Saturday, 14th December 2024

ಇನ್ಫೋಸಿಸ್ ಫೌಂಡೇಶನ್‌ನಿಂದ ದಿನಸಿ ಸಾಮಗ್ರಿ ವಿತರಣೆ

ಬೆಂಗಳೂರು 

ಇನ್ಪೋಸಿಸ್‌ ಫೌಂಡೇಶನ್‌ ವತಿಯಿಂದ ಇಂದು ಬೆಂಗಳೂರಿನ ಜಯನಗರದ ಸಾವಿರಾರು ಕುಟುಂಬಗಳಿಗೆ ಜೀವನಾವಶ್ಯಕ ವಸ್ತುಗಳನ್ನು ವಿತರಿಸಲಾಯಿತು.

ಕರೋನಾ ಕರ್ಪ್ಯೂನಿಂದ ತೊಂದರೆಗೀಡಾಗಿರುವ ಕಾರ್ಮಿಕರು, ನಿರ್ಗತಿಕರು ಹಾಗೂ ಕೊಳೆಗೇರಿ ನಿವಾಸಿಗಳು ಸೇರಿದಂತೆ ಸಂತ್ರಸ್ತರಿಗೆ ಇಂದು ಜಯನಗರದಲ್ಲಿ ಇನ್ಪೋಸಿಸ್‌ ಫೌಂಡೇಶನ್‌ ನ ರಮೇಶ್‌ ರೆಡ್ಡಿ ಹಾಗೂ ಅವರ ತಂಡ ಸಾವಿರಕ್ಕೂ ಹೆಚ್ಚು ಜನರಿಗೆ ಅವಶ್ಯಕ ವಸ್ತುಗಳನ್ನು ಒಳಗೊಂಡಿರುವಂತಹ ಬಾಕ್ಸನ್ನು ವಿತರಿಸಿದರು. ಬಿಪಿಎಲ್‌ ಕಾರ್ಡ್‌ ಇಲ್ಲದ ಜನರಿಗೆ ಈ ಕಿಟ್‌ ಗಳನ್ನು ವಿತರಿಸಿದ್ದು ವಿಶೇಷವಾಗಿತ್ತು.

ಅಲ್ಲದೆ, ಮನೆ ಮನೆಗೂ ತೆರಳಿ ಜೀವನಾವಶ್ಯಕ ವಸ್ತುಗಳನ್ನು ಒಳಗೊಂಡಿರುವ ಬಾಕ್ಸ್‌ಗಳನ್ನೂ ವಿತರಿಸಲಾಯಿತು. ಸಾವಿರಕ್ಕೂ ಹೆಚ್ಚು ಜನರು ಈ ವಸ್ತುಗಳನ್ನು ಪಡೆದುಕೊಂಡರು. ಕರೋನಾ ಲಾಕ್‌ ಡೌನ್‌ ಪ್ರಾರಂಭದಿಂದಲೂ ಇನ್ಪೋಸಿಸ್‌ ಫೌಂಡೇಶನ್‌ ರಾಜ್ಯಾದ್ಯಂತ ಅಗತ್ಯ ಸಾಮಗ್ರಿಗಳನ್ನು ವಿತರಿಸುತ್ತಿದೆ.

5 Attachments