Thursday, 12th December 2024

ಆಹಾರ ಧಾನ್ಯ ಹೋಂ ಡೆಲೆವರಿ ಸಹಾಯವಾಣಿಗೆ ಚಾಲನೆ

ಬೆಂಗಳೂರು;

ಕೋವಿಡ್-19 ಸಂಬಂಧ ಅಗತ್ಯ ವಸ್ತುಗಳ ಹೋಮ್ ಡೆಲಿವರಿ ಸಹಾಯವಾಣಿಗೆ ಪೂಜ್ಯ ಮಹಾಪೌರರು, ಮಾನ್ಯ ಕಂದಾಯ ಸಚಿವರಾದ ಶ್ರೀ ಆರ್.ಅಶೋಕ್, ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ರವರು ಪಾಲಿಕೆ ಕೇಂದ್ರ ಕಛೇರಿ ಮಹಾಪೌರರ ಕೊಠಡಿಯಲ್ಲಿ ಚಾಲನೆ ನೀಡಿದರು. ಈ ವೇಳೆ ಉಪಮಹಾಪೌರರು ಶ್ರೀ ರಾಮಮೋಹನ ರಾಜು, ದಕ್ಷಿಣ ವಲಯ ಜಂಟಿ ಆಯುಕ್ತರು ಶ್ರೀ ವೀರಭದ್ರ ಸ್ವಾಮಿ, ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.*

ಕೋವಿಡ್-19 ಸಂಬಂಧ ಅಗತ್ಯ ವಸ್ತುಗಳನ್ನು ಮನೆ ಮೆನೆಗೆ ತಲುಪಿಸುವ ಉದ್ದೇಶದಿಂದ ಈಗಾಗಲೇ ಪ್ರಾಯೋಗಿಕವಾಗಿ ಕತ್ರಿಗುಪ್ಪೆ ವಾರ್ಡ್ ನಲ್ಲಿ ‘ಹೋಮ್ ಡೆಲಿವರಿ’ ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ಇದೀಗ ಬೆಂಗಳೂರು ದಕ್ಷಿಣ ಲೊಕಸಭಾ ಕ್ಷೇತ್ರ ವ್ಯಾಪ್ತಿಯ ಬಸವನಗುಡಿ, ಜಯನಗರ, ಪದ್ಮನಾಭನಗರ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಿಗೂ ಈ ಸೇವೆಯನ್ನು ವಿಸ್ತಿರಿಸಲಾಗುತ್ತಿದೆ.

ಅಗತ್ಯ ದಿನಬಳಕೆಯ ಸಾಮಗ್ರಿಗಳು, ದಿನಸಿ, ತರಕಾರಿ, ಔಷಧ ಸಾಮಗ್ರಿಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸುವ ಹೋಮ್ ಡೆಲಿವರಿ ಸೇವೆ ಇದಾಗಿದೆ. ಸಹಾಯವಾಣಿ ಸಂಖ್ಯೆ 080 61914960ಗೆ ಕರೆ ಮಾಡಿ ಅಗತ್ಯ ವಸ್ತುಗಳನ್ನು ಪಡೆಯಬಹುದಾಗಿದೆ.

ಈ ಭಾಗದಲ್ಲಿ 7.5 ಲಕ್ಷ ಜನಸಂಖ್ಯೆ, 2.5 ಲಕ್ಷ ಮನೆಗಳು ಹಾಗೂ ದಿನಸಿ ಅಂಗಡಿ, ತರಕಾರಿ ಮಳಿಗೆ, ಔಷಧಿ ಮಳಿಗೆ, ಮಾಂಸದಗಡಿಗಳು ಸೇರಿದಂತೆ ಒಟ್ಟು 1926 ಮಳಿಗೆಗಳನ್ನು ಮ್ಯಾಪಿಂಗ್ ಮಾಡಲಾಗಿದ್ದು, ಉಚಿತವಾಗಿ ಡಿಲಿವರಿ ವ್ಯವಸ್ಥೆಯನ್ನು ಮಾಡಲಾಗಿದೆ.

ಪ್ರಸ್ತುತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಮಾತ್ರ ಈ ಸೇವೆ ಇರಲಿದ್ದು, ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ನಗರಾದ್ಯಂತ ಇದನ್ನು ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವರು ತಿಳಿಸಿದರು.

*ಹೆಚ್ಚಿನ ಮಾಹಿತಿಗಾಗಿ ಮಾನ್ಯ ಕಂದಾಯ ಸಚಿವರು ಮಾತನಾಡಿರುವ ಹಾಗೂ ಸಂಸದರು ಮಾತನಾಡಿರುವ ವಿಡಿಯೋ ರೆಕಾರ್ಡ್ ಅನ್ನು ಲಗತ್ತಿಸಿದೆ.*