Thursday, 12th December 2024

ಕರೋನಾಗೆ ಎಎಸ್‌ಐ ಬಲಿ: ವಿವಿ ಪುರಂ ಠಾಣೆ ಸೀಲ್ ಡೌನ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಕರೋನಾ ಸೋಂಕಿನ ಹಿನ್ನೆೆಲೆಯಲ್ಲಿ ಸಂಚಾರ ಠಾಣೆ ಎಎಸ್‌ಐ ಒಬ್ಬರು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದ್ದು, ಇದರೊಂದಿಗೆ ಕರ್ನಾಟಕದಲ್ಲಿ ಕರೋನಾಗೆ ಮೊದಲ ಪೊಲೀಸ್ ಬಲಿ ಉಂಟಾಗಿದೆ.
ಮೃತರು ಬೆಂಗಳೂರು ವಿ.ವಿ.ಪುರಂ ಸಂಚಾರಿ ಠಾಣೆ ಎಎಸ್ ಐ ಎಂದು ತಿಳಿದುಬಂದಿದೆ. 15 ದಿನಗಳಲ್ಲಿ ನಿವೃತ್ತರಾಗಲಿದ್ದ ಅವರು, ಥಣಿಸಂದ್ರದ  ಮನೆಯಲ್ಲಿ ದಿಢೀರನೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮರಣೋತ್ತರ ತಪಾಸಣೆ ನಡೆಸಿದಾಗ ಅವರಿಗೆ ಕರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಅದೇ ಠಾಣೆಯ ಮತ್ತೊಬ್ಬ ಎಎಸ್‌ಐಗೂ ಸೋಂಕು ತಗುಲಿದೆ. ವಿಷಯ ತಿಳಿದ ತಕ್ಷಣ ಪೊಲೀಸ್ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಇಡೀ ಠಾಣೆಯನ್ನು ಸೀಲ್ ಡೌನ್ ಮಾಡಿ ಸ್ಯಾಾನಿಟೈಸರ್ ಮಾಡಲಾಗುತ್ತಿದೆ. ಇಲ್ಲಿ ಕರ್ತವ್ಯ  ನಿರ್ವಹಿಸುತ್ತಿದ್ದವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಮೃತರ ಅಂತ್ಯಸಂಸ್ಕಾರವನ್ನು ಸರಕಾರದ ಸುತ್ತೋಲೆಯಂತೆ ನಡೆಸಲು ಸಿದ್ಧತೆ ನಡೆಸಲಾಗಿದೆ.