ಮುಂಬೈ: ಮುಂದಿನ ಫೆಬ್ರವರಿಯಲ್ಲಿ ವೆಸ್ಟ್ ಇಂಡೀಸ್ನಲ್ಲಿ ಐಸಿಸಿ ಪುರುಷರ ಅಂಡರ್ 19 ವಿಶ್ವಕಪ್ ಟೂರ್ನಿ ಆರಂಭವಾಗ ಲಿದ್ದು, ಎಸಿಸಿ ಅಂಡರ್ 19 ಏಷ್ಯಾ ಕಪ್ 2021ಕ್ಕೆ ಭಾರತೀಯ ಕ್ರಿಕೆಟ್ನ ಕಿರಿಯರ ಆಯ್ಕೆ ಸಮಿತಿ 20 ಸದಸ್ಯರ ಅಂಡರ್ 19 ತಂಡವನ್ನು ಪ್ರಕಟ ಮಾಡಿದೆ.
ಯುಎಇನಲ್ಲಿ ಈ ಟೂರ್ನಿ ಆಯೋಜನೆ ಮಾಡಲಾಗಿದ್ದು ಡಿ.23ಕ್ಕೆ ಚಾಲನೆ ಸಿಗಲಿದೆ. ಜನವರಿ 1ರ ವರೆಗೆ ನಡೆಯಲಿದೆ. ಭಾರತ ಅಂಡರ್ 19 ತಂಡಕ್ಕೆ ಯಶ್ ಧುಲ್ ಅವರನ್ನು ನಾಯಕನಾಗಿ ನೇಮಕ ಮಾಡಲಾಗಿದೆ. 2021-22 ವಿನೂ ಮಂಕಡ್ ಟ್ರೋಫಿ ಯಲ್ಲಿ ಯಶ್ ಅವರು ಅತಿ ಹೆಚ್ಚು ರನ್ ಗಳಿಸಿದ್ದಾರೆ. ಕಳೆದ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 18ರ ವರೆಗೆ ನಡೆದಿತ್ತು. ಡೆಲ್ಲಿ ಕ್ರಿಕೆಟ್ ಪರವೂ ಇವರು ಆಡಿ 302 ರನ್ ಬಾರಿಸಿದ್ದರು.
ವಿನೂ ಮಂಕಡ್ ಟ್ರೋಫಿಯಲ್ಲಿ ನಾಗಾಲೆಂಡ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದ ವಾಸು ಸತ್ಸ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.
ವೆಸ್ಟ್ ಇಂಡೀಸ್ನಲ್ಲಿ ಐಸಿಸಿ ಪುರುಷರ ಅಂಡರ್ 19 ವಿಶ್ವಕಪ್ ಟೂರ್ನಿ ಆರಂಭವಾಗ ಲಿದೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ವಿಶ್ವಕಪ್ನಲ್ಲಿ ಸ್ಥಾನ ಪಡೆಯುವುದು ಖಚಿತ. ಕಳೆದ ಸೀಸನ್ನಲ್ಲಿ ಪ್ರಿಯಾಂ ಗರ್ಗ್ ನಾಯಕತ್ವದ ಭಾರತ ಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋಲು ಕಂಡಿತ್ತು.
ಏಷ್ಯಾ ಕಪ್ಗೆ ಭಾರತ ಅಂಡರ್ 19 ತಂಡ: ಹರ್ನೂರ್ ಸಿಂಗ್ ಪನ್ನು, ಅಂಗ್ಕ್ರಿಶ್ ರಘುವನ್ಶಿ, ಅನ್ಶ್ ಗೊಸಾಯ್, ಎಸ್ ಕೆ ರಶೀದ್, ಯಶ್ ಧುಲ್ (ನಾಯಕ), ಅನೇಶ್ವರ್ ಗೌತಮ್, ಸಿದ್ಧಾರ್ಥ್ ಯಾದವ್, ಕೌಶಲ್ ತಂಬೆ, ನಿಶಾಂತ್ ಸಿಧು, ದಿನೇಶ್ ಬನಾ (ವಿಕೆಟ್ ಕೀಪರ್), ಆರಾಧ್ಯ ಯಾದವ್ (ವಿಕೆಟ್ ಕೀಪರ್), ರಜಂಗಡ್ ಬವಾ, ರಾಜವರ್ಧನ್ ಹಂಗರ್ಗೇಕರ್, ಗರ್ವ್ ಸಾಂಗ್ವಾನ್, ರವಿ ಕುಮಾರ್, ರಿತಿಶ್ ರೆಡ್ಡಿ, ಮನವ್ ಪರಕ್, ಅಮ್ರಿತ್ ರಾಜ್ ಉಪಧ್ಯಾಯ್, ವಿಕ್ಕಿ ಒಸ್ಟ್ವಾಲ್, ವಾಸು ವತ್ಸ್.