Thursday, 12th December 2024

ಅಧಿಕಾರಿಗಳ ವೈಫಲ್ಯದಿಂದ ಮಂಡ್ಯಕ್ಕೆ ಕರೋನಾ

ಬೆಂಗಳೂರು:
ಸರಕಾರವೇ ಈ ಹಿಂದೆ ರಾಮನಗರಕ್ಕೆ ಕೊರೊನಾ ತಂದಿಟ್ಟಿತ್ತು, ಈಗ ಮಂಡ್ಯಕ್ಕೂ ತಂದಿದ್ದು ಇದರ ಹಿಂದೆ ರಾಜಕೀಯ ಶಂಕೆ ಇದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಮುಂಬೈನಿಂದ ಸೋಂಕನ್ನು ತರುವ ಮೂಲಕ ಗ್ರೀನ್‌ಜೋನ್‌ನಲ್ಲಿದ್ದ ಜಿಲ್ಲೆಗೆ ಸರ್ಕಾರವೇ ಸೋಂಕು ಹರಡುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಮಂಡ್ಯಕ್ಕೆ ತಂದಿದ್ದ ಮೃತ ವ್ಯಕ್ತಿಯ ಜೊತೆ ಬಂದವರಲ್ಲಿ 5 ಮಂದಿಗೆ ಪಾಸಿಟಿವ್ ಇತ್ತು. ಮಂಡ್ಯ ಜಿಲ್ಲೆಗೆ ಮುಂಬೈನಿಂದ ಸುಮಾರು 7 ರಿಂದ 8 ಸಾವಿರ ಮಂದಿ ಬಂದಿದ್ದಾರೆ. ಅವರನ್ನು ಸರಿಯಾದ ರೀತಿಯಲ್ಲಿ ಕ್ವಾರಂಟೈನ್ ಮಾಡಿಲ್ಲ. ಇಲ್ಲಿನ ಜನರು ಸಂಕಷ್ಟಕ್ಕೆ ಸಿಲುಕುವ ದಿನಗಳು ಬರಲಿವೆ ಎಂದರು.
ಮಂಡ್ಯ ಜಿಲ್ಲೆಯ ನಕಲಿ ದಾಖಲೆ ಸೃಷ್ಟಿ ಮಾಡಿ ಮೃತದೇಹ ತಂದಿದ್ದಾರೆ ಎಂದು ಕುಮಾರಸ್ವಾಮಿ ಶುಕ್ರವಾರ ದೇವನಹಳ್ಳಿ ಪಟ್ಟಣದಲ್ಲಿ ಹೇಳಿದರು. ಮೃತರು ಕೊರೊನಾದಿಂದ ಸತ್ತಿದ್ದಾರೋ ಇಲ್ಲವೋ ಎಂಬುದು ತಿಳಿದಿಲ್ಲ. ಆದರೆ ನಕಲಿ ದಾಖಲೆ ಸೃಷ್ಟಿಸಿ ಮೃತದೇಹ ತಂದಿದ್ದಾರೆ. ಸರಕಾರ ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.