Saturday, 14th December 2024

ಮಹಿಳೆಯರ ಟಿ20 ಏಷ್ಯಾಕಪ್ ಟೂರ್ನಿಗೆ ಡಂಬುಲಾದಲ್ಲಿ ಇಂದು ಚಾಲನೆ

ಡಂಬುಲಾ: ಮಹಿಳೆಯರ ಟಿ20 ಏಷ್ಯಾಕಪ್ ಟೂರ್ನಿಗೆ ದ್ವೀಪರಾಷ್ಟ್ರ ಶ್ರೀಲಂಕಾದ ಡಂಬುಲಾದಲ್ಲಿ ಶುಕ್ರವಾರ ಚಾಲನೆ ದೊರೆಯಲಿದ್ದು, ಹಾಲಿ ಚಾಂಪಿಯನ್ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಎ ಗುಂಪಿನ ಯುಎಇ ಹಾಗೂ ನೇಪಾಳ ತಂಡಗಳು ಸೆಣಸಾಡಲಿವೆ.

ಟೂರ್ನಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಪೂರ್ವ ತಯಾರಿ ಎನಿಸಿದೆ. ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಭಾರತ ಇದುವರೆಗೆ ಆಡಿರುವ 20 ಪಂದ್ಯಗಳಲ್ಲಿ 17 ಗೆಲುವುಗಳೊಂದಿಗೆ ಅತ್ಯಂತ ಯಶಸ್ವಿ ತಂಡ ಎನಿಸಿದೆ. 2022ರಲ್ಲಿ ನಡೆದ ಕೊನೆಯ ಆವೃತ್ತಿಯ ೈನಲ್‌ನಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಹರ್ಮಾನ್‌ಪ್ರೀತ್ ಕೌರ್ ಪಡೆ ಚಾಂಪಿಯನ್ ಆಗಿತ್ತು. ಇತ್ತೀಚೆಗೆ ಭಾರತ ತಂಡ ಟಿ20 ಕ್ರಿಕೆಟ್‌ನಲ್ಲಿ ತವರಿನಲ್ಲೂ ಸ್ಥಿರ ಪ್ರದರ್ಶನ ನೀಡಿಲ್ಲ. ಆದರೆ ಏಷ್ಯಾ ಖಂಡದ ಟೂರ್ನಿಯಲ್ಲಿ ಭಾರತವೇ ೇವರಿಟ್ ತಂಡವಾಗಿ ಕಣಕ್ಕಿಳಿಯಲಿದೆ.

ತವರಿನಲ್ಲಿ ದಕ್ಷಿಣ ಆಫ್ರಿಕಾ ಎದುರು ಕಣಕ್ಕಿಳಿದ ಭಾರತ ತಂಡವೇ ಟೂರ್ನಿಯಲ್ಲಿ ಆಡಲಿದ್ದು, ಪೂಜಾ ವಸಾಕರ್, ರಾಧಾ ಯಾದವ್ ಾರ್ಮ್ ತಂಡಕ್ಕೆ ಪ್ರಮುಖ ಬಲ ಎನಿಸಿದೆ. ಶ್ರೇಯಾಂಕಾ ಪಾಟೀಲ್ ತಂಡದಲ್ಲಿರುವ ಏಕೈಕ ಕನ್ನಡತಿ ಎನಿಸಿದ್ದಾರೆ. ಆಲ್ರೌಂಡರ್ ಚಾಮರಿ ಅಟಪಟ್ಟು ಆತಿಥೇಯ ಶ್ರೀಲಂಕಾ ತಂಡವನ್ನು ಮುನ್ನಡೆಸಲಿದ್ದು, ನೇಪಾಳ ತಂಡ 2016ರ ಬಳಿಕ ಮೊದಲ ಬಾರಿಗೆ ಟೂರ್ನಿಯಲ್ಲಿ ಭಾಗವಹಿಸಿದರೆ, ಯುಎಇ ಸತತ ಎರಡನೇ ಬಾರಿಗೆ ಕಣಕ್ಕಿಳಿಯುವ ತವಕದಲ್ಲಿದೆ.

ಟೂರ್ನಿಯಲ್ಲಿ ಭಾಗವಹಿಸಿರುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿ ಫೈನಲ್ ಗೇರಲಿವೆ. ಜು.26ರಂದು ಸೆಮಿೈನಲ್ ಮತ್ತು 28ರಂದು ಫೈನಲ್ ಪಂದ್ಯ ನಡೆಯಲಿದೆ.

ಗುಂಪುಗಳು
ಎ: ಭಾರತ, ಪಾಕಿಸ್ತಾನ, ನೇಪಾಳ, ಯುಎಇ
ಬಿ: ಶ್ರೀಲಂಕಾ, ಬಾಂಗ್ಲಾದೇಶ, ಮಲೇಷ್ಯಾ, ಥಾಯ್ಲೆಂಡ್

ಭಾರತದ ಪಂದ್ಯಗಳು
ದಿನಾಂಕ ಎದುರಾಳಿ ಆರಂಭ
ಜು.19 ಪಾಕಿಸ್ತಾನ ರಾತ್ರಿ 7.00
ಜು. 21 ಯುಎಇ ಮ.2.00
ಜು. 23 ನೇಪಾಳ ರಾತ್ರಿ 7.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

7: 2004ರಲ್ಲಿ ಆರಂಭವಾದ ಮಹಿಳೆಯರ ಏಷ್ಯಾಕಪ್‌ನಲ್ಲಿ ಭಾರತ ಇದುವರೆಗೆ 7 ಬಾರಿ ಪ್ರಶಸ್ತಿ ಜಯಿಸಿದೆ. ಈ ಪೈಕಿ 4 ಬಾರಿ ಏಕದಿನ ಮತ್ತು 3 ಬಾರಿ ಟಿ20 ಕ್ರಿಕೆಟ್ ಪ್ರಕಾರದಲ್ಲಿ ಆಗಿದೆ.