Thursday, 12th December 2024

ಎರಡನೇ ದಿನವೂ ಕೂಡ ಮದ್ಯಕ್ಕಾಗಿ ಕ್ಯೂನಿಂತ ಪಾನ ಪ್ರೀಯರು

ವಿಶ್ವವಾಣಿ ಸುದ್ದಿಮನೆ ಬೆಂಗಳೂರು:

ನಗರದಲ್ಲಿ  ಎರಡನೇ ದಿನವೂ ಕೂಡ  ಮದ್ಯದ ವ್ಯಾಪಾರ ಭಾರೀ ಪ್ರಮಾಣದಲ್ಲಿ ಇತ್ತು. ಲಾಕ್ ಡೌನ್ ತೆರವುಗೊಳಿಸಿ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಡುತ್ತಿದ್ದಂತೆ ಮೊದಲ ದಿನವೇ ಮುಗಿಬಿದ್ದು ಮದ್ಯ ಖರೀದಿಸಿದ್ದ ಜನ ಎರಡನೇ ದಿನ ಕೂಡ
ವೈನ್ ಸ್ಟೋರ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀಸಿದ ದೃಶ್ಯ ಮಂಗಳವಾರದಂದು ಕಂಡುಬಂದಿದೆ.

ಸೋಮವಾರ ಒಂದೇ  ದಿನಕ್ಕೆ 45 ಕೋಟಿಯಷ್ಟು ಆದಾಯ ಸರಕಾರಕ್ಕೆ ಮದ್ಯ ಮಾರಾಟದಿಂದ ಬಂದಿದೆ.  ಎರಡನೇ ದಿನವೂ ಕೂಡ  ಕೋಟ್ಯಂತರ ರು ಆದಾಯ ಸರಕಾರಕ್ಕೆ ಬಂದಿದೆ. ಎಣ್ಣೆೆ ಅಂಗಡಿಗಳ ಮುಂದೆ ಮದ್ಯ ಪ್ರಿಯರು ಸಾಮಾಜಿಕ ಅಂತರ
ಕಾಯ್ದುಕೊಂಡು ಸರದಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದರು.

 

ಬೆಳಗ್ಗೆೆ 9 ಗಂಟೆಯಿಂದಲೇ ಮಹಿಳೆಯರು, ಪುರುಷರು ಕ್ಯೂನಲ್ಲಿ ನಿಂತು ಮದ್ಯ ಖರೀದಿಸಿದರು. ಹ್ಯಾಾಂಗೋವರ್ ಇಳಿಸಲು ಸೆಕೆಂಡ್ ರೌಂಡ್ ಎಣ್ಣೆ ಖರೀದಿಗೆ ಕ್ಯೂನಲ್ಲಿ ಕೆಲವೆಡೆ ನಿಂತಿದ್ದು ಕಂಡು ಬಂತು. ಕಸ್ತೂರಿಬಾ ರಸ್ತೆಯ ಟಾನಿಕ್ ಲಿಕ್ಕರ್  ಶಾಪ್  ಎದುರು ವಿದೇಶಿಗರು ಹೆಚ್ಚಾಗಿ ನಿಂತಿದ್ದರು. ಮಹಾಲಕ್ಷ್ಮಿ ಲೇಔಟ್, ಜಯನಗರ,  ಜೆಪಿನಗರ, ಗಾಂಧಿನಗರ, ಆರ್.ಟಿ. ನಗರ,  ಯಶವಂತಪುರ, ರಾಜಾಜಿನಗರ ಬಹುತೇಕ ಲಿಕ್ಕರ್ ಶಾಪ್‌ಗಳ ಮುಂದೆ ಮದ್ಯ ಖರೀದಿಸಲು ಕ್ಯೂ ಕಂಡು ಬಂತು.

ಹಲವೆಡೆ ಮಧ್ಯಾಹ್ನದ ವೇಳೆಗೆ ನೋ ಸ್ಟಾಕ್ ಬೋರ್ಡ್ ಹಾಕಲಾಗಿತ್ತು. ಕೆಲವು ಮದ್ಯದಂಗಡಿಗಳಲ್ಲಿ ಪಾನಪ್ರಿಯರಿಗೆ ತಮಗೆ ಬೇಕಾದ ಬ್ರಾಾಂಡ್ ಸಿಗದ ಹಿನ್ನೆಲೆಯಲ್ಲಿ ಗೊಣಗುತ್ತಲೇ ಸಿಕ್ಕ ಬ್ರಾಾಂಡ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಮತ್ತೆ ಕೆಲವರು ತಮ್ಮ ಬ್ರಾಾಂಡ್‌ಗಳನ್ನು ಹುಡಿಕಿಕೊಂಡು ಬೇರೆ ಕಡೆ ಹೋಗುತ್ತಿರುವ ಸಾಕಷ್ಟು ದೃಷ್ಯಗಳು ಕಂಡು ಬಂದವು.