Saturday, 26th October 2024

ಒಂದೇ ದಿನ ಅತಿ ಹೆಚ್ಚು 36 ಪ್ರಕರಣಗಳು ಬೆಳಕಿಗೆ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು: 
ಒಂದೇ ದಿನ ಅತಿ ಹೆಚ್ಚು 36 ಪ್ರಕರಣಗಳು ಬೆಳಕಿಗೆ ಬಂದಿದ್ದು, ರಾಜ್ಯದಲ್ಲಿ ಕರೋನಾ ಪೀಡಿತರ ಸಂಖ್ಯೆ 315ಕ್ಕೆ ಏರಿಕೆಯಾಗಿದೆ.
 66 ವರ್ಷದ ವ್ಯಕ್ತಿಯೊಬ್ಬರು ಕೊರೊನಾ ವೈರಸ್‌ (ಕೋವಿಡ್‌–19)ಕ್ಕೆ ಗುರುವಾರ ಬಲಿಯಾಗಿದ್ದಾರೆ. ಇದರಿಂದಾಗಿ ಬೆಂಗಳೂರಿನಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಒಟ್ಟಾರೆ 13 ಮಂದಿ ಸಾವಿಗೀಡಾಗಿದ್ದಾರೆ. ಮೃತರಾದ ಬೆಂಗಳೂರಿನ ವ್ಯಕ್ತಿ (195 ನೇ ರೋಗಿ)  ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರನ್ನು ಏ.10ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಇತ್ತ ಮೈಸೂರಿನಲ್ಲಿ ಬುಧವಾರ ಒಂದೇ ದಿನ 10 ಪ್ರಕರಣಗಳು ವರದಿಯಾಗಿದ್ದು, ಚಿಕ್ಕಬಳ್ಳಾಪುರದ 65 ವರ್ಷದ ವ್ಯಕ್ತಿ ಹಾಗೂ ಬೆಳಗಾವಿಯ 80 ವರ್ಷದ ವೃದ್ಧೆ ಕೋವಿಡ್‌–19ಕ್ಕೆ ಸಾವಿಗೀಡಾಗಿದ್ದರು. ಈವರೆಗೆ ರಾಜ್ಯದಲ್ಲಿ ಒಂದು ದಿನ ವರದಿಯಾದ ಗರಿಷ್ಠ ಪ್ರಕರಣಗಳ ಸಂಖ್ಯೆ 17. ಆದರೆ, ರಾಜ್ಯದಲ್ಲಿ ಬುಧವಾರ ಒಂದೇ ದಿನ 19 ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಒಂದೇ ದಿನ ಅತ್ಯಧಿಕ ಪ್ರಕರಣ ವರದಿಯಾದಂತಾಗಿದೆ.
ಬೆಳಗಾವಿಯಲ್ಲಿ 36, ವಿಜಯಪುರದಲ್ಲಿ 17, ಬೆಂಗಳೂರುನಗರ 76, ಮೈಸೂರು 61  ದಾಖಲಾಗಿದೆ.ಗುರುವಾರ  ಪತ್ತೆಯಾದ ಪ್ರಕರಣಗಳ ಪೈಕಿ 17 ಮಂದಿಗೆ ದೆಹಲಿಯ ಜಮಾತ್ ನಂಟಿದೆ.
ಹೆತ್ತ ಕಂದಮ್ಮನನ್ನು ದೂರ ಮಾಡಿದ ಕರೋನಾ
 ಹುಟ್ಟುತ್ತಲೇ ತಾಯಿ ಮತ್ತು ಕಂದನನ್ನು ಮಹಾಮಾರಿ ಕರೋನಾ ದೂರ ಮಾಡಿದ ಮನ ಮಿಡಿಯುವ ಘಟನೆಯೊಂದು ಕುರುಬರಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಗರ್ಭಿಣಿಗೆ ಸರ್ಜರಿ ಆಗಿದ್ದು ಮಗುವನ್ನು ಹೆತ್ತಿದ್ದಾರೆ. ಪತಿಗೆ ಕೊರೊನಾ ಇದ್ದರಿಂದ ಪತ್ನಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಹೀಗಾಗಿ ಮಗುವಿಗೆ ಜನ್ಮ ನೀಡಿದ ತಕ್ಷಣ ತಾಯಿಯನ್ನು ವಿಕ್ಟೋರಿಯಾ ಹಾಗೂ ಮಗುವನ್ನು ಬೌರಿಂಗ್ ಶಿಫ್ಟ್ ಮಾಡಲಾಗಿದೆ. ವೈದ್ಯರು ಹಾಗೂ ನರ್ಸ್ ಗಳನ್ನು ಕೂಡ ಶಿಫ್ಟ್ ಮಾಡಲಾಗಿದೆ. ಆಘಾತಕಾರಿ ವಿಚಾರವೆಂದರೆ ದಂಪತಿ ಕೆಂಗೇರಿ ಉಪನಗರ ಕಡೆಯವರಾಗಿದ್ದು, ಪತಿ ಹಾಗೂ ಇಬ್ಬರೂ ತಮಗೆ ಕೊರೊನಾ ಇರುವುದನ್ನು ಮುಚ್ಚಿಟ್ಟಿದ್ದಾರೆ. ಹೀಗಾಗಿ ಆಸ್ಪತ್ರೆಯವರಿಗೆ ಮಾಹಿತಿ ಇಲ್ಲದೆ ಸರ್ಜರಿ ಮಾಡಿದ್ದಾರೆ. ಡೆಲಿವರಿ ಮಾಡಿಸಿದ ಮೇಲೆ ಕರೋನಾ ಇರುವುದು ಗೊತ್ತಾಗಿದೆ. ಪರಿಣಾಮ ಇದೀಗ ಕುರುಬರಹಳ್ಳಿಯಲ್ಲಿರುವ ಖಾಸಗಿ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ.
ರೋಗಿಗಳು ಯಾವ ಜಿಲ್ಲೆಯವರು?
ರೋಗಿ 280 – ಬೆಂಗಳೂರು ನಗರದ 13 ವರ್ಷದ ಬಾಲಕ, ರೋಗಿ 252ರ ಸಂಪರ್ಕ
ರೋಗಿ 281 – ಬೆಂಗಳೂರು ನಗರದ 65 ವರ್ಷದ ಮಹಿಳೆ, ಉಸಿರಾಟದ ಸಮಸ್ಯೆಯಿಂದ ದಾಖಲು
ರೋಗಿ 282 – ಬೆಳಗಾವಿ ಹೀರೇಬಾಗೇವಾಡಿಯ 51 ವರ್ಷದ ಮಹಿಳೆ, ರೋಗಿ 225ರ ಸಂಪರ್ಕ
ರೋಗಿ 283 -ಬೆಳಗಾವಿ ಹೀರೇಬಾಗೇವಾಡಿಯ 42 ವರ್ಷದ ವ್ಯಕ್ತಿ, ರೋಗಿ 224ರ ಸಂಪರ್ಕ
ರೋಗಿ 284 – ಬೆಳಗಾವಿ ಹೀರೇಬಾಗೇವಾಡಿಯ 33 ವರ್ಷದ ವ್ಯಕ್ತಿ, ರೋಗಿ 224ರ ಸಂಪರ್ಕ
ರೋಗಿ 285 – ಬೆಳಗಾವಿ ಹೀರೇಬಾಗೇವಾಡಿಯ 16 ವರ್ಷದ ಬಾಲಕಿ, ರೋಗಿ 224ರ ಸಂಪರ್ಕ
ರೋಗಿ 286 – ಬೆಳಗಾವಿ ಹೀರೇಬಾಗೇವಾಡಿಯ 65 ವರ್ಷದ ವೃದ್ಧೆ, ರೋಗಿ 224ರ ಸಂಪರ್ಕ
ರೋಗಿ 287 – ಬೆಳಗಾವಿ ಹೀರೇಬಾಗೇವಾಡಿಯ 30 ವರ್ಷದ ಮಹಿಳೆ, ರೋಗಿ 224ರ ಸಂಪರ್ಕ
ರೋಗಿ 288 – ಬೆಳಗಾವಿ ಹೀರೇಬಾಗೇವಾಡಿಯ 54 ವರ್ಷದ ಮಹಿಳೆ, ರೋಗಿ 224ರ ಸಂಪರ್ಕ
ರೋಗಿ 289 – ಬೆಳಗಾವಿ ಹೀರೇಬಾಗೇವಾಡಿಯ 58 ವರ್ಷದ ಮಹಿಳೆ, ರೋಗಿ 224ರ ಸಂಪರ್ಕ
ರೋಗಿ 290 – ಬೆಂಗಳೂರಿನ 54 ವರ್ಷದ ಮಹಿಳೆ, ಅನಂತಪುರದಲ್ಲಿ ನಗರಕ್ಕೆ ಆಗಮಿಸಿದ ಮಹಿಳೆ, ಮೂಲ ಪತ್ತೆಯಾಗಿಲ್ಲ
ರೋಗಿ 291 – ಬೆಂಗಳೂರಿನ 37 ವರ್ಷದ ಪುರುಷ, ಮೂಲ ಪತ್ತೆಯಾಗಿಲ್ಲ
ರೋಗಿ 292 – ಬೆಂಗಳೂರಿನ 43 ವರ್ಷದ ವ್ಯಕ್ತಿ, ಮೂಲ ಪತ್ತೆಯಾಗಿಲ್ಲ
ರೋಗಿ 293 – ಬೆಳಗಾವಿ ಚಿಕ್ಕೋಡಿಯ 47 ವರ್ಷದ ವ್ಯಕ್ತಿ, ದೆಹಲಿ ಪ್ರವಾಸ
ರೋಗಿ 294 – ಬೆಳಗಾವಿ ರಾಯಬಾಗದ 25 ವರ್ಷದ ವ್ಯಕ್ತಿ, ದೆಹಲಿ ಪ್ರವಾಸ
ರೋಗಿ 295 – ಬೆಳಗಾವಿಯ 45 ವರ್ಷದ ಮಹಿಳೆ, ದೆಹಲಿ ಪ್ರವಾಸ
ರೋಗಿ 296 – ಬೆಳಗಾವಿ ಹೀರೇಬಾಗೇವಾಡಿಯ 30 ವರ್ಷದ ವ್ಯಕ್ತಿ, ದೆಹಲಿ ಪ್ರವಾಸ
ರೋಗಿ 297 – ಬೆಳಗಾವಿ ರಾಯಬಾಗದ 43 ವರ್ಷದ ವ್ಯಕ್ತಿ, ದೆಹಲಿ ಪ್ರವಾಸ
ರೋಗಿ 298 – 50 ವರ್ಷ, ಗೋವಾ ಮೂಲದ ವ್ಯಕ್ತಿ 1 ತಿಂಗಳಿನಿಂದ ರಾಯಬಾಗದಲ್ಲಿ ನೆಲೆಸಿದ್ದು, ರೋಗಿ 245ರ ಸಂಪರ್ಕ
ರೋಗಿ 299 – 35 ವರ್ಷದ ಪುರುಷ, ವಿಜಯಪುರ ನಿವಾಸಿ, ಒಂದು ತಿಂಗಳಿನಿಂದ ರಾಯಬಾಗದಲ್ಲಿ ನೆಲೆ, ರೋಗಿ ಸಂಖ್ಯೆ 245ರ ಸಂಪರ್ಕ
ರೋಗಿ 300 – 25 ವರ್ಷದ ಪುರುಷ, ಮಹಾರಾಷ್ಟ್ರದ ಮಿರಾಜ್ ನಿವಾಸಿ 1 ತಿಂಗಳಿನಿಂದ ಬೆಳಗಾವಿಯ ರಾಯಬಾಗದಲ್ಲಿ ನೆಲೆ, ರೋಗಿ 245ರ ಸಂಪರ್ಕ
ರೋಗಿ 301 -64 ವರ್ಷ ಪುರುಷ, ಬೆಳಗಾವಿಯ ರಾಯಬಾಗ ನಿವಾಸಿ, ರೋಗಿ 245ರ ಸಂಪರ್ಕ
ರೋಗಿ 302 – 23 ವರ್ಷದ ಮಹಿಳೆ, ರೋಗಿ 274 ರ ಸಂಪರ್ಕ
ರೋಗಿ 303 – 52 ವರ್ಷದ ಪುರುಷ, ನಂಜನಗೂಡು ಫಾರ್ಮಾ ಕಂಪನಿಯ ನೌಕರ
ರೋಗಿ 304 – ಗದಗ್ ಜಿಲ್ಲೆಯ 59 ವರ್ಷದ ಮಹಿಳೆ, ರೋಗಿ 166ರ ಸಂಪರ್ಕ
ರೋಗಿ 305 – 12 ವರ್ಷದ ವಿಜಯಪುರದ ಬಾಲಕ, ರೋಗಿ 221ರ ಸಂಪರ್ಕ
ರೋಗಿ 306– 65 ವರ್ಷದ ವಿಜಯಪುರದ ವ್ಯಕ್ತಿ, ರೋಗಿ 221ರ ಸಂಪರ್ಕ
ರೋಗಿ 307 – ವಿಜಯಪುರದ 66 ವರ್ಷದ ವ್ಯಕ್ತಿ, ರೋಗಿ 221ರ ಸಂಪರ್ಕ
ರೋಗಿ 308 – 37 ವರ್ಷದ ವಿಜಯಪುರದ ವ್ಯಕ್ತಿ, ರೋಗಿ 221ರ ಸಂಪರ್ಕ
ರೋಗಿ 309 – 70 ವರ್ಷದ ವಿಜಯಪುರದ ಮಹಿಳೆ, ರೋಗಿ 221ರ ಸಂಪರ್ಕ
ರೋಗಿ 310 – ವಿಜಯಪುರದ 1.5 ವರ್ಷದ ಹೆಣ್ಣು ಮಗು, ರೋಗಿ 228 ಮತ್ತು 232ರ ಸಂಪರ್ಕ
ರೋಗಿ 311 – ಮೈಸೂರಿನ 38 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ
ರೋಗಿ 312 – ಮೈಸೂರಿನ 26 ವರ್ಷದ ಮಹಿಳೆ, ಫಾರ್ಮಾ ಕಂಪನಿಯ ರೋಗಿ 77(ಪತಿ) ಸಂಪರ್ಕ.
ರೋಗಿ 313 – 55 ವರ್ಷದ ವಿಜಯಪುರದ ಮಹಿಳೆ, ರೋಗಿ 221ರ ಸಂಪರ್ಕ.
 ರೋಗಿ ನಂಬರ್ 314: 32 ವರ್ಷದ ಪುರುಷನಾಗಿದ್ದು, ಕಲಬುರಗಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ ನಂಬರ್ 315: 5 ವರ್ಷದ ಬಾಲಕನಾಗಿದ್ದು, ಕಲಬುರಗಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
……….
ಜಿಲ್ಲಾವಾರು ಕರೋನಾ ಸೋಂಕಿತರು!
ಜಿಲ್ಲೆ                     ಪ್ರಕರಣ  ಗುಣಮುಖ  ಸಾವು
ಬೆಂಗಳೂರು ನಗರ  76          35                 3
ಮೈಸೂರು             61          12                 0
ಬೆಳಗಾವಿ               36           0                  1
ಕಲಬುರಗಿ             20           3                  3
ಬೀದರ್                 13          0                   0
ದಕ್ಷಿಣ ಕನ್ನಡ        11          8                   0
ಉತ್ತರ ಕನ್ನಡ        11          8                   0
ಚಿಕ್ಕಬಳ್ಳಾಪುರ       13          8                   2
ಬಾಗಲಕೋಟೆ        14          0                  1
ಮಂಡ್ಯ                   8          0                   0
ಬಳ್ಳಾರಿ                   6           0                  0
ವಿಜಯಪುರ           17          0                  1
ಧಾರವಾಡ              6           1                  0
ಬೆಂಗಳೂರು ಗ್ರಾ.    12          0                   0
ಉಡುಪಿ                  3           2                   0
ದಾವಣಗೆರೆ              2          2                   0
ಕೊಡಗು                  1          1                   0
ತುಮಕೂರು            2          1                   1
ಗದಗ                      2           0                   1
ಒಟ್ಟು                   315        82                13