Saturday, 23rd November 2024

ಅನರ್ಹರಿಗೆ ವರವಾಗಲಿದೆಯೇ ಅಭ್ಯರ್ಥಿಗಳ ಕೊರತೆ ?

ಅನರ್ಹರ ಎದುರಿಗೆ ನಿಂತಿಲ್ಲ ಪ್ರಬಲ ಅಭ್ಯರ್ಥಿಗಳು ಪಾಠ ಕಲಿಸುವ ಪಕ್ಷಗಳಿಂದ ಸಿಗಲಿಲ್ಲ ಪಾಟಿ ಸವಾಲು

 

ವೆಂಕಟೇಶ ಆರ್.ದಾಸ್ ಬೆಂಗಳೂರು
ಅನರ್ಹರಿಗೆ ತಕ್ಕ ಪಾಠ ಕಲಿಸಿಯೇ ತೀರುತ್ತೇವೆ ಎಂದು ಮುನ್ನುಗ್ಗಿಿದ ಕಾಂಗ್ರೆೆಸ್ ಮತ್ತು ಜೆಡಿಎಸ್ ನಾಯಕರು ಅವರ ವಿರುದ್ಧ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಿಳಿಸುವಲ್ಲಿ ವಿಫಲವಾದರೇ?
ರಮೇಶ್ ಜಾರಕಿಹೊಳಿ ಸೇರಿದಂತೆ ಮೈತ್ರಿಿ ಸರಕಾರದ ಮಗ್ಗುಲು ಮುರಿದ ನಾಯಕರನ್ನು ಸೋಲಿಸಲು ಕಾಂಗ್ರೆೆಸ್ ಮತ್ತು ಜೆಡಿಎಸ್ ರಣಕಹಳೆ ಊದಬೇಕಿತ್ತು. ಆದರೆ, ಜೆಡಿಎಸ್ ಉತ್ತರ ಕರ್ನಾಟಕದಲ್ಲಿ ಅಸ್ತಿಿತ್ವ ಮತ್ತು ಅಭ್ಯರ್ಥಿಗಳಿಲ್ಲದೆ ಸೊರಗಿದೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆೆಸ್ ಕೂಡ ಸೂಕ್ತ ಅಭ್ಯರ್ಥಿಗಳಿಲ್ಲದೆ ಪರದಾಟ ನಡೆಸಿದೆ. ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ವಾರದ ಹಿಂದೆಯೇ ಘೋಷಣೆ ಮಾಡಿದ್ದರೂ, ಉಳಿದ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳಾಗಲು ಬಹುತೇಕ ಕಾಂಗ್ರೆೆಸ್ ನಾಯಕರು ಹಿಂದೆ ಸರಿದಿದ್ದಾಾರೆ.

ಜೆಡಿಎಸ್‌ನಿಂದ ಕೆ.ಆರ್. ಪೇಟೆ ಮತ್ತು ಯಶವಂತಪುರ ಕ್ಷೇತ್ರದಲ್ಲಿ ಒಂದಷ್ಟು ಪೈಪೋಟಿ ನೀಡುವ ಅಭ್ಯರ್ಥಿಗಳು ಕಣದಲ್ಲಿದ್ದಾಾರೆ. ಉಳಿದಂತೆ ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ತಮ್ಮ ಸರಕಾರ ಬೀಳಿಸಿದ ಅನರ್ಹರ ವಿರುದ್ಧ ಸೇಡಿಗೆ ಜೆಡಿಎಸ್ ಚಿಂತನೆ ನಡೆಸಿದೆ. ಆದರೆ, ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಜವರಾಯಿಗೌಡ ಚುನಾವಣೆ ಮೇಲೆ ಆಸಕ್ತಿಿ ಕಳೆದುಕೊಂಡಂತೆ ವರ್ತಿಸುತ್ತಿಿದ್ದಾಾರೆ ಎಂಬ ಮಾತುಗಳು ಜೆಡಿಎಸ್ ವಲಯದಲ್ಲಿ ಕೇಳಿಬರುತ್ತಿಿವೆ. ಹೀಗಾಗಿ, ಎದುರಾಳಿಗಳ ಗೆಲುವು ಸುಲಭವಾಗುವ ಸಾಧ್ಯತೆಗಳಿಗೆ ಪಕ್ಷದ ನಾಯಕರುಗಳೇ ಅವಕಾಶ ಒದಗಿಸಿಕೊಟ್ಟಿಿದ್ದಾಾರೆಯೇ ಎಂಬ ಅನುಮಾನ ಮೂಡಿದೆ.

ಕಾಂಗ್ರೆೆಸ್ ಕೂಡ ಬೆಂಗಳೂರು ಸೇರಿ ಹಳೇ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಿಳಿಸಲು ಪರದಾಟ ನಡೆಸಿದೆ. ಹೊಸಕೋಟೆ ಕ್ಷೇತ್ರದಲ್ಲಿ ಬೈರತಿ ಸುರೇಶ್ ಪತ್ನಿಿ ಸ್ಪರ್ಧೆ ಮಾಡುತ್ತಿಿದ್ದು, ಶರತ್ ಬಚ್ಚೇಗೌಡ ಅವರ ಆರ್ಭಟದ ಮುಂದೆ ಮಂಕಾದಂತೆ ಕಾಣುತ್ತಿಿದ್ದಾಾರೆ. ಕೆ.ಆರ್. ಪುರದ ಅಭ್ಯರ್ಥಿ ನಾರಾಯಣ ಸ್ವಾಾಮಿ ಬೈರತಿ ಬಸವರಾಜ್ ಮತ್ತು ಬಿಜೆಪಿ ಮುಂದೆ ಎಷ್ಟರಮಟ್ಟಿಿಗೆ ಪೈಪೋಟಿ ನೀಡಲಿದ್ದಾಾರೆ ಎಂದು ಹೇಳುವುದಕ್ಕೆೆ ಸಾಧ್ಯವಿಲ್ಲ. ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಬಗ್ಗೆೆ ಕಾಂಗ್ರೆೆಸ್ ವಲಯದಲ್ಲಿಯೇ ಕೆಲವರಿಗೆ ಮಾಹಿತಿ ಇಲ್ಲ.

ಬಂಡಾಯ ಶಮನವಾದರೆ ಅನರ್ಹರ ಗೆಲುವು !
ಅನರ್ಹರಿಗೆ ಸಧ್ಯದ ಪರಿಸ್ಥಿಿತಿಯಲ್ಲಿ ಎದುರಾಳಿ ಅಭ್ಯರ್ಥಿಗಳಿಗಿಂತ ಬಿಜೆಪಿಯ ಬಂಡಾಯವೇ ದೊಡ್ಡ ತಲೆನೋವು. ಕಳೆದ ಚುನಾವಣೆಯಲ್ಲಿ ಅನರ್ಹ ಅಭ್ಯರ್ಥಿಗಳ ತೊಡೆತಟ್ಟಿಿದ್ದ ನಾಯಕರೆಲ್ಲ ಈಗ ಅವರ ಪರವಾಗಿ ಪ್ರಚಾರ ನಡೆಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾಾರೆ. ಈ ನಾಯಕರು ಮತ್ತು ಕಾರ್ಯಕರ್ತರಿಗೆ ಸರಕಾರ ಉಳಿಸಿಕೊಳ್ಳುವ ಅನಿವಾರ್ಯತೆ ಹೊರತುಪಡಿಸಿದರೆ ಮತ್ಯಾಾವ ಪ್ರೀತಿಯ ಅನರ್ಹರ ಮೇಲಿಲ್ಲ. ಇದೊಂದೆ ಕಾರಣಕ್ಕೆೆ ಪಕ್ಷದ ಅಣತಿಯನ್ನು ಕಾರ್ಯಕರ್ತರು ಮತ್ತು ಬಿಜೆಪಿ ನಾಯಕರು ಪಾಲಿಸುತ್ತಾಾರಾ ಎಂಬುದು ಯಕ್ಷಪ್ರಶ್ನೆೆಯಾಗಿದೆ. ಬಿಜೆಪಿ ಕಾರ್ಯಕರ್ತರು, ಆರ್‌ಎಸ್‌ಎಸ್ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರು ಪಕ್ಷ ಮತ್ತು ಸಂಘದ ತೀರ್ಮಾನಕ್ಕೆೆ ತಲೆಬಾಗಿ ಎಲ್ಲವನ್ನೂ ಮರೆತು ಅನರ್ಹರ ಪರವಾಗಿ ಕೆಲಸ ಮಾಡಿದರೆ ಅನರ್ಹರ ಗೆಲುವು ಬಹುತೇಕ ಸುಲಭವಾಗುತ್ತದೆ. ಅನರ್ಹರ ಮೇಲಿನ ಹಳೆಯ ಸಿಟ್ಟು ಮತವಾಗಿ ಮಾರ್ಪಾಡಾದರೆ ಎದುರಾಳಿ ದುರ್ಬಲನಾದರೂ ಅನರ್ಹರ ಗೆಲುವಿಗೆ ಅಡ್ಡಗೋಡೆಯಾಗುವುದು ಶತಸಿದ್ಧ.

ತೆರೆ ಮರೆಯ ಮೈತ್ರಿಿಯಾಗಿದೆಯೇ?
ಮೈತ್ರಿಿ ಸರಕಾರದ ಪತನದ ನಂತರ ದೂರದೂರವಾಗಿರುವ ಕಾಂಗ್ರೆೆಸ್ ಮತ್ತು ಜೆಡಿಎಸ್ ಅನರ್ಹರನ್ನು ಸೋಲಿಸಲೇ ಬೇಕು ಎಂಬ ಕಾರಣದಿಂದ ತೆರೆಮರೆಯಲ್ಲಿ ಮೈತ್ರಿಿ ಮಾಡಿಕೊಂಡಿದೆಯೇ ಎಂಬ ಅನುಮಾನವೂ ಮೂಡುತ್ತಿಿದೆ. ಎರಡು ಪಕ್ಷದ ನಾಯಕರು ಕೆಲ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆೆಯಲ್ಲಿ ಅಳೆದು ತೂಗಿ ನೋಡಿದ್ದನ್ನು ಗಮನಿಸಿದರೆ ಇಂತಹದ್ದೊೊಂದು ಅನುಮಾನಕ್ಕೆೆ ರೆಕ್ಕೆೆಪುಕ್ಕ ಬರುವುದು ಸುಳ್ಳಲ್ಲ. ಅದರಲ್ಲೂ ಬೆಂಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ತಮ್ಮ ಪಕ್ಷ ಗೆಲ್ಲದಿದ್ದರೂ ಪರವಾಗಿಲ್ಲ, ಅನರ್ಹರ ಗೆಲುವು ಬೇಡ ಎಂಬ ಸಿದ್ಧಾಾಂತ ಕೆಲಸ ಮಾಡಿದಂತೆ ಕಾಣುತ್ತಿಿದೆ. ಹೊಸಕೋಟೆಗೆ ಜೆಡಿಎಸ್ ಅಭ್ಯರ್ಥಿ ಹಾಕಿಲ್ಲ, ಕೆ.ಆರ್. ಪುರದ ಅಭ್ಯರ್ಥಿ ಗೆಲ್ಲುವ ಸ್ಥಿಿತಿಯಲ್ಲಿಲ್ಲ. ಉಳಿದಂತೆ ಯಶವಂತಪುರ ಮತ್ತು ಮಹಾಲಕ್ಷ್ಮಿಿ ಲೇಔಟ್‌ನಲ್ಲಿ ಕಾಂಗ್ರೆೆಸ್ ಅಭ್ಯರ್ಥಿಗಳ ಆಯ್ಕೆೆ ಆತುರದಲ್ಲಿ ನಡೆಸಿದ ಉತ್ಖನನದಂತಿದೆ.