Saturday, 14th December 2024

ಅಜ್ಮೀರ್ ಯಾತ್ರೆಯಿಂದ ಕರೋನಾ ತೀರ್ಥಯಾತ್ರೆ!

ವಿಶ್ವವಾಣಿ‌ ಸುದ್ದಿಮನೆ
ಬೆಂಗಳೂರು: 
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದಾರೆ. ಇಂದು 53 ಮಂದಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 848ಕ್ಕೆ ಏರಿಕೆಯಾಗಿದೆ. ರಾಜಸ್ಥಾನದ ಅಜ್ಮೀರ್ ಪ್ರವಾಸದಿಂದ ಹಿಂದಿರುಗಿದ 22 ಮಂದಿಗೆ ಕರೋನಾ ಸೋಂಕು ತಗುಲಿದೆ.
 ಕರೋನಾ ಗೆ ಮತ್ತೊಂದು ಬಲಿಯಾಗಿದ್ದು, ಸಾವಿನ ಸಂಖ್ಯೆ ೩೧ಕ್ಕೆ ಹೆಚ್ಚಿದೆ. ಅಲ್ಲದೆ, ರವಿವಾರ ಒಂದೇ ದಿನ ೫೪ ಹೊಸ ಕೋವಿಡ್ ೧೯ ಪಾಸಿಟಿವ್ ವರದಿಗಳು ದೃಢಪಟ್ಟಿದೆ. ಬೆಂಗಳೂರು ನಗರ ನಿವಾಸಿಯಾದ ೫೬ ವರ್ಷದ ಮಹಿಳೆ ಮೇ ೪ ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅದರ ನಂತರ ಮೇ ೬ ರಂದು ಎರಡನೇ ಬಾರಿಗೆ ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿನ ಮಾದರಿಯನ್ನು ಕೋವಿಡ್ ೧೯ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವರು ಮೇ ೭ ರಂದು ನಿಧನರಾಗಿದ್ದು, ಇವರ ಕೋವಿಡ್ ೧೯ ಫಲಿತಾಂಶವು ಮೇ ೯ ರಂದು ಪಾಸಿಟಿವ್ ಎಂದು ದೃಢಪಟ್ಟಿದೆ.
ಕೋವಿಡ್ ೧೯ ಪೀಡಿತರ ಪೈಕಿ ೪೨೨ ಜನರು ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನುಳಿದ ೩೯೪ ಸಕ್ರಿಯ ಪ್ರಕರಣಗಳ ಪೈಕಿ ೩೮೮ ರೋಗಿಗಳನ್ನು ಆಯಾ ಜಿಲ್ಲೆಯ ಗೊತ್ತುಪಡಿಸಿದ ಆಸ್ಪತ್ರೆಗಳಲ್ಲಿ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ೬ ಜನರನ್ನು ಐಸಿಯುನಲ್ಲಿಡಲಾಗಿದೆ.
ದಾವಣಗೆರೆ ೧, ಬೆಂಗಳೂರು ನಗರ ೩, ಉತ್ತರ ಕನ್ನಡ ೭, , ಚಿಕ್ಕಬಳ್ಳಾಪುರ ೧, ಕಲಬುರಗಿ ೪, ಶಿವಮೊಗ್ಗ ೮, ಬಾಗಲಕೋಟೆ ೮, ಬೆಳಗಾವಿ ೨೨ ಹೊಸ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಜನರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.
ರವಿವಾರ ಕಲಬುರಗಿಯಲ್ಲಿ ೧೩, ವಿಜಯಪುರ ೮, ಚಿಕ್ಕಬಳ್ಳಾಪುರ ೪, ಗದಗ ೩, ಬಾಗಲಕೋಟೆ ೩, ಮೈಸೂರು ೩, ಬೆಳಗಾವಿ ೩ ಹಾಗೂ ಇತರೆ ಒಬ್ಬ ವ್ಯಕ್ತಿಯು ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ನಿಗದಿತ ಆಸ್ಪತ್ರೆಗಳಲ್ಲಿ ೧೪೨ ಹೊಸ ಶಂಕಿತ ವ್ಯಕ್ತಿಗಳನ್ನು ಪ್ರತ್ಯೇಕವಾಗಿರಲಾಗಿದೆ.
ಐಸಿಎಂಆರ್-ಎನ್‌ಸಿಡಿಐಆರ್ ಕೋವಿಡ್ ೧೯ ಮರಣ ಪ್ರಕರಣಗಳ ಸೂಕ್ತ ದಾಖಲಾತಿಗಾಗಿ ಮಾರ್ಗಸೂಚಿಗಳನ್ನುನೀಡಲಾಗಿದೆ. ರಾಜ್ಯದ ೫೨೮ ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು ೧೭೫೫೨ ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ ಹಾಗೂ ಖಾಸಗಿ ಆಸ್ಪತ್ರೆ ಮತ್ತು ಕಾಲೇಜುಗಳಲ್ಲಿ ೧೯೫೧ ಜನರನ್ನು ತಪಾಸಣೆ ಮಾಡಲಾಗಿದೆ. ಉಳಿದಂತೆ ಇದುವರೆಗೂ ಎಲ್ಲ ಜಿಲ್ಲೆಗಳಲ್ಲಿ ೭೬೦೪೦ ಜನರಿಗೆ ಆಪ್ತ ಸಮಾಲೋಚನೆ ನಡೆಸಲಾಗಿದೆ.
ಪಾದರಾಯನಪುರದಲ್ಲಿ ನಡೆದ ಸಮುದಾಯದ ಪರೀಕ್ಷೆಯಲ್ಲಿ 11ನೇ ಕ್ರಾಸ್ ನಿವಾಸಿಗೆ ಸೋಂಕು ಕಾಣಿಸಿಕೊಂಡಿದೆ. ಈ ವ್ಯಕ್ತಿ ಕೊರೊನಾ ಸೋಂಕಿತರ ಮನೆಯ ಸುತ್ತಮುತ್ತ ಓಡಾಡಿದ್ದನು. ಇನ್ನು ಚಾಮರಾಜಪೇಟೆಯ ಆಂಧ್ರ ಮೂಲದ ವ್ಯಕ್ತಿಗೆ ಸೋಂಕು ತಗುಲಿದೆ. ಸಂಬಂಧಿಕರ ಮನೆಗೆ ಬಂದಿದ್ದ ಈ ವ್ಯಕ್ತಿ ತಪ್ಪು ಮಾಹಿತಿ ನೀಡಿ ನಗರದ ಬುಲ್‍ಟೆಂಪಲ್ ರಸ್ತೆಯ ಖಾಸಗಿ ಆಸ್ಪತ್ರೆಗೆ ಲೋ ಬಿಪಿ ಅಂತ ಹೇಳಿ ದಾಖಲಾಗಿದ್ದಾನೆ. ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಆಂಧ್ರ ಪ್ರದೇಶದಲ್ಲಿ ಸಮುದಾಯದ ಪರೀಕ್ಷೆಗೊಳಗಾಗಿದ್ದ ವ್ಯಕ್ತಿ ಬೆಂಗಳೂರಿನ ಚಾಮರಾಜಪೇಟೆಗೆ ಪತ್ನಿ ಮಗನ ಜೊತೆ ಬಂದಿದ್ದನು. ಸೋಂಕಿತನ ಜೊತೆ ಬಂದಿದ್ದ ವ್ಯಕ್ತಿ ಬೆಂಗಳೂರು ಸುತ್ತಾಡಿದ್ದಾನೆ. ಆದ್ರೆ ಆಸ್ಪತ್ರೆಗೆ ದಾಖಲಾಗುವಾಗ ತನ್ನ ಪ್ರಯಾಣದ ಮಾಹಿತಿಯನ್ನು ಬಚ್ಚಿಟ್ಟಿರುವ ವಿಷಯ ಬೆಳಕಿಗೆ ಬಂದಿದೆ.
ಇಷ್ಟು ದಿನ ಹಸಿರು ವಲಯದಲ್ಲಿದ್ದ ಶಿವಮೊಗ್ಗಕ್ಕೆ ಕರೋನಾ ಆಘಾತ ಉಂಟಾಗಿದೆ. ಜಿಲ್ಲೆಗೆ ಬಂದ 9 ತಬ್ಲಿಘಿಗಳ ಪೈಕಿ 8 ಮಂದಿಗೆ ಕರೋನಾ ಸೋಂಕು ತಗುಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಭಾನುವಾರ ಡಿಸ್ಚಾರ್ಚ್ ಆದವರು:
ರಾಜ್ಯದ ವಿವಿಧ ಜಿಲ್ಲೆಗಲ್ಲಿ ಭಾನುವಾರ 36 ಜನರು ಕರೋನಾ ವೈರಸ್‍ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಲಬುರಗಿಯಲ್ಲಿ 13 (ರೋಗಿ-502, 503, 516, 517, 518, 519, 520, 526, 527, 528, 530, 531, 532), ವಿಜಯಪುರದಲ್ಲಿ 8, (ರೋಗಿ-397, 399, 402, 407, 410, 457, 467, 511), ಚಿಕ್ಕಬಳ್ಳಾಪುರಯಲ್ಲಿ 4 (ರೋಗಿ-338, 339, 451, 488), ಗದಗನಲ್ಲಿ 3 (ರೋಗಿ-370, 396, 514) ಮೈಸೂರಿನಲ್ಲಿ 1, (ರೋಗಿ-386), ಇತರೆ ಒಬ್ಬರು (ರೋಗಿ-300), ಬೆಳಗಾವಿಯಲ್ಲಿ 3 (ರೋಗಿ-258, 284, 287) ಹಾಗೂ ಬಾಗಲಕೋಟೆ 3 (ರೋಗಿ-372, 380, 468) ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿ ಲಾಕ್ ಡೌನ್ 4.0?
ಈಗಾಗಲೇ ಲಾಕ್ ಡೌನ್ ಸಡಿಲಗೊಳಿಸಲಾಗಿದ್ದು, ಇದನ್ನೆ ಬಂಡವಾಳವನ್ನಾಗಿಸಿಕೊಡಿರುವ ಜನತೆ ಇನ್ನೂ ಸರಕಾರದ ಕೂಗು ಕೇಳದಂತಿದೆ. ಲಾಕ್ ಡೌನ್ ಸಮಯದಲ್ಲೆ ಕರೋನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಮೂರು ದಿನದಲ್ಲಿ ನೂರಕ್ಕೂ ಹೆಚ್ಚು ಸೋಂಕಿತರು ರಾಜ್ಯದಲ್ಲಿ ಪತ್ತೆಯಾಗಿರುವುದು ಆತಂಕದ ಮನೆ ಮಾಡಿದೆ. ಇದೀಗ ಸರಕಾರ ಮೇ ೧೫ ರೊಳಗೆ ಲಾಕ್ ಡೌನ್ ಬಿಗಿಗೊಳಸಲಿದೆ‌.
ರಾಜ್ಯದ ವಿವಿಧೆಡೆ ಆ್ಯಕ್ಟಿವ್ ಕೇಸ್​ಗಳ ಪಟ್ಟಿ:
ಬೆಂಗಳೂರು ನಗರ: 83
ಬೆಳಗಾವಿ: 75
ದಾವಣಗೆರೆ: 62
ಬಾಗಲಕೋಟೆ: 29
ಉತ್ತರ ಕನ್ನಡ: 28
ಕಲಬುರಗಿ: 21
ದಕ್ಷಿಣ ಕನ್ನಡ: 15
ಮಂಡ್ಯ: 14
ವಿಜಯಪುರ: 13
ಬೀದರ್: 11
ಶಿವಮೊಗ್ಗ: 8
ತುಮಕೂರು: 7
ಚಿತ್ರದುರ್ಗ: 6
ಧಾರವಾಡ: 5
ಚಿಕ್ಕಬಳ್ಳಾಪುರ: 5
ಬಳ್ಳಾರಿ: 4
ಮೈಸೂರು: 4
ಹಾವೇರಿ: 2