ಬಾರ್ಬಡೋಸ್: ಬ್ರೆಂಡನ್ ಕಿಂಗ್ (102) ಹಾಗೂ ಕೀಸಿ ಕಾರ್ಟಿ (128 ರನ್) ಅವರ ಶತಕಗಳ ಬಲದಿಂದ ವೆಸ್ಟ್ ಇಂಡೀಸ್ ತಂಡ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು (WI vs ENG) ಆತಿಥೇಯ ವಿಂಡೀಸ್ 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿದೆ.
ಇಲ್ಲಿನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 264 ರನ್‌ಗಳ ಗುರಿಯನ್ನು ಹಿಂಬಾಲಿಸಿದ ವೆಸ್ಟ್ ಇಂಡೀಸ್ ತಂಡ, ಬ್ರೆಂಡನ್ ಕಿಂಗ್ ಹಾಗೂ ಕೀಸಿ ಕಾರ್ಟಿ ಅವರ ಆಕರ್ಷಕ ಶತಕಗಳ ಬಲದಿಂದ 43 ಓವರ್‌ಗಳ ಅಂತ್ಯಕ್ಕೆ ಎರಡು ವಿಕೆಟ್‌ಗಳ ಕಳೆದುಕೊಂಡು 267 ರನ್‌ಗಳನ್ನು ಗಳಿಸಿ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ವಿಂಡೀಸ್ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿ ಶತಕ ಸಿಡಿಸಿದ್ದ ಬ್ರೆಂಡನ್ ಕಿಂಗ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
The 2️⃣nd highest ODI partnership (209) by West Indies in the Caribbean takes the #MenInMaroon to consecutive ODI series wins over England! 👏🏾👏🏾🏆#TheRivalry | #WIvENG pic.twitter.com/Bgf5c6w8tq
— Windies Cricket (@windiescricket) November 7, 2024
ಇಂಗ್ಲೆಂಡ್ ನೀಡಿದ್ದ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ಹಿಂಬಾಲಿಸಿದ ವೆಸ್ಟ್ ಇಂಡೀಸ್ ತಂಡ ಪರ ಇನಿಂಗ್ಸ್ ಆರಂಭಿಸಿದ ಎವಿನ್ ಲೆವಿಸ್ (19) ಬಹುಬೇಗ ವಿಕೆಟ್ ಒಪ್ಪಿಸಿದರು. ಆದರೆ, ಮತ್ತೊಂದು ತುದಿಯಲ್ಲಿ ಇನಿಂಗ್ಸ್ ಆರಂಭಿಸಿದ ಬ್ರೆಂಡನ್ ಕಿಂಗ್ ಹಾಗೂ ಮೂರನೇ ಕ್ರಮಾಕದಲ್ಲಿ ಕ್ರೀಸ್‌ಗೆ ಬಂದಿದ್ದ ಕೀಸಿ ಕಾರ್ಟಿ ಅವರು ಇಂಗ್ಲೆಂಡ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಈ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ 209 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ವೆಸ್ಟ್ ಇಂಡೀಸ್ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿತು.
ಭರ್ಜರಿ ಶತಕಗಳನ್ನು ಸಿಡಿಸಿದ ಕಿಂಗ್-ಕಾರ್ಟಿ
ವೆಸ್ಟ್ ಇಂಡೀಸ್ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಕೀಸಿ ಕಾರ್ಟಿ ಅವರು `114 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್ ಹಾಗೂ 15 ಬೌಂಡರಿಗಳೊಂದಿಗೆ 128 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಒಡಿಐ ಕ್ರಿಕೆಟ್‌ನಲ್ಲಿ ಕೀಸಿ ಕಾರ್ಟಿ ಅವರು ಚೊಚ್ಚಲ ಶತಕವನ್ನು ಪೂರ್ಣಗೊಳಿಸಿದರು ಹಾಗೂ ವಿಂಡೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮತ್ತೊಂದೆಡೆ ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡಿದ್ದ ಬ್ರೆಂಡನ್ ಕಿಂಗ್ ಅವರು ಕೂಡ ಮನಮೋಹಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಇವರು ಆಡಿದ 117 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 13 ಬೌಂಡರಿಗಳೊಂದಿಗೆ 102 ರನ್‌ಗಳನ್ನು ಗಳಿಸಿ ರೀಸ್ ಟಾಪ್ಲೀಗೆ ವಿಕೆಟ್ ಒಪ್ಪಿಸಿದರು.
🏏 Keacy Carty makes history, the first batter from Sint Maarten 🇸🇽 to score a 💯 for the #MenInMaroon! 🙌🏾#TheRivalry |#WIvENG pic.twitter.com/Weu84Yzdiy
— Windies Cricket (@windiescricket) November 7, 2024
ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ವೈಫಲ್ಯ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಇಂಗ್ಲೆಂಡ್ ತಂಡಕ್ಕೆ ಮ್ಯಾಥ್ಯೂ ಫಾರ್ಡ್ ಸೇರಿದಂತೆ ವಿಂಡೀಸ್ ಬೌಲರ್‌ಗಳು ಆರಂಭಿಕ ಆಘಾತ ನೀಡಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ (74 ರನ್) ಅವರು ಅರ್ಧಶರಕ ಸಿಡಿಸಿದ ಹೊರತಾಗಿಯೂ ಇನ್ನುಳಿದ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರು. ವಿಲ್ ಜ್ಯಾಕ್ಸ್ (5), ಜೋರ್ಡನ್ ಕಾಕ್ಸ್ (1), ಜಾಕೋಬ್ ಬೆಥೆಲ್ (0), ಲಿಯಾಮ್ ಲಿವಿಂಗ್‌ಸ್ಟೋನ್ (6) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಆದರೆ, ಕೆಳ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಸ್ಯಾಮ್ ಕರನ್ (40 ರನ್), ಡಾನ್ ಮೌಸ್ಲೀ (57 ರನ್), ಜೇಮಿ ಓವರ್ಟನ್ (32 ರನ್) ಹಾಗೂ ಜೋಫ್ರಾ ಆರ್ಚರ್ (38 ರನ್) ಅವರ ನಿರ್ಣಾಯಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಇದರ ಫಲವಾಗಿ ಇಂಗ್ಲೆಂಡ್ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 262 ರನ್‌ಗಳನ್ನು ಕಲೆ ಹಾಕಲು ಸಾಧ್ಯವಾಗಿತ್ತು. ವಿಂಡೀಸ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದ ಮ್ಯಾಥ್ಯೂ ಫಾರ್ಡ್ 3 ವಿಕೆಟ್ ಕಿತ್ತರೆ, ಆಲ್ಝಾರಿ ಜೋಸೆಫ್ ಮತ್ತು ರೊಮ್ಯಾರಿಯೊ ಶೆಫರ್ಡ್ ತಲಾ ಎರಡು ವಿಕೆಟ್‌ಗಳನ್ನು ಕಿತ್ತರು.
ಈ ಸುದ್ದಿಯನ್ನು ಓದಿ: IND vs AUS: ಆಸ್ಟ್ರೇಲಿಯಾ ಟೆಸ್ಟ್ ಸರಣಿ ಗೆಲ್ಲಲು ಭಾರತಕ್ಕೆ ಉಪಯುಕ್ತ ಸಲಹೆ ನೀಡಿದ ಮೈಕಲ್ ವಾನ್!