Thursday, 19th September 2024

Yashasvi Jaiswal: ವಿಶ್ವ ದಾಖಲೆ ಸನಿಹ ಯಶಸ್ವಿ ಜೈಸ್ವಾಲ್

Yashasvi Jaiswal

ಚೆನ್ನೈ: ಟೀಮ್‌ ಇಂಡಿಯಾದ ಉದಯೋನ್ಮುಖ ಎಡಗೈ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌(Yashasvi Jaiswal) ಬಾಂಗ್ಲಾದೇಶ(India Vs Bangladesh) ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸುವ ಸನಿಹದಲ್ಲಿದ್ದಾರೆ. ಜೈಸ್ವಾಲ್‌ ಈ ಟೆಸ್ಟ್‌ ಸರಣಿಯಲ್ಲಿ ಕೇವಲ 8 ಸಿಕ್ಸರ್‌ ಬಾರಿಸಿದರೆ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಪ್ರಸ್ತುತ ಟೆಸ್ಟ್ ಕ್ರಿಕೆಟ್‌ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ನ್ಯೂಜಿಲ್ಯಾಂಡ್‌ ತಂಡದ ಮಾಜಿ ಸ್ಫೋಟಕ ಬ್ಯಾಟರ್‌, ಹಾಲಿ ಇಂಗ್ಲೆಂಡ್‌ ಟೆಸ್ಟ್‌ ತಂಡದ ಕೋಚ್‌ ಆಗಿರುವ ಬ್ರೆಂಡನ್ ಮೆಕಲಮ್ ಹೆಸರಿನಲ್ಲಿದೆ. ಮೆಕಲಮ್ 2014 ರಲ್ಲಿ 9 ಟೆಸ್ಟ್‌ ಪಂದ್ಯಗಳಿಂದ 33 ಸಿಕ್ಸರ್‌ ಬಾರಿಸಿದ್ದರು. ಸದ್ಯ ಜೈಸ್ವಾಲ್‌ ಕ್ಯಾಲೆಂಡರ್ ವರ್ಷದಲ್ಲಿ 6 ಟೆಸ್ಟ್‌ ಪಂದ್ಯಗಳನ್ನಾಡಿ 26 ಸಿಕ್ಸರ್‌ ಬಾರಿಸಿದ್ದಾರೆ. 8 ಸಿಕ್ಸರ್‌ ಬಾರಿಸಿದರೆ 10 ವರ್ಷಗಳ ಹಿಂದೆ ಮೆಕಲಮ್‌ ನಿರ್ಮಿಸಿದ್ದ ದಾಖಲೆ ಪತನಗೊಳ್ಳಲಿದೆ. ಭಾರತ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜೈಸ್ವಾಲ್‌ ಸದ್ಯ 13ನೇ ಸ್ಥಾನಿಯಾಗಿದ್ದಾರೆ. 29 ಸಿಕ್ಸರ್‌ ಬಾರಿಸಿದ್ದಾರೆ.

ಇದನ್ನೂ ಓದಿ Virat Kohli: 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವ ದಾಖಲೆ ಬರೆಯಲು ಸಜ್ಜಾದ ಕಿಂಗ್‌ ಕೊಹ್ಲಿ

ಜೈಸ್ವಾಲ್ ಈ ವರ್ಷದ ಆರಂಭದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಜೈಸ್ವಾಲ್ ಎರಡು ಶತಕ ಮತ್ತು ಮೂರು ಅರ್ಧಶತಕಗಳನ್ನು ಬಾರಿಸಿ 712 ರನ್ ಬಾರಿಸಿದ್ದರು. ಒಟ್ಟಾರೆಯಾಗಿ ಜೈಸ್ವಾಲ್‌ ಭಾರತ 9 ಟೆಸ್ಟ್ ಪಂದ್ಯ ಆಡಿ 1028 ರನ್‌ ಕಲೆ ಹಾಕಿದ್ದಾರೆ.

ಪಂದ್ಯಗಳಲ್ಲಿ 3 ಶತಕಗಳ ಸಹಾಯದಿಂದ 1028 ರನ್ ಗಳಿಸಿದ್ದಾರೆ. ಈ ಪೈಕಿ 2 ದವಿಶತಕ ಮತ್ತು 3 ಶತಕ ಬಾರಿಸಿದ್ದಾರೆ. 2023ರಲ್ಲಿ ವಿಂಡೀಸ್‌ ಪ್ರವಾಸದಲ್ಲಿ ಜೈಸ್ವಾಲ್‌ ಭಾರತ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಪಂದ್ಯದಲ್ಲಿಯೇ 171 ರನ್‌ ಗಳಿಸಿ ಶತಕ ಬಾರಿಸಿ ಮಿಂಚಿದ್ದರು.

ಕಪಿಲ್, ಗಂಗೂಲಿ ದಾಖಲೆ ಮೇಲೆ ಪಂತ್‌ ಕಣ್ಣು

2022ರ ಡಿಸೆಂಬರ್‌ನಲ್ಲಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದ ಬಳಿಕ ಪಂತ್‌ ಟೆಸ್ಟ್‌  ಕೀಪರ್‌ ರಿಷಭ್‌ ಪಂತ್‌(Rishabh Pant) ಅವರಿಗೂ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಮಾಜಿ ದಿಗ್ಗಜ ಆಟಗಾರರಾದ ಕಪಿಲ್ ದೇವ್(kapil dev) ಮತ್ತು ಸೌರವ್‌ ಗಂಗೂಲಿ(Sourav Ganguly) ಅವರ ದಾಖಲೆ ಮುರಿಯುವ ಅವಕಾಶವಿದೆ.

ಪಂತ್‌ ಬಾಂಗ್ಲಾ ವಿರುದ್ಧ ಕೇವಲ ಮೂರು ಸಿಕ್ಸರ್‌ ಬಾರಿಸಿದರೆ ಭಾರತ ಪರ ಟೆಸ್ಟ್‌ನಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿದ ಆಟಗಾರರ ಗಂಗೂಲಿ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. 7 ಸಿಕ್ಸರ್‌ ಬಾರಿಸಿದರೆ ಕಪಿಲ್‌ ದೇವ್‌ ದಾಖಲೆ ಮುರಿಯಲಿದ್ದಾರೆ. ಸದ್ಯ ಕಪಿಲ್‌ ದೇವ್‌ 61 ಸಿಕ್ಸರ್‌ ಬಾರಿಸಿ 6ನೇ ಸ್ಥಾನದಲ್ಲಿದ್ದರೆ, ಗಂಗೂಲಿ 57 ಸಿಕ್ಸರ್‌ನೊಂದಿಗೆ 7ನೇ ಸ್ಥಾನದಲ್ಲಿದ್ದಾರೆ. ರಿಷಭ್‌ ಪಂತ್‌ 55 ಸಿಕ್ಸರ್‌ ಬಾರಿಸಿ 8ನೇ ಸ್ಥಾನಿಯಾಗಿದ್ದಾರೆ. ಕಪಿಲ್‌ ಮತ್ತು ಗಂಗೂಲಿಯನ್ನು ಹಿಂದಿಕ್ಕಿದ್ದರೆ 6ನೇ ಸ್ಥಾನಕ್ಕೇರಲಿದ್ದಾರೆ.