ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ-ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಹಸುಗೂಸಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ದೆಹಲಿ ಮಹಿಳಾ ಆಯೋಗ ವಿವರಣೆ ಕೇಳಿದೆ.
ಕ್ರಿಕೆಟ್ ಅಭಿಮಾನಿಗಳ ಪೈಕಿ ಕೆಲವರಲ್ಲಿ ಅತಿರೇಕದ ವರ್ತನೆಗೆ ಕಾರಣವಾಗಿ ಟ್ವಿಟರ್ ನಲ್ಲಿ ವ್ಯಕ್ತಿಯೋರ್ವ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಮಗುವಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿತ್ತು.
ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿಯ ಮಹಿಳಾ ಆಯೋಗ ಪ್ರಕರಣ ದಲ್ಲಿ ಎಫ್ಐಆರ್ ದಾಖಲಿಸಿರುವುದು, ಆರೋಪಿಯ ಗುರುತು, ಬಂಧನ, ಕೈಗೊಳ್ಳಲಾಗಿ ರುವ ಕ್ರಮಗಳ ಬಗ್ಗೆ ವಿವರವಾಗಿ ನ.08 ರ ವೇಳೆಗೆ ತಿಳಿಸಬೇಕೆಂದು ದೆಹಲಿಯ ಡಿಸಿಪಿ ಅವರನ್ನು ಕೇಳಿದೆ.
ಅತ್ಯಾಚಾರದ ಬೆದರಿಕೆ ಹಾಕಿದ್ದ ಟ್ವಿಟರ್ ಹ್ಯಾಂಡಲ್ ಈಗ ಡಿಲೀಟ್ ಆಗಿದೆ. ವ್ಯಕ್ತಿಯ ಗುರುತನ್ನು ಇನ್ನಷ್ಟೇ ಪತ್ತೆ ಮಾಡಬೇಕಿದೆ.