Sunday, 15th December 2024

ಇರಾನ್ ಸೇನೆಯ ಅಚಾತುರ್ಯ:ನೌಕೆಗೆ ಕ್ಷಿಪಣಿ ಬಡಿದು 19 ನಾವಿಕರ ದುರ್ಮರಣ

ಟೆಹ್ರಾನ್:

ಇರಾನ್ ಸೇನೆಯ ಅಚಾತುರ್ಯದಿಂದಾಗಿ ನೌಕೆಯೊಂದಕ್ಕೆ ಕ್ಷಿಪಣಿ ಬಡಿದು 19 ನಾವಿಕರು ಮೃತಪಟ್ಟಿದ್ದಾರೆ.

ಈ ದುರ್ಘಟನೆಯಲ್ಲಿ ಇತರ 15 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ. ಇರಾನ್ ಸೇನೆ ಸಮರ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ಆದ ಯಡವಟ್ಟಿನಿಂದ ಸರಕು ಸಾಗಣೆ ನೌಕೆಗೆ ಕ್ಷಿಪಣಿ ಬಡಿದು ಈ ದುರ್ಘಟನೆ ಸಂಭವಿಸಿದೆ ಎಂದು ಇರಾನ್ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೇನಾ ತಾಲೀಮು ಸಂದರ್ಭದಲ್ಲಿ ಉಡಾಯಿಸಿದ ಕ್ಷಿಪಣಿ ಗುರಿ ತಪ್ಪಿ ಕೊನಾರ್ಕ್ ಎಂಬ ಹೆಸರಿನ ಸರಕು ಸಾಗಣೆ ನೌಕೆಗೆ ಅಪ್ಪಳಿಸಿತು. ಈ ದುರ್ಘಟನೆಯಲ್ಲಿ 19 ನಾವಿಕರು ಮತ್ತು ಇತರ 15 ಸಿಬ್ಬಂದಿ ಗಾಯಗೊಂಡಿದ್ದಾರೆ.