Sunday, 15th December 2024

Yogi Adityanath: ನಗು ಮೊಗದೊಂದಿಗೆ ಕ್ರಿಕೆಟ್‌ ಆಡಿದ ಯೋಗಿ ಆದಿತ್ಯನಾಥ್‌; ಇಲ್ಲಿದೆ ವಿಡಿಯೊ

Yogi Adityanath

ಲಕ್ನೋ: ಉತ್ತರ ಪ್ರದೇಶದ ಖಡಕ್‌ ಮುಖ್ಯಮಂತ್ರಿ, ಪ್ರಬಲ ಹಿಂದುತ್ವವಾದಿ, ಯೋಗಿ ಆದಿತ್ಯನಾಥ್‌(Yogi Adityanath) ಅವರು ಕ್ರಿಕೆಟ್‌ ಆಡಿದ ಫೋಟೊ ವೈರಲ್‌ ಆಗಿದೆ. ಲಕ್ನೋದಲ್ಲಿ ನಡೆದ 36ನೇ ಅಖಿಲ ಭಾರತ ಅಡ್ವೊಕೇಟ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಯ ಸಂದರ್ಭದಲ್ಲಿ ಆದಿತ್ಯನಾಥ್‌ ಬ್ಯಾಟಿಂಗ್‌ ನಡೆಸಿ ಪಂದ್ಯಾವಳಿಗೆ ಚಾಲನೆ ನೀಡಿದರು.

ಸದಾ ಗಂಭೀರ ಹಾವ-ಭಾವದಲ್ಲಿರುವ ಆದಿತ್ಯನಾಥ್‌ ಬ್ಯಾಟ್‌ ಹಿಡಿದು ಕ್ರೀಸ್‌ಗೆ ಬಂದ ವೇಳೆ ನಗುಮೊಗದೊಂದಿಗೆ ಕಾಣಿಸಿಕೊಂಡರು. ಎಂದೆಡರು ಎಸೆತಗಳಿಗೆ ಬ್ಯಾಟ್‌ ಬೀಸಿ ಸಂತಸಗೊಂಡರು. ಕ್ರಿಕೆಟ್‌ ಆಡುತ್ತಿರುವ ಫೋಟೊವನ್ನು ಆದಿತ್ಯನಾಥ್‌ ತಮ್ಮ ಟ್ವಿಟರ್‌ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ ಕಂಡ ನೆಟ್ಟಿಗರು. ಮೊದಲ ಬಾಎರಿಗೆ ನಿಮ್ಮನ್ನು ಇಷ್ಟೊಂದು ನಗುಮೊಗದೊಂದಿಗೆ ನೋಡುತ್ತಿದ್ದೇವೆ ಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ IND vs BAN 1st T20: ಅರ್ಷದೀಪ್‌ ಬೌಲಿಂಗ್‌ ದಾಳಿಗೆ ತತ್ತರಿಸಿದ ಬಾಂಗ್ಲಾ; ಭಾರತಕ್ಕೆ 7 ವಿಕೆಟ್‌ ಜಯ

ಉದ್ಘಾಟನೆ ಬಳಿಕ ಮಾತನಾಡಿದ ಆದಿತ್ಯನಾಥ್‌, ಕ್ರಿಕೆಟ್‌ ಎಂದರೆ ನನಗೂ ಅಚ್ಚುಮೆಚ್ಚು. ಬಾಲ್ಯದಲ್ಲಿ ನಾನು ಕೂಡ ಕ್ರಿಕೆಟ್‌ ಆಡುತ್ತಿದ್ದೆ. ಕಳೆದ 10 ವರ್ಷಗಳಲ್ಲಿ, ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಅವರ ಮಾರ್ಗದರ್ಶನದಲ್ಲಿ, ದೇಶದಲ್ಲಿ ಕ್ರೀಡಾ ಚಟುವಟಿಕೆಗಳು ವಿಸ್ತರಿಸಿದೆ. ‘ಖೇಲೋ ಇಂಡಿಯಾ’, ‘ಫಿಟ್ ಇಂಡಿಯಾʼ ಅಭಿಯಾನದ ಅಡಿ ದೇಶದಾದ್ಯಂತ ಹಲವು ಸ್ಪರ್ಧೆಗಳು ನಡೆಯುತ್ತಿವೆʼ ಎಂದರು.

ಕೆಲ ದಿನಗಳ ಹಿಂದೆ ಆದಿತ್ಯನಾಥ್(Yogi Adityanath) ಅವರ ಆಕ್ಷೇಪಾರ್ಹ ವಿಡಿಯೋ(Objectionable Videos) ಪೋಸ್ಟ್‌ ಮಾಡಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸರು ಎಫ್‌ಐಆರ್‌(FIR) ದಾಖಲಿಸಿದ್ದರು. ಆದಿತ್ಯನಾಥ್ ಭೋಜ್‌ಪುರಿ ಹಾಡುಗಳಿಗೆ ನೃತ್ಯ ಮಾಡುತ್ತಿರುವ ಎಡಿಟೆಡ್‌ ವಿಡಿಯೊ ವೈರಲ್‌ ಆಗಿತ್ತು. ಸೈಬರ್ ಠಾಣಾ ಮಾಧ್ಯಮ ಕೋಶದ ಉಸ್ತುವಾರಿ ಪ್ರವೀಣ್ ಸಿಂಗ್ ಅವರ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.