ದುಬೈ: 9ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ ಟೂರ್ನಿ(Women’s T20 world Cup) ಆರಂಭಕ್ಕೆ ಇನ್ನು ಕೇವಲ 5 ದಿನಗಳು ಮಾತ್ರ ಬಾಕಿ ಉಳಿದಿವೆ. ಪಂದ್ಯಾವಳಿ ಅಕ್ಟೋಬರ್ 3 ರಿಂದ ಆರಂಭಗೊಳ್ಳಲಿದೆ. ಈಗಾಗಲೇ ಎಲ್ಲ ತಂಡಗಳ ಆಟಗಾರ್ತಿಯರು ದುಬೈ ತಲುಪಿದ್ದು ಅಭ್ಯಾಸ ಕೂಡ ಆರಂಭಿಸಿದ್ದಾರೆ. ಉದ್ಘಾಟನ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್‌ನಲ್ಲಿ ಮುಖಾಮುಖಿಯಾಗಲಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಕಣಕ್ಕಿಳಿಯಲಿದೆ. ಇದೀಗ ಪಂದ್ಯಗಳ ಟಿಕೆಟ್‌ಗಳನ್ನು ಐಸಿಸಿ ಬಿಡುಗಡೆಗೊಳಿಸಿದೆ.
ಭಾರತ ತಂಡ ಅಕ್ಟೋಬರ್ 4 ರಂದು ನ್ಯೂಜಿಲ್ಯಾಂಡ್ ವಿರುದ್ಧ ಆಡುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿದೆ. ಸಾಂಪ್ರದಾಯಿ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಅಕ್ಟೋಬರ್ 6 ರಂದು ಪಂದ್ಯವನ್ನಾಡಲಿದೆ. ಭಾರತ ಮತ್ತು ಪಾಕ್ ಪಂದ್ಯವೆಂದರೆ ಹೈವೋಲ್ಟೇಜ್ ಎಂದೇ ಕರೆಯಲಾಗುತ್ತದೆ. ಟಿಕೆಟ್ ದರಗಳು ಕೂಡ ಭಾರೀ ಮೊತ್ತದಿಂದ ಕೂಡಿರುತ್ತದೆ. ಆದರೆ, ಈ ಬಾರಿ ಅತ್ಯಂತ ಕಡಿಮೆ ಬೆಲೆಗೆ ಟಿಕೆಟ್ ಲಭ್ಯವಿದೆ.
ಹೌದು, ಕಡಿಮೆ ದರದ ಟಿಕೆಟ್ ಕೇವಲ 15 ದಿರ್ಹಮ್ಸ್ ಅಂದರೆ ಸುಮಾರು 342 ಭಾರತೀಯ ರೂಪಾಯಿಗಳಲ್ಲಿ ಲಭ್ಯವಿದೆ. ಕೆಲವು ಸ್ಟ್ಯಾಂಡ್‌ಗಳ ಟಿಕೆಟ್ ದರ 25 ದಿರ್ಹಮ್ಸ್ (ಸುಮಾರು 570 ಭಾರತೀಯ ರೂ.) ಗಳಿಗೆ ಸಿಗುತ್ತಿದೆ.
ಇದನ್ನೂ ಓದಿ IND vs BAN: ಬುಮ್ರಾ ಬೌಲಿಂಗ್ ಶೈಲಿ ಹೇಗೆಂದು ತೋರಿಸಿಕೊಟ್ಟ ಕೊಹ್ಲಿ, ಜಡೇಜಾ; ವಿಡಿಯೊ ವೈರಲ್
ಟಿಕೆಟ್ ಎಲ್ಲಿ ಲಭ್ಯ?
ಪಂದ್ಯಗಳ ಟಿಕೆಟ್‌ಗಳನ್ನು T20worldcup.platinumlist.net ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಭಿಮಾನಿಗಳು ಖರೀದಿಸಬಹುದು. 18 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಿಗೆ ಸ್ಟೇಡಿಯಂನಲ್ಲಿ ಪಂದ್ಯವನ್ನು ವೀಕ್ಷಿಸಲು ಐಸಿಸಿ ಉಚಿತ ಪ್ರವೇಶ ವ್ಯವಸ್ಥೆಯನ್ನು ಮಾಡುತ್ತಿದೆ.
ಪ್ರತಿಯೊಂದು ತಂಡವು ಬಣ ಹಂತದಲ್ಲಿ ನಾಲ್ಕು ಪಂದ್ಯಗಳನ್ನಾಡಲಿದ್ದು ಅಗ್ರ ಎರಡು ತಂಡಗಳು ಸೆಮಿಫೈನಲಿಗೇರಲಿವೆ. ಸೆಮಿಫೈನಲ್ಸ್ ಅ. 17 ಮತ್ತು 18ರಂದು ನಡೆಯಲಿದ್ದರೆ ದುಬಾೖಯಲ್ಲಿ ಅ. 20ರಂದು ಫೈನಲ್ ಜರಗಲಿದೆ. ಲೀಗ್ ಹಂತದ ಯಾವುದೇ ಪಂದ್ಯಗಳಿಗೆ ಮೀಸಲು ದಿನವಿಲ್ಲ. ಕೇಲವ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮಾತ್ರ ಮೀಸಲು ದಿನ ನಿಗದಿಯಾಗಿದೆ. ಪಂದ್ಯ ಟೈ ಆದರೆ ಸೂಪರ್ ಓವರ್ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಸೂಪರ್ ಓವರ್ ಕೂಡ ಟೈ ಆದರೆ ಇನ್ನೊಂದು ಸೂಪರ್ ಓವರ್ ಇರಲಿದೆ. ಹೀಗೆ ಸ್ಪಷ್ಟ ಫಲಿತಾಂಶ ಲಭಿಸುವ ತನಕ ಸೂಪರ್ ಓವರ್ ಜಾರಿಯಲ್ಲಿರುತ್ತದೆ.