ಬೆಂಗಳೂರು:
ಕರೋನಾ ವೈರಸ್ ಸಾಂಕ್ರಾಮಿಕದ ಕುರಿತಾಗಿ ಜನರಿಗೆ ಮಾಹಿತಿ ಹಾಗೂ ಕೋವಿಡ್-19 ಸೋಂಕಿತರನ್ನು ಟ್ರಾಕ್ ಮಾಡಲು ಸರಕಾರ ಇತ್ತೀಚಿಗಷ್ಟೆ ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಆರೋಗ್ಯ ಸೇತು ಆಪ್ ಡೌನ್‌ಲೋಡ್ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಆಗಿದ್ದು, ಕೇವಲ 13 ದಿನಗಳಲ್ಲಿ 50 ಮಿಲಿಯನ್ ಬಳಕೆದಾರರನ್ನು ತಲುಪುವ ಕಾಣುವ ಮೂಲಕ ಹೊಸ ದಾಖಲೆ ಬರೆದಿದೆ.
ಜಿಪಿಎಸ್ ಲೊಕೇಶನ್ ಹಾಗೂ ಬ್ಲೂಟೂತ್ ಆಧಾರಿತವಾಗಿ ಕಾರ್ಯನಿರ್ವಹಿಸುವ ಆರೋಗ್ಯ ಸೇತು ಅಪ್ಲಿಕೇಶನ್ ಈಗ 50 ಮಿಲಿಯನ್ ಗಡಿದಾಟಿ ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ. ಇದೇ ಏಪ್ರಿಲ್ 2 ರಂದು ಬಿಡುಗಡೆ ಆಗಿದ್ದ ಆರೋಗ್ಯ ಆಪ್, ಏಪ್ರಿಲ್ 13ರ ವೇಳೆಗೆ 50 ಮಿಲಿಯನ್ ಬಳಕೆದಾರರನ್ನು ತಲುಪುವ ಮೂಲಕ ಹೊಸ ರೇಕಾರ್ಡ್ ಹುಟ್ಟುಹಾಕಿದೆ. ಜನಪ್ರಿಯ ಪೋಕ್ಮನ್ ಗೋ ಗೇಮ್ 19 ದಿನಗಳಲ್ಲಿ 50 ಮಿಲಿಯನ್ ಬಳಕೆದಾರರನ್ನು ತಲುಪಿತ್ತು. ಆ ದಾಖಲೆಯನ್ನು ಅಳಿಸಿಹಾಕಿದೆ.
ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡಲು ಹೇಳಿದರು. ಆ ದಿನವೇ 11 ಮಿಲಿಯನ್ ಬಳಕೆದಾರರು ಆರೋಗ್ಯ ಸೇತು ಆಪ್ ಡೌನ್‌ಲೋಡ್ ಮಾಡಿಕೊಂಡಿರುವುದು ವಿಶೇಷ. ಮೋದಿ ಅವರ ಮಾತು ಆಪ್ ಡೌನ್‌ಲೋಡ್ ಕಾಣಲು ಪ್ಲಸ್ ಪಾಯಿಂಟ್ ಆಗಿದೆ ಎನ್ನಲಾಗಿದೆ.
ಆರೋಗ್ಯ ಸೇತು ಆಪ್ ಮೊಬೈಲ್ ಲೊಕೇಶನ್ ಮತ್ತು ಬ್ಲೂಟೂತ್ ಆಕ್ಸಸ್ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತೆ. ಈ ಆಪ್ ಬಳಕೆ ಮಾಡುವ ಬಳಕೆದಾರರ ಸ್ಥಳದ ಸುತ್ತಮುತ್ತ ಕೋವಿಡ್-19 ಸೋಂಕಿತರು ಬಂದರೇ ಹಾಗೂ ಬಳಕೆದಾರರು ಸೋಂಕು ಹೆಚ್ಚು ಇರುವ ಪ್ರದೇಶದಲ್ಲಿದ್ದರೆ ಅಲರ್ಟ್ ಮಾಹಿತಿ ನೀಡುತ್ತದೆ. ಐಒಎಸ್ ಮತ್ತು ಆಂಡ್ರಾಯ್ಡ್ ಓಎಸ್ ಬಳಕೆದಾರರಿಬ್ಬರೂ ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು