ದುಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ(Women’s T20 World Cup) ಈ ಹಿಂದೆ ಹಲವು ಪ್ರಶಸ್ತಿ ಗೆಲ್ಲುವ ಅವಕಾಶದಿಂದ ವಂಚಿತವಾಗಿದ್ದ ಭಾರತ ಮಹಿಳಾ(India Women) ತಂಡ ಈ ಬಾರಿ ಪ್ರಶಸ್ತಿ ಗೆಲ್ಲಲೇ ಬೇಕೆಂಬ ಇರಾದೆಯೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ. ಇಂದು ನಡೆಯುವ ತನ್ನ ಮೊದಲ ಪಂದ್ಯವನ್ನು ಎರಡು ಬಾರಿಯ ರನ್ನರ್ ಅಪ್ ನ್ಯೂಜಿಲ್ಯಾಂಡ್(New Zealand Women) ವಿರುದ್ಧ ಆಡಲಿದೆ. ಈ ಪಂದ್ಯ ರಾತ್ರಿ 7.30 ಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಅನುಭವಿಗಳಾದ ಹರ್ಮನ್‌ಪ್ರೀತ್, ಸ್ಮತಿ ಮಂಧನಾ, ಜೆಮಿಮಾ ರಾಡ್ರಿಗಸ್, ಶಫಾಲಿ ಶರ್ಮ ಮತ್ತು ದೀಪ್ತಿ ಶರ್ಮ ದೊಡ್ಡ ಕೊಡುಗೆ ಸಲ್ಲಿಸುವುದು ಅನಿವಾರ್ಯ. ಅವರಲ್ಲಿ ಉತ್ತಮ ಫಾರ್ಮ್ನಲ್ಲಿರುವ ಶಫಾಲಿ ಮತ್ತು ಮಂಧನಾ ಕಳೆದ ಏಷ್ಯಾ ಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಆದರೂ ಉಭಯ ಆಟಗಾರ್ತಿಯ ಫಾರ್ಮ್ ಬಗ್ಗೆ ಹೆಚ್ಚಿನ ನಂಬಿಕೆ ಇಡುವುದು ಕಷ್ಟ. ಒಂದೆಡರು ಪಂದ್ಯ ವಿಫಲವಾದರೆ ಬಳಿಕ ಎಲ್ಲ ಪಂದ್ಯಗಳಲ್ಲಿಯೂ ವಿಫಲರಾಗುತ್ತಾರೆ. ಈ ಒಂದು ಸಮಸ್ಯೆಗೆ ಸಿಲುಕದಿರಲಿ ಎನ್ನುವುದು ಅಭಿಮಾನಿಗಳ ಆಶಯ.
ಮೂವರು ವೇಗಿಗಳಾದ ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್ ಮತ್ತು ಅರುಂಧತಿ ರೆಡ್ಡಿ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಕನ್ನಡತಿ ಶ್ರೇಯಾಂಕ ಅವರಿಗೂ ಅವಕಾಶ ಸಿಗಬಹುದು. ಅಭ್ಯಾಸ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಸ್ಥಾನ ಖಚಿತ ಎನ್ನಲಡ್ಡಿಯಿಲ್ಲ.
ನ್ಯೂಜಿಲ್ಯಾಂಡ್ ಕೂಡ ಬಲಿಷ್ಠ ತಂಡವೇ. ನಾಯಕಿ ಸೋಫಿ ಡಿವೈನ್ ಸಿಡುದು ನಿಂತರೆ ಅವರನ್ನು ತಡೆಯುವುದು ಕಷ್ಟ. ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ರನ್‌ಗಳ ರಾಶಿ ಹಾಕುತ್ತಾರೆ. ಜತೆಗೆ ಅನುಭವಿ ಆಲ್‌ರೌಂಡರ್ ಸುಜಿ ಬೇಟ್ಸ್ ಕೂಡ ಯಾವುದೇ ಹಂತದಲ್ಲಿ ಪಂದ್ಯದ ಗತಿಯನ್ನೇ ಬದಲಿಸುವ ಪ್ರದರ್ಶನ ನೀಡಬಲ್ಲರು. ಹೀಗಾಗಿ ಭಾರತೀಯ ಬೌಲರ್‌ಗಳು ಉಭಯ ಆಟಗಾರ್ತಿಯರನ್ನು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರದಂತೆ ನೋಡಿಕೊಳ್ಳಬೇಕು.
ಇದನ್ನೂ ಓದಿ PM Modi: ಚುರ್ಮಾ ಸವಿದು ನೀರಜ್ ತಾಯಿಗೆ ಭಾವುಕ ಪತ್ರ ಬರೆದ ಮೋದಿ
ಬಲಾಬಲ
ಉಭಯ ತಂಡಗಳ ಬಲಾಬಲ ನೋಡುವುದಾದರೆ ನ್ಯೂಜಿಲ್ಯಾಂಡ್ ಬಲಿಷ್ಠವಾಗಿದೆ. ಭಾರತ ವಿರುದ್ಧ ಆಡಿದ 13 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಜಯಿಸಿದೆ. ಭಾರತ ಕೇವಲ 4 ಪಂದ್ಯ ಮಾತ್ರ ಗೆದ್ದಿದೆ.
ಸಂಭಾವ್ಯ ತಂಡಗಳು
ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿ.ಕೀ), ದೀಪ್ತಿ ಶರ್ಮಾ, ಶ್ರೇಯಾಂಕಾ ಪಾಟೀಲ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಠಾಕೂರ್, ಆಶಾ ಸೋಭಾನಾ.
ನ್ಯೂಜಿಲ್ಯಾಂಡ್: ಸೋಫಿ ಡಿವೈನ್ (ನಾಯಕಿ), ಸುಜಿ ಬೇಟ್ಸ್, ಇಜ್ಜಿ ಗೇಜ್, ಮ್ಯಾಡಿ ಗ್ರೀನ್, , ಫ್ರಾನ್ ಜೊನಾಸ್, ಲೀ ಕ್ಯಾಸ್ಪರೆಕ್, ಅಮೆಲಿ ಕೆರ್(ವಿ.ಕೀ), ಜೆಸ್ ಕೆರ್, ರೋಸ್ಮರಿ ಮೈರ್, ಮೊಲ್ಲಿ ಪೆನ್‌ಫೋಲ್ಡ್, ಜಾರ್ಜಿಯಾ ಪ್ಲಿಮ್ಮರ್, ಹನ್ನಾ ರೋವ್/ ಲಿಯಾ ತಹುಹು.
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಆರಂಭ: ರಾತ್ರಿ. 7.30
ಸ್ಥಳ: ದುಬೈ