Saturday, 14th December 2024

ಇಂದು ವಿಶ್ವ ಬ್ಯಾಸ್ಕೆಟ್‌ಬಾಲ್ ದಿನ ಆಚರಣೆ

ಪ್ರಸ್ತುತ ವಿಶ್ವಾದ್ಯಂತ ಕನಿಷ್ಠ 450 ಮಿಲಿಯನ್ ಬ್ಯಾಸ್ಕೆಟ್‌ಬಾಲ್ ಆಟಗಾರರಿದ್ದಾರೆ.

ಹೈದರಾಬಾದ್: ಪ್ರತಿ ವರ್ಷ ಡಿ.21 ರಂದು ವಿಶ್ವ ಬ್ಯಾಸ್ಕೆಟ್‌ಬಾಲ್ ದಿನವನ್ನು ಆಚರಿಸಲಾಗುತ್ತದೆ. ಕ್ರೀಡೆಯ ಅಭಿವೃದ್ಧಿ ಹಾಗೂ ಆಟವನ್ನ ಗೌರವಿಸುವ ಭಾಗವಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವ್ಯಾಪಾರ, ಶಾಂತಿ ಮತ್ತು ರಾಜತಾಂತ್ರಿಕತೆಯ ಕ್ಷೇತ್ರಗಳಲ್ಲಿ ಬ್ಯಾಸ್ಕೆಟ್‌ಬಾಲ್ ತನ್ನದೇ ಆದ ಮಹತ್ವವನ್ನು ಹೊಂದಿದೆ. ಏಕೆಂದರೆ ಇದು ಸಹಯೋಗ, ದೈಹಿಕ ಚಟುವಟಿಕೆ ಮತ್ತು ಪರಸ್ಪರ ಅವಲಂಬನೆಯ ಆಧಾರದ ಮೇಲೆ ನಡೆಯುವ ಕ್ರೀಡೆಯಾಗಿದೆ.

ಬ್ಯಾಸ್ಕೆಟ್‌ಬಾಲ್ ಇತರ ಕ್ರೀಡೆಗಳಂತೆ ಒಂದು ಸೌಹಾರ್ದಯುತ ಆಟವಾಗಿದೆ. ಗಡಿಗಳು, ಸಂಸ್ಕೃತಿ ಮತ್ತು ಭಾಷೆಗಳನ್ನು ಒಳಗೊಂಡ ಒಂದು ಭಾವನಾ ತ್ಮಕ ಕ್ರೀಡೆಯಾಗಿದೆ.

ಕೆನಡಾದ ದೈಹಿಕ ಶಿಕ್ಷಕ ಡಾ.ಜೇಮ್ಸ್ ನೈಸ್ಮಿತ್ ಅವರು ಡಿ.21, 1891 ರಂದು ಅಮೆರಿಕದ ಮ್ಯಾಸಚೂಸೆಟ್ಸ್‌ನ ಸ್ಪ್ರಿಂಗ್‌ಫೀಲ್ಡ್‌ನಲ್ಲಿರುವ ಇಂಟರ್‌ ನ್ಯಾಶನಲ್ ವೈಎಂಸಿಎ ಟ್ರೈನಿಂಗ್ ಸ್ಕೂಲ್‌ನಲ್ಲಿ ಈ ಬಾಸ್ಕೆಟ್‌ಬಾಲ್ ಆಟವನ್ನು ಶೋಧಿಸಿದರು. ಚಳಿಗಾಲದ ಉದ್ದಕ್ಕೂ ತನ್ನ ವಿದ್ಯಾರ್ಥಿಗಳನ್ನು ಸಕ್ರಿಯವಾಗಿಡಲು ಅವರು ಈ ಆಟವನ್ನು ಅಭಿವೃದ್ಧಿ ಪಡಿಸಿದರು.

1976 ರ ಮಾಂಟ್ರಿಯಲ್ ಗೇಮ್ಸ್‌ನಲ್ಲಿ ಮಹಿಳಾ ಬ್ಯಾಸ್ಕೆಟ್‌ಬಾಲ್ ಪರಿಚಯಿಸಲಾಯಿತು. ನೈಸ್ಮಿತ್ 1891 ರಲ್ಲಿ “ಬ್ಯಾಸ್ಕೆಟ್‌ಬಾಲ್” ಎಂಬ ಪದವನ್ನು ಮೊದಲ ಬಾರಿಗೆ ಬಳಸಿದರು.

•ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಆಗಸ್ಟ್ 25, 2023 ಅನ್ನು ವಿಶ್ವ ಬಾಸ್ಕೆಟ್‌ಬಾಲ್ ದಿನವೆಂದು ಘೋಷಿಸಲಾಯಿತು. ಇಂಟರ್ನ್ಯಾಷನಲ್ ಬಾಸ್ಕೆಟ್‌ ಬಾಲ್ ಫೆಡರೇಶನ್, ಬಾಸ್ಕೆಟ್‌ಬಾಲ್ ವಿಶ್ವಕಪ್ 2023ರನ್ನು ಆಯೋಜಿಸಿತ್ತು. ವಿಶ್ವಾದ್ಯಂತ ಶಾಂತಿ ಮತ್ತು ಸಮೃದ್ಧಿಗಾಗಿ ಈ ಕ್ರೀಡಾದಿನವನ್ನು ಆಚರಿಸ ಲಾಗುತ್ತದೆ. ಇಂಡೋನೇಷ್ಯಾ, ಜಪಾನ್ ಮತ್ತು ಫಿಲಿಪೈನ್ಸ್ ಬಾಸ್ಕೆಟ್​ ಬಾಲ್​​ ವಿಶ್ವಕಪ್​ ಆಯೋಜಿಸುವ ಮೂಲಕ ಬಾಸ್ಕೆಟ್​ಬಾಲ್​​ಗೆ ಹೆಚ್ಚಿನ ಮನ್ನಣೆ ನೀಡಿವೆ.