Sunday, 15th December 2024

ಓಕಳೀಪುರದಲ್ಲಿ ಅನುಮಾನಸ್ಪದ ವ್ಯಕ್ತಿಯ ಓಡಾಟ

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು:

ಓಕಳಿಪುರಂನಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಿಯಾಜ್ ಎಂಬ ವ್ಯಕ್ತಿ ಅನುಮಾನಾಸ್ಪದವಾಗಿ ಸಂಚರಿಸುತ್ತಾ ವಿಡಿಯೊ ಮಾಡುತ್ತಿದ್ದ. ಈ ವೇಳೆ ಅನುಮಾನಗೊಂಡ ಸ್ಥಳೀಯರು ಆತನನ್ನು ಪ್ರಶ್ನಿಸಿದ್ದಾರೆ. ಆಗ ನಾನು ಶಿವಾಜಿನಗರದ ಝೊಮ್ಯಾಟೋದಿಂದ ಫುಡ್ ಡೆಲಿವರಿಗಾಗಿ ಬಂದಿದ್ದಿನಿ ಎಂದಿದ್ದಾನೆ. ಆದರೆ ಸ್ಥಳೀಯರು ಆತನ ಬಳಿಯಿದ್ದ ಬ್ಯಾಗ್ ಪರಿಶೀಲಿಸಿದಾಗ ಫುಡ್ ಪಾರ್ಸಲ್‌ಗಳು ಇಲ್ಲದಿರುವುದನ್ನು ಕಂಡು ಮೊತ್ತೊಮ್ಮೆ ಪ್ರಶ್ನಿಸಿದ್ದಾರೆ.

ಆಗಲೂ ರಿಯಾಜ್ ಸಮಂಜಸ ಉತ್ತರ ನೀಡಲಿಲ್ಲ.ಹೀಗಾಗಿ ಸಾರ್ವಜನಿಕರು ಶ್ರೀರಾಂಪುರ ಠಾಣೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ರಿಯಾಜ್ನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.