ದುಬೈ: ಬಹುನಿರೀಕ್ಷಿತ ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್(Women’s T20 World Cup) ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಪ್ರತಿಷ್ಠಿತ ಪಂದ್ಯಾವಳಿ ಅಕ್ಟೋಬರ್ 3 ರಿಂದ 20 ರವರೆಗೆ ದುಬಾೖ ಮತ್ತು ಶಾರ್ಜಾದಲ್ಲಿ ನಡೆಯಲಿದೆ. ಒಟ್ಟಾರೆ 23 ಪಂದ್ಯಗಳು ನಡೆಯದ್ದು, ಒಟ್ಟು 19 ದಿನ ಪಂದ್ಯಾವಳಿ ಸಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್‌ನಲ್ಲಿ ಮುಖಾಮುಖಿಯಾಗಲಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಕಣಕ್ಕಿಳಿಯಲಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ ತಂಡದ ಆಟಗಾರ್ತಿಯ ಪಟ್ಟಿ ಅಂತಿಮವಾಗಿದ್ದು ಐಸಿಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಒಟ್ಟು 10 ತಂಡಗಳ ಪಟ್ಟಿ(women’s t20 world cup squads) ಹೀಗಿದೆ.
ಆಸ್ಟ್ರೇಲಿಯಾ
ಅಲಿಸ್ಸಾ ಹೀಲಿ (ನಾಯಕಿ), ಡಾರ್ಸಿ ಬ್ರೌನ್, ಆಶ್ ಗಾರ್ಡ್ನರ್, ಕಿಮ್ ಗಾರ್ತ್, ಗ್ರೇಸ್ ಹ್ಯಾರಿಸ್, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ತಾಹ್ಲಿಯಾ ಮೆಕ್‌ಗ್ರಾತ್ (ಉಪನಾಯಕಿ), ಸೋಫಿ ಮೊಲಿನಿಯಕ್ಸ್, ಬೆತ್ ಮೂನಿ, ಎಲ್ಲಿಸ್ ಪೆರ್ರಿ, ಮೇಗನ್ ಶುಟ್, ಅನ್ನಾಬೆಲ್ ಸದರ್ಲ್ಯಾಂಡ್, ಟೈಲಾ ವ್ಲೇಮಿನ್ ಜಾರ್ಜಿಯಾ ವೇರ್ಹ್ಯಾಮ್.
ಭಾರತ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್, ಯಾಸ್ತಿಕಾ ಭಾಟಿಯಾ (ಫಿಟ್‌ನೆಸ್ ಅವಲಂಬಿತ), ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಳನ್ ಹೇಮಲತಾ, ಆಶಾ ಸೋಭಾನ, ರಾಧಾ ಯಾದವ್, ಎಸ್. (ಫಿಟ್‌ನೆಸ್ ಅವಲಂಬಿತ), ಸಜನಾ ಸಜೀವನ್. ಪ್ರಯಾಣ ಮೀಸಲು: ಉಮಾ ಚೆಟ್ರಿ (ವಿ.ಕೀ), ತನುಜಾ ಕನ್ವರ್, ಸೈಮಾ ಠಾಕೋರ್. ಪ್ರಯಾಣಿಸದ ಮೀಸಲು: ರಾಘ್ವಿ ಬಿಸ್ಟ್, ಪ್ರಿಯಾ ಮಿಶ್ರಾ.
ನ್ಯೂಜಿಲ್ಯಾಂಡ್
ಸೋಫಿ ಡಿವೈನ್ (ನಾಯಕಿ), ಸುಜಿ ಬೇಟ್ಸ್, ಈಡನ್ ಕಾರ್ಸನ್, ಇಜ್ಜಿ ಗೇಜ್, ಮ್ಯಾಡಿ ಗ್ರೀನ್, ಬ್ರೂಕ್ ಹ್ಯಾಲಿಡೇ, ಫ್ರಾನ್ ಜೊನಾಸ್, ಲೀ ಕಾಸ್ಪರೆಕ್, ಮೆಲಿ ಕೆರ್, ಜೆಸ್ ಕೆರ್, ರೋಸ್ಮರಿ ಮೈರ್, ಮೊಲ್ಲಿ ಪೆನ್‌ಫೋಲ್ಡ್, ಜಾರ್ಜಿಯಾ ಪ್ಲಿಮ್ಮರ್, ಹನ್ನಾ ರೋವ್, ಲಿಯಾ ತಾಹು.
ಇದನ್ನೂ ಓದಿ Women’s T20 WC: ಮಹಿಳಾ ಟಿ20 ವಿಶ್ವಕಪ್ ವಿಜೇತರಿಗೆ ದಾಖಲೆಯ ಬಹುಮಾನ ಮೊತ್ತ ಘೋಷಿಸಿದ ಐಸಿಸಿ
ಪಾಕಿಸ್ತಾನ
ಫಾತಿಮಾ ಸನಾ (ನಾಯಕಿ), ಅಲಿಯಾ ರಿಯಾಜ್, ಡಯಾನಾ ಬೇಗ್, ಗುಲ್ ಫಿರೋಜಾ, ಇರಾಮ್ ಜಾವೇದ್, ಮುನೀಬಾ ಅಲಿ, ನಶ್ರಾ ಸುಂಧು, ನಿದಾ ದಾರ್, ಒಮೈಮಾ ಸೊಹೈಲ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್ (ಫಿಟ್‌ನೆಸ್‌ಗೆ ಅವಲಂಬಿತ), ಸಿದ್ರಾ ಅಮೀನ್, ಸೈಯದಾ ಅರೂಬ್ ಶಾ ತಸ್ಮಿಯಾ ರುಬಾಬ್, ತುಬಾ ಹಸನ್. ಪ್ರಯಾಣ ಮೀಸಲು: ನಜಿಹಾ ಅಲ್ವಿ (ವಿ.ಕೀ). ಪ್ರಯಾಣಿಸದ ಮೀಸಲು: ರಮೀನ್ ಶಮೀಮ್, ಉಮ್-ಎ-ಹನಿ
ಶ್ರೀಲಂಕಾ
ಚಾಮರಿ ಅಟಪಟ್ಟು(ನಾಯಕಿ), ಅನುಷ್ಕಾ ಸಂಜೀವನಿ, ಹರ್ಷಿತಾ ಮಾಧವಿ, ನೀಲಾಕ್ಷಿಕಾ ಡಿ ಸಿಲ್ವಾ, ಇನೋಕಾ ರಣವೀರ, ಹಾಸಿನಿ ಪೆರೇರಾ, ಕವಿಶಾ ದಿಲ್ಹಾರಿ, ಸಚಿನಿ ನಿಸಂಸಾಲಾ, ವಿಶ್ಮಿ ಗುಣರತ್ನೆ, ಉದೇಶಿಕಾ ಪ್ರಬೋಧನಿ, ಅಚಿನಿ ಕುಲಸೂರಿಯಾ, ಸುಗಂಧಿಕಾ, ಪ್ರಿಯಾನಿ ಶಶಿಯಾ ಕುಮಾರಿ, ಜಿ. ಕಾಂಚನಾ. ಪ್ರಯಾಣ ಮೀಸಲು: ಕೌಶಿನಿ ನುತ್ಯಂಗನ.
ಬಾಂಗ್ಲಾದೇಶ
ನಿಗರ್ ಸುಲ್ತಾನಾ (ನಾಯಕಿ), ನಹಿದಾ ಅಕ್ಟರ್, ಮುರ್ಷಿದಾ ಖಾತುನ್, ಶೋರ್ನಾ ಅಕ್ಟರ್, ರಿತು ಮೋನಿ, ಸೋಭಾನಾ ಮೊಸ್ತರಿ, ರಬೇಯಾ ಖಾನ್, ಸುಲ್ತಾನಾ ಖಾತುನ್, ಫಾಹಿಮಾ ಖಾತುನ್, ಮಾರುಫಾ ಅಕ್ಟರ್, ಜಹಾನಾರಾ ಆಲಂ, ದಿಲಾರಾ ಅಕ್ಟರ್, ತಾಜ್ ನೆಹರ್, ಶತಿ ರಾಣಿ, ದಿಶಾ ಬಿಸ್ವಾಸ್.
ಇಂಗ್ಲೆಂಡ್
ಹೀದರ್ ನೈಟ್ (ನಾಯಕಿ), ಡ್ಯಾನಿ ವ್ಯಾಟ್, ಸೋಫಿಯಾ ಡಂಕ್ಲೆ, ನ್ಯಾಟ್ ಸ್ಕಿವರ್-ಬ್ರಂಟ್, ಆಲಿಸ್ ಕ್ಯಾಪ್ಸೆ, ಆಮಿ ಜೋನ್ಸ್ (ವಿ.ಕೀ), ಸೋಫಿ ಎಕ್ಲೆಸ್ಟೋನ್, ಚಾರ್ಲಿ ಡೀನ್, ಸಾರಾ ಗ್ಲೆನ್, ಲಾರೆನ್ ಬೆಲ್, ಮಾಯಾ ಬೌಚಿಯರ್, ಲಿನ್ಸೆ ಸ್ಮಿತ್, ಫ್ರೇಯಾ ಕೆಂಪ್, ಡ್ಯಾನಿ ಗಿಬ್ಸನ್ ಬೆಸ್ ಹೀತ್.
ಸ್ಕಾಟ್ಲೆಂಡ್
ಕ್ಯಾಥರಿನ್ ಬ್ರೈಸ್ (ನಾಯಕಿ), ಸಾರಾ ಬ್ರೈಸ್, ಲೋರ್ನಾ ಜ್ಯಾಕ್-ಬ್ರೌನ್, ಅಬ್ಬಿ ಐಟ್ಕೆನ್-ಡ್ರಮಂಡ್, ಅಬ್ಟಾಹಾ ಮಕ್ಸೂದ್, ಸಾಸ್ಕಿಯಾ ಹಾರ್ಲೆ, ಕ್ಲೋಯ್ ಅಬೆಲ್, ಪ್ರಿಯಾನಾಜ್ ಚಟರ್ಜಿ, ಮೇಗನ್ ಮೆಕಾಲ್, ಡಾರ್ಸಿ ಕಾರ್ಟರ್, ಐಲ್ಸಾ ಲಿಸ್ಟರ್, ಹನ್ನಾ ರೈನೆರಿ, ಕ್ಯಾಚೆಲ್ ಸ್ಲಾ ಫ್ರೇಸರ್, ಒಲಿವಿಯಾ ಬೆಲ್.
ದಕ್ಷಿಣ ಆಫ್ರಿಕಾ
ಲಾರಾ ವೂಲ್ವಾರ್ಡ್(ನಾಯಕಿ), ಅನ್ನೆಕೆ ಬಾಷ್, ತಜ್ಮಿನ್ ಬ್ರಿಟ್ಸ್, ನಾಡಿನ್ ಡಿ ಕ್ಲರ್ಕ್, ಆನ್ನೆರಿ ಡೆರ್ಕ್ಸೆನ್, ಮೈಕೆ ಡಿ ರಿಡ್ಡರ್, ಅಯಾಂಡಾ ಹ್ಲುಬಿ, ಸಿನಾಲೊ ಜಫ್ತಾ, ಮರಿಜಾನ್ನೆ ಕಪ್, ಅಯಾಬೊಂಗಾ ಖಾಕಾ, ಸುನೆ ಲೂಸ್, ನಾನ್ಕುಲುಲೆಕೊ ಮ್ಲಾಬಾ, ತುಮಿನೆ, ಸೆಶ್ನಿ ಕ್ಲೋಯ್ ಟ್ರೈಯಾನ್.
ವೆಸ್ಟ್ ಇಂಡೀಸ್
ಹೀಲಿ ಮ್ಯಾಥ್ಯೂಸ್ (ನಾಯಕಿ), ಆಲಿಯಾ ಅಲೀನ್, ಶಾಮಿಲಿಯಾ ಕಾನ್ನೆಲ್, ಡಿಯಾಂಡ್ರಾ ಡಾಟಿನ್, ಶೆಮೈನ್ ಕ್ಯಾಂಪ್ಬೆಲ್ಲೆ (ವಿ.ಕೀ), ಅಶ್ಮಿನಿ ಮುನಿಸಾರ್, ಅಫಿ ಫ್ಲೆಚರ್, ಸ್ಟಾಫಾನಿ ಟೇಲರ್, ಚಿನೆಲ್ಲೆ ಹೆನ್ರಿ, ಚೆಡಿಯನ್ ನೇಷನ್, ಕಿಯಾನಾ ಜೋಸೆಫ್, ಜೈದಾ ಜೇಮ್ಸ್, ಕರಿಷ್ಮಾ ರಾಮ್‌ಹರ್ಕ್, ಮನೀಡಿ ರಾಮ್‌ಗ್ರು ನೆರಿಸ್ಸಾ ಕ್ರಾಫ್ಟನ್.