ಬೆಂಗಳೂರು: ಬಹುನಿರೀಕ್ಷಿತ ಮಹಿಳೆಯರ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)-2025ರ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ(WPL Auction 2025 ಶುರುವಾಗಿದೆ. ನಾಳೆ(ಡಿ.15) ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದೆ. ಒಟ್ಟು 120 ಆಟಗಾರ್ತಿಯರು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
120 ಆಟಗಾರ್ತಿಯರ ಪೈಕಿ 91 ಭಾರತೀಯರು ಮತ್ತು ಉಳಿದವರು ಸಾಗರೋತ್ತರ ದೇಶದವರು. ಇವರಲ್ಲಿ ಅಸೋಸಿಯೇಟ್ ರಾಷ್ಟ್ರಗಳಿಂದ ಮೂವರು ಸೇರಿದ್ದಾರೆ. 91 ಭಾರತೀಯ ಆಟಗಾರ್ತಿಯ ಪೈಕಿ ಒಂಬತ್ತು ಮಂದಿ ಮಾತ್ರ ಕ್ಯಾಪ್ಟ್ ಆಟಗಾರರು. ಸಾಗರೋತ್ತರ ವಿಭಾಗದಲ್ಲಿ 8 ಅನ್‌ಕ್ಯಾಪ್ಡ್ ಆಟಗಾರ್ತಿಯರಿದ್ದಾರೆ. ಹೆಚ್ಚಿನ ಫ್ರಾಂಚೈಸಿಗಳು ತಮ್ಮ ಕೋರ್ ಸ್ಕ್ವಾಡ್ ಉಳಿಸಿಕೊಂಡಿವೆ. 19 ಸ್ಲಾಟ್‌ಗಳಿಗೆ (5 ವಿದೇಶಿ ಸೇರಿದಂತೆ) ಬಿಡ್ ನಡೆಯಲಿದೆ.
5 ಫ್ರಾಂಚೈಸಿಗಳು ಈ ಬಾರಿ 15 ಕೋಟಿ ರೂ. ಬಜೆಟ್ ಮಿತಿಯೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿವೆ. ಕಳೆದ ವರ್ಷ ಬಜೆಟ್ ಮಿತಿ 13.5 ಕೋಟಿ ರೂ. ಆಗಿತ್ತು. ಇಂಗ್ಲೆಂಡ್ ನಾಯಕಿ ಹೀದರ್ ನೈಟ್, ನ್ಯೂಜಿಲೆಂಡ್ ವೇಗಿ ಲಿಯಾ ತಹುಹು, ವೆಸ್ಟ್ ಇಂಡೀಸ್ ಆಲ್ರೌಂಡರ್ ಡಿಯೇಂಡ್ರಾ ಡಾಟಿನ್ ಹರಾಜಿನಲ್ಲಿ ಭಾರೀ ಮೊತ್ತ ಜೇಬಿಗಿಳಿಸುವ ನಿರೀಕ್ಷೆಯಲ್ಲಿದ್ದಾರೆ.
ಗುಜರಾತ್ ಜಯಂಟ್ಸ್ ತಂಡ ಗರಿಷ್ಠ 4.4 ಕೋಟಿ ರೂ. ಮೊತ್ತದೊಂದಿಗೆ ಮಿನಿ ಹರಾಜಿಗೆ ಇಳಿಯಲಿದೆ. ಹಾಲಿ ಚಾಂಪಿಯನ್ ಬೆಂಗಳೂರು ತಂಡದ ತನ್ನ ಪರ್ಸ್ ನಲ್ಲಿ 3.25 ಕೋಟಿ ರೂ ಉಳಿಸಿಕೊಂಡಿದೆ. ತಂಡದಲ್ಲಿ ಈಗಾಗಲೇ 14 ಆಟಗಾರರು ಇದ್ದು, ನಾಲ್ಕು ಆಟಗಾರರ ಅಗತ್ಯವಿದೆ.
ಇದನ್ನೂ ಓದಿ IPL 2025: ಆರ್‌ಸಿಬಿಗೆ ರಜತ್ ಪಾಟೀದಾರ್ ನಾಯಕ?
ಯುಪಿ ವಾರಿಯರ್ಸ್ ತಂಡಕ್ಕೆ ಒಬ್ಬರು ವಿದೇಶಿ ಆಟಗಾರ್ತಿ ಸೇರಿದಂತೆ ಮೂವರು ಆಟಗಾರ್ತಿಯರ ಅಗತ್ಯವಿದೆ. ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್(2.5 ಕೋಟಿ ರೂ) ತಂಡಗಳಿಗೂ ನಾಲ್ವರು ಆಟಗಾರ್ತಿಯರ ಅಗತ್ಯವಿದೆ. ಆದರೆ, ಆರ್‌ಸಿಬಿಯಲ್ಲಿ ವಿದೇಶಿ ಆಟಗಾರ್ತಿಯರು ಸಂಪೂರ್ಣ ಭರ್ತಿಯಾಗಿದೆ.
ಹರಾಜಿಗೂ ಮುನ್ನ ರಿಟೇನ್‌ನಲ್ಲಿ ಎಲ್ಲ ಫ್ರಾಂಚೈಸಿಗಳು ತಮ್ಮಲ್ಲಿ ಉಳಿಸಿಕೊಂಡ ಮತ್ತು ಕೈ ಬಿಟ್ಟ ಆಟಗಾರ್ತಿಯರ ಪಟ್ಟಿ ಹೀಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಉಳಿಸಿಕೊಂಡ ಆಟಗಾರ್ತಿಯರು: ಸ್ಮೃತಿ ಮಂಧಾನ, ಸಬ್ಬಿನೇನಿ ಮೇಘನಾ, ಎಲಿಸ್ ಪೆರಿ, ರಿಚಾ ಘೋಷ್, ಜಾರ್ಜಿಯಾ ವಾರೆಹಮ್, ಶ್ರೇಯಾಂಕಾ ಪಾಟೀಲ್, ಆಶಾ ಸೋಭಾನಾ, ರೇಣುಕಾ ಸಿಂಗ್, ಸೋಫಿ ಡಿವೈನ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಕನಿಕಾ ಅಹುಜಾ ಮತ್ತು ಡ್ಯಾನಿ ವ್ಯಾಟ್.
ಕೈಬಿಟ್ಟ ಆಟಗಾರ್ತಿಯರು: ದಿಶಾ ಕಸಟ್, ಇಂದ್ರಾಣಿ ರಾಯ್, ಶ್ರದ್ಧಾ ಪೋಕರ್ಕರ್, ಸಿಮ್ರನ್ ಬಹದ್ದೂರ, ಶುಭಾ ಸತೀಶ್, ನಾದಿನ್ ಡಿ ಕ್ಲಾರ್ಕ್.
ಮುಂಬೈ ಇಂಡಿಯನ್ಸ್
ಉಳಿಸಿಕೊಂಡ ಆಟಗಾರ್ತಿಯರು: ಹರ್ಮನ್‌ಪ್ರೀತ್ ಕೌರ್, ಹೀಲಿ ಮ್ಯಾಥ್ಯೂಸ್, ಅಮೆಲಿಯಾ ಕೆರ್, ಕ್ಲೋಯ್ ಟ್ರಯಾನ್, ಜಿಂತಿಮಣಿ ಕಲಿತಾ, ನ್ಯಾಟ್ ಸೀವರ್-ಬ್ರಂಟ್, ಪೂಜಾ ವಸ್ತ್ರಾಕರ್, ಸೈಕಾ ಇಶಾಕ್, ಯಾಸ್ತಿಕಾ ಭಾಟಿಯಾ, ಶಬ್ನಿಮ್ ಇಸ್ಮಾಯಿಲ್, ಸಂಜೀವನ್ ಸಜಾನಾ, ಅಮನ್‌ದೀಪ್ ಕೌರ್, ಕೀರ್ತನಾ ಬಾಲಕೃಷ್ಣನ್, ಅಮನ್ಜೋತ್ ಕೌರ್.
ಕೈಬಿಟ್ಟ ಆಟಗಾರ್ತಿಯರು: ಇಸ್ಸಿ ವಾಂಗ್, ಪ್ರಿಯಾಂಕಾ ಬಾಲಾ, ಹುಮೈರಾ ಕಾಜಿ, ಫಾತಿಮಾ ಜಾಫರ್.
ಡೆಲ್ಲಿ ಕ್ಯಾಪಿಟಲ್ಸ್
ಉಳಿಸಿಕೊಂಡ ಆಟಗಾರ್ತಿಯರು: ಜೆಮಿಮಾ ರಾಡ್ರಿಗಸ್, ಮೆಗ್ ಲ್ಯಾನಿಂಗ್, ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸಿ, ಅನ್ನಾಬೆಲ್ ಸದರ್ಲ್ಯಾಂಡ್, ಅರುಂದತಿ ರೆಡ್ಡಿ, ಜೆಸ್ ಜೊನಾಸೆನ್, ಮರಿಜಾನ್ನೆ ಕಪ್, ಸ್ನೇಹಾ ದೀಪ್ತಿ, ಮಿನ್ನು ಮಣಿ, ರಾಧಾ ಯಾದವ್, ಶಿಖಾ ಪಾಂಡೆ, ತನಿಯಾ ಭಾಟಿಯಾ, ಟಿಟಾಸ್ ಸಧು.
ಕೈಬಿಟ್ಟ ಆಟಗಾರ್ತಿಯರು: ಲಾರಾ ಹ್ಯಾರಿಸ್, ಅಶ್ವನಿ ಕುಮಾರಿ, ಪೂನಂ ಯಾದವ್, ಅಪರಣಾ ಮೊಂಡಲ್
ಯುಪಿ ವಾರಿಯರ್ಸ್
ಉಳಿಸಿಕೊಂಡ ಆಟಗಾರ್ತಿಯರು: ಅಲಿಸ್ಸಾ ಹೀಲಿ, ಕಿರಣ್ ನವಗಿರೆ, ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮಾ, ಚಾಮರಿ ಅಥಾಪತ್ತು, ಗ್ರೇಸ್ ಹ್ಯಾರಿಸ್, ಸೋಫಿ ಎಕ್ಲೆಸ್ಟೋನ್, ತಹ್ಲಿಯಾ ಮೆಗ್ರಾತ್, ರಾಜೇಶ್ವರಿ ಗಾಯಕ್ವಾಡ್, ಸೈಮಾ ಠಾಕೋರ್, ಅಂಜಲಿ ಸರ್ವಾಣಿ, ಗೌಹರ್ ಸುಲ್ತಾನಾ, ಪೂನಂ ಖೇಮ್ನಾರ್, ಉಮಾ ಚೆಟ್ರಿ, ವೃಂದಾ ದಿನೇಶ್.
ಕೈಬಿಟ್ಟ ಆಟಗಾರ್ತಿಯರು: ಲಾರೆನ್ ಬೆಲ್, ಪಾರ್ಶವಿ ಚೋಪ್ರಾ, ಲಕ್ಷ್ಮಿ ಯಾದವ್, ಎಸ್ ಯಶಸ್ರಿ.
ಗುಜರಾತ್ ಜೈಂಟ್ಸ್
ಉಳಿಸಿಕೊಂಡ ಆಟಗಾರ್ತಿಯರು: ಬೆತ್ ಮೂನಿ, ಆಶ್ಲೀಗ್ ಗಾರ್ಡ್ನರ್, ಲಾರಾ ವೊಲ್ವಾರ್ಡ್, ದಯಾಲನ್ ಹೇಮಲತಾ, ತನುಜಾ ಕನ್ವರ್, ಶಬ್ನಮ್ ಶಕಿಲ್, ಫೋಬೆ ಲಿಚ್‌ಫೀಲ್ಡ್, ಪ್ರಿಯಾ ಮಿಶ್ರಾ, ತ್ರಿಶಾ ಪೂಜಿತಾ, ಮನ್ನತ್ ಕಶ್ಯಪ್, ಮೇಘನಾ ಸಿಂಗ್
ಕೈಬಿಟ್ಟ ಆಟಗಾರ್ತಿಯರು: ಸ್ನೇಹ ರಾಣಾ, ಕ್ಯಾಥರಿನ್ ಬ್ರೈಸ್, ವೇದಾ ಕೃಷ್ಣಮೂರ್ತಿ, ತರನ್ನುಮ್ ಪಠಾಣ್, ಲಿಯಾ ತಹುಹು.