Thursday, 12th December 2024

ಅಗತ್ಯ ಸೇವೆ ಹೊರತುಪಡಿಸಿ ಪಾಸ್ ಕಡ್ಡಾಯ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು:

ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾರಿಗೆಲ್ಲಾ ಪಾಸ್ ಗಳು ಅಗತ್ಯವಿದೆ ಎಂದು ಕೆ.ಎಸ್.ಪಿ ಕ್ಲಿಯರ್ ಪಾಸ್ ಎಂದು ಕೋವಿಡ್ ೧೯ ಪಾಸ್ ಪ್ರಶ್ನೋತ್ತರಗಳು ಎಂದು ರಾಜ್ಯ ಪೊಲೀಸ್ ಇಲಾಖೆ ಪ್ರಕಟಣೆಯೊಂದನ್ನು ಹೊರಡಿಸಿದೆ.

ಅದರಲ್ಲಿ ಅಗತ್ಯ ಕರ್ತವ್ಯ ದಲ್ಲಿರುವ ಸರಕಾರಿ ಸಿಬ್ಬಂದಿ, ಅಧಿಕಾರಿಗಳು, ತಮ್ಮ ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣಿಸಲು ಅವರಿಗೆ ಅನುಮತಿ ಇದೆ. ಆದರೆ, ಅವರು, ತಮ್ಮ ಇಲಾಖೆಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಕೊಂಡೋಯ್ಯಬೇಕು ಅಂತವರಿಗೆ ಪಾಸ್ ಅಗತ್ಯವಿಲ್ಲ.

ಯಾರಿಗೆ ಪಾಸ್ ಬೇಕು
ಅಗತ್ಯ ಸರಕುಗಳು ಮತ್ತು ಸೇವೆಗಳ ಸರಬರಾಜಿನಲ್ಲಿ ತೊಡಗಿರುವ ಖಾಸಗಿ ವ್ಯಕ್ತಿಗಳು ಲಾಕ್ ಡೌನ್ ಸಮಯದಲ್ಲಿ ಮುಕ್ತವಾಗಿ ಪ್ರಯಾಣಿಸಲು ಪಾಸ್ ಅಗತ್ಯವಿರುತ್ತದೆ. ಸರಬರಾಜು ಸರಪಳಿ ನಿರ್ವಹಣೆಗೆ ಸಂಬಂಧಿಸಿದ ಕೆಲಸಕ್ಕೆ ಮಾತ್ರ ಹಾಜರಾಗುವುದು ಪಾಸ್ ಗೆ ಅರ್ಹವಾದ ವಿಭಾಗಗಳಲ್ಲಿ ಪಡೆಯಬಹುದು.
ಆಸ್ಪತ್ರೆಗೆ ಹೋಗಲು ಪಾಸ್ ಅಗತ್ಯವಿದೆ. ಈ ಪಾಸ್ ಕೇವಲ ೧೨ ಗಂಟೆಗಳು ಮಾತ್ರ ಚಲಾವಣೆಯಲ್ಲಿರುತ್ತದೆ.
ಅಂತರ್ ಜಿಲ್ಲೆಗೆ ಪ್ರಯಾಣಿಸಲು ಪಾಸ್ ಗಳ ವ್ಯವಸ್ಥೆ ಇದ್ದು, ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದರೆ ಸಂಬಂಧಪಟ್ಟ ಡಿಸಿಪಿಗಳಿಗೆ ಮಾಹಿತಿ ಒದಗಿಸಿ ಪಾಸ್ ಗಳನ್ನು ಪಡೆಯಬಹುದು.

ಔಷಧಿಗಳನ್ನು ಪಡೆಯಲು ಪಾಸ್ ಅವಶ್ಯಕತೆ ಇಲ್ಲ. ದಿನಸಿ ವಸ್ತುಗಳನ್ನು ಖರೀದಿಸಲು ಪಾಸ್ ನ ಅಗತ್ಯವಿಲ್ಲ. ಆದರೆ, ವಾಹನಗಳಲ್ಲಿ ಸಂಚರಿಸಿದರೆ ಮಾತ್ರ ಪಾಸ್ ಬೇಕಾಗುತ್ತದೆ. ಬೆಳಗ್ಗೆ ವಾಕ್ ಮತ್ತು ಜಾಗ್ ಮಾಡಲು ಪಾಸ್ ಬೇಕಿಲ್ಲ. ಅದರ ಬದಲಾಗಿ ಮನೆಯಲ್ಲೆ ವಾಕ್‌ ಮತ್ತು ಜಾಗ್ ಮಾಡಬೇಕು. ಬ್ಯಾಂಕಿಗೆ ಹೋಗಲು ಮತ್ತು ಹಣ ಪಡೆಯುವ ಸಲುವಾಗಿ ಹೋಗುವವರಿಗೆ ಪಾಸ್ ಅಗತ್ಯವಿಲ್ಲ. ಆದರೆ, ಸರಿಯಾಗಿ ಪೊಲೀಸರಿಗೆ ಮಾಹಿತಿ ಒದಗಿಸಬೇಕು. ವಯಸ್ಸಾದ ಪೊಷಕರನ್ನು ಭೇಟಿ ಮಾಡಲು ಯಾವುದೇ ಪಾಸ್ ಗಳು ಬೇಡ. ಅವರಿಗೆ ಆನ್ ಲೈನ್ ಮೂಲಕ ವ್ಯವಸ್ಥೆ ಮಾಡಬಹುದು. ಇಲ್ಲವೇ ಸಹಾಯವಾಣಿ ೧೦೦ ಕ್ಕೆ ಕರೆ ಮಾಡಬಹುದು.

ಯಾವುದೇ ಕಾರಣಕ್ಕೂ ಸಾಕು ಪ್ರಾಣಿಗಳಿಗೆ ಆಹಾರ ಖರೀದಿಸಲು ಹೊರಗಡೆ ಬರಬಾರದು. ಆನ್ ಲೈನ್ ಮೂಲಕ ಖರೀದಿ ವ್ಯವಸ್ಥೆ ಬಳಕೆ ಮಾಡಬಹುದು.
ದಿನಸಿ ಅಂಗಡಿಗಳನ್ನು ತೆರೆಯಲು ಪಾಸ್ ಅಗತ್ಯವಿಲ್ಲ. ಆದರೆ, ಸಿಬ್ಬಂದಿ‌‌ ದೂರದಿಂದ ಪ್ರಯಾಣಿಸುವವರಿದ್ದರೆ ಅಗತ್ಯ ಪಾಸ್ ಗಳನ್ನು ಆನ್ ಲೈನ್ ಮೂಲಕ ಪಡೆಯಬೇಕು.

ಆನ್ ಲೈನ್‌ ಕೆ.ಎಸ್.ಪಿ ಕ್ಲೀಯರ್ ಪಾಸ್ ಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಸಹಾಯವಾಣಿ ಸಂ.೦೮೦-೨೨೯೪೨೨೦೦, ೦೮೦-೨೨೯೪೨೩೨೫
೦೮೦-೨೨೯೪೨೩೩೦ ಇವುಗಳಿಗೆ ಸಂಪರ್ಕಿಸಬಹುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.