Thursday, 12th December 2024

ಜೂ.25 ರವರೆಗೆ ಸುಶೀಲ್ ಕುಮಾರ್ ನ್ಯಾಯಾಂಗ ಬಂಧನ ವಿಸ್ತರಣೆ

ನವದೆಹಲಿ: ಯುವ ಕುಸ್ತಿಪಟು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ, ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರ ನ್ಯಾಯಾಂಗ ಬಂಧನವನ್ನು ಜೂ.25 ರವರೆಗೆ ವಿಸ್ತರಿಸಿದೆ.

10 ದಿನಗಳ ನ್ಯಾಯಾಂಗ ಬಂಧನದ ಕೊನೆಯಲ್ಲಿ ಸುಶೀಲ್ ಅವರನ್ನು ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ರೀತಿಕಾ ಜೈನ್ ಅವರ ಮುಂದೆ ಹಾಜರುಪಡಿಸ ಲಾಯಿತು. ಅಂತರರಾಷ್ಟ್ರೀಯ ಕುಸ್ತಿಪಟು ಕೊಲೆ, ನರಹತ್ಯೆ ಮತ್ತು ಅಪಹರಣದ ಆರೋಪ ಎದುರಿಸುತ್ತಿದ್ದಾರೆ.

ಮುಖ್ಯ ಅಪರಾಧಿ ಮತ್ತು ಮಾಸ್ಟರ್ ಮೈಂಡ್ ಸುಶೀಲ್ ಕುಮಾರ್  ಹಾಗೂ ಸಹ ಆರೋಪಿ ಅಜಯ್ ಕುಮಾರ್ ಸೆಹ್ರಾವತ್ ಅವರೊಂದಿಗೆ ಸುಶೀಲ್ ಕುಮಾರ್ ಅವರನ್ನು ಮೇ 23 ರಂದು ಬಂಧಿಸಲಾಯಿತು. ಅವರು ಈಗಾಗಲೇ 10 ದಿನಗಳ ನ್ಯಾಯಾಂಗ ಕಸ್ಟಡಿ ವಿಚಾರಣೆಗೆ ಒಳಗಾಗಿದ್ದಾರೆ.