Sunday, 24th November 2024

Women’s T20 World Cup: ನಾಯಕಿ ಕೌರ್‌ 3ನೇ ಕ್ರಮಾಂಕದಲ್ಲೇ ಆಡಲಿದ್ದಾರೆ; ಕೋಚ್‌ ಸ್ಪಷ್ಟನೆ

Women’s T20 World Cup

ದುಬೈ: ಇಂದು ನಡೆಯುವ ಮಹಿಳಾ ಟಿ20 ವಿಶ್ವಕಪ್‌(Women’s T20 World Cup) ಟೂರ್ನಿಯಲ್ಲಿ ಡಬಲ್‌ ಹೆಡರ್‌ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ-ವೆಸ್ಟ್‌ಇಂಡೀಸ್‌ ಕಣಕ್ಕಿಳಿದರೆ, ಮತ್ತೊಂದು ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್‌ ಸೆಣಸಾಟ ನಡೆಸಲಿದೆ. ಪಂದ್ಯಕ್ಕೆ ಭಾರತದ ಬ್ಯಾಟಿಂಗ್‌ ಲೈನ್‌ ಅಪ್‌ ಹೇಗಿರಲಿದೆ ಎಂದು ಕೋಚ್‌ ಅಮೋಲ್‌ ಮುಜುಮ್ದಾರ್‌(Amol Muzumdar) ಮಾಹಿತಿ ನೀಡಿದ್ದಾರೆ.

ಪಂದ್ಯ ಆರಂಭಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೋಲ್‌ ಮುಜುಮ್ದಾರ್‌, ಪಂದ್ಯದ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ ಇಂಡೀಸ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕ್ರಮವಾಗಿ 3 ಮತ್ತು 13 ರನ್‌ ಬಾರಿಸಿ ವೈಫಲ್ಯ ಕಂಡಿದ್ದ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌(Harmanpreet Kaur) ಮೂರನೇ ಕ್ರಮಾಂಕದಲ್ಲಿಯೇ ಆಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

“ಅಭ್ಯಾಸ ಪಂದ್ಯದಲ್ಲಿ ವಿಫಲವಾದ ಕಾರಣಕ್ಕೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ನಾವು ವಿಶ್ವಕಪ್‌ಗೆ ಹೊರಡುವ ಮೊದಲು ನಡೆಸಿದ ಶಿಬಿರಗಳಲ್ಲಿಈ ಟೂರ್ನಿಯಲ್ಲಿ ಹೇಗೆ ಆಡಬೇಕು ಎನ್ನುವುದನ್ನು ನಿರ್ಧರಿಸಿದ್ದೇವೆ. ಈ ಯೋಜನೆಯಂತೆ ಆಡಲಿದ್ದೇವೆ. ಒಂದೆಡರು ಪಂದ್ಯದ ಪ್ರದರ್ಶನ ನೋಡಿ ಬ್ಯಾಟಿಂಗ್‌ ಕ್ರಮಾಂಕದ ಬದಲಾವಣೆ ಮಾಡಿದರೆ ಇದು ತಂಡಕ್ಕೆ ದೊಡ್ಡ ಹಿನ್ನಡೆ ಉಂಟುಮಾಡುತ್ತದೆ” ಎಂದು ಮುಜುಮ್ದಾರ್‌ ಹೇಳಿದ್ದಾರೆ.

ಇದನ್ನೂ ಓದಿ Women’s T20 world Cup: ಕೇವಲ 342 ರೂ.ಗೆ ಲಭ್ಯ ಭಾರತ-ಪಾಕ್‌ ಪಂದ್ಯದ ಟಿಕೆಟ್‌

ಯಾಸ್ತಿಕಾ ಭಾಟಿಯಾ ಭಾರತದ ನಂಬರ್ 3 ಬ್ಯಾಟರ್ ಆಗಿದ್ದರು. ಗಾಯಗೊಂಡು ಕೆಲವು ಸರಣಿಗೆ ಅಲಭ್ಯರಾಗಿದ್ದ ಕಾರಣ ಅವರ ಸ್ಥಾನಕ್ಕೆ ಪರ್ಯಾಯವಾಗಿ ಹರ್ಮನ್‌ಪ್ರೀತ್‌ ಆಯ್ಕೆ ಮಾಡಲಾಗಿತ್ತು. ವಿಶ್ವಕಪ್ ತಂಡದಲ್ಲಿ ಯಾಸ್ತಿಕಾ ಸ್ಥಾನ ಪಡೆದಿದ್ದರೂ ಕೂಡ ಹರ್ಮನ್‌ಪ್ರೀತ್ ಮೂರನೇ ಕ್ರಮಾಂಕದಲ್ಲೇ ಆಡಲಿದ್ದಾರೆ. ಕೌರ್‌ ಈ ಮೊದಲು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ನಡೆಸುತ್ತಿದ್ದರು. 35 ವರ್ಷದ ಹರ್ಮನ್‌ಪ್ರೀತ್‌ ಕೌರ್‌ಗೆ ಇದು ಕೊನೆಯ ಟಿ20 ವಿಶ್ವಕಪ್‌ ಆಗುವ ಸಾಧ್ಯತೆಯಿದೆ.

ಭಾರತ ಆಡುವ ಸಂಭಾವ್ಯ ಬಳಗ

ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿ.ಕೀ), ದೀಪ್ತಿ ಶರ್ಮಾ, ಶ್ರೇಯಾಂಕಾ ಪಾಟೀಲ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಠಾಕೂರ್, ಆಶಾ ಸೋಭಾನಾ.