ನವದೆಹಲಿ: ಭಾರತದ ದಿಯಾ ಚಿತಾಳೆ ಮತ್ತು ಸ್ವಸ್ತಿಕಾ ಘೋಷ್, ಟ್ಯುನೀಷಿಯಾದ ಟ್ಯುನಿಸ್‌ನಲ್ಲಿ ನಡೆದ ಡಬ್ಲ್ಯುಟಿಟಿ ಯೂತ್ ಸ್ಟಾರ್ ಕಂಟೆಂಡರ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದರು.
ಸೋಮವಾರ ನಡೆದ19 ವರ್ಷದೊಳಗಿನವರ ಬಾಲಕಿಯರ ಡಬಲ್ಸ್ ಫೈನಲ್‌ನಲ್ಲಿ ಈ ಜೋಡಿ ರಷ್ಯಾದ ಜೋಡಿಯೆದುರು ಸೋತು ಶರಣಾಯಿತು. ನತಾಲಿಯಾ ಮಲಿನಿನಾ ಮತ್ತು ಎಲಿಝಬೆತ್ ಅಬ್ರಾಮಿಯನ್ ಜೋಡಿ 11-3, 11-6, 11- 7 ರಿಂದ ಭಾರತದ ಜೋಡಿಯನ್ನು ಸೋಲಿಸಿತು.
ಇದಕ್ಕೆ ಮೊದಲು ಸೆಮಿಫೈನಲ್‌ನಲ್ಲಿ ಭಾರತದ ಯುವ ಆಟಗಾರ್ತಿಯರು, ಜೆಕ್ ರಿಪಬ್ಲಿಕನ್‌ನ ಲಿಂಡಾ ಝಡೆರೊವಾ ಮತ್ತು ಕ್ರೊವೇಷ್ಯಾದ ಹನಾ ಅರಪೋವಿಕ್ ಜೋಡಿಯನ್ನು ಸೋಲಿಸಿದ್ದರು.
ಸಿಂಗಲ್ಸ್‌ನಲ್ಲೂದಿಯಾ 8-11, 11-7, 11-6, 8-11, 7-11 ರಿಂದ ರಷ್ಯದ ವ್ಲಾಡಾ ವೊರೊನಿನಾ ಅವರಿಗೆ ಮಣಿದರೆ, ಪ್ರಸಕ್ತ ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಆಗಿರುವ ಸ್ವಸ್ತಿಕಾ ಕೂಡ 11-8, 4-11, 11-9, 3-11, 6-11 ರಿಂದ ಟರ್ಕಿಯ ಏಸ್ ಹೆರಾಕ್ ಅವರಿಗೆ ಸೋತಿದ್ದರು.