಬ್ರಾವೋ 47 ರನ್ ಗಳಿಸಿದರು. ಕೊನೆಯಲ್ಲಿ ರಸ್ಸೆಲ್ ಕೇವಲ ಎಂಟು ಎಸೆತದಲ್ಲಿ 24 ರನ್ ಚಚ್ಚಿದರು.

ದೊಡ್ಡ ಗುರಿ ಬೆನ್ನತ್ತಿದ ಆಸೀಸ್ 19 ರನ್ ಆಗುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಮಿಚೆಲ್ ಮಾರ್ಶ್ 54 ರನ್ ಗಳಿಸಿದರೆ, ಹೆನ್ರಿಕ್ಸ್ 19 ರನ್ ಗಳಿಸಿದರು. ಎಂಟು ಮಂದಿ ಒಂದಂಕಿಗೆ ಔಟಾದರು. 19.2 ಓವರ್ ನಲ್ಲಿ ಆಸೀಸ್ 140 ರನ್ ಗೆ ಆಲ್ ಔಟಾಯಿತು.

ವಿಂಡೀಸ್ ಪರ ಎಂಟು ಮಂದಿ ಬೌಲರ್ ಗಳು ಬೌಲಿಂಗ್ ಮಾಡಿದರು. ಹೇಡನ್ ವಾಲ್ಶ್ ಮೂರು ವಿಕೆಟ್ ಕಿತ್ತರೆ, ಕಾಟ್ರೆಲ್ ಎರಡು ವಿಕೆಟ್ ಪಡೆದರು. ಎಡ್ವರ್ಡ್, ರಸ್ಸೆಲ್, ಬ್ರಾವೋ ಮತ್ತು ಗೇಲ್ ತಲಾ ಒಂದು ವಿಕೆಟ್ ಪಡೆದರು.

Leave a Reply

Your email address will not be published. Required fields are marked *