Sunday, 15th December 2024

ಕರೋನಾಗೆ ನಲುಗಿದ ದಾವಣಗೆರೆ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ರಾಜ್ಯದಲ್ಲಿ ಭಾನುವಾರ ಒಂದೇ ದಿನ 34 ಮಂದಿಗೆ ಕರೋನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 635ಕ್ಕೆ ಏರಿಕೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿಯೇ 21 ಪ್ರಕರಣಗಳು ಬೆಳಕಿಗೆ ಬಂದಿವೆ.
ಭಾನುವಾರ ಬೆಳಗ್ಗೆ ಬಿಡುಗಡೆಯಾದ ಆರೋಗ್ಯ ಇಲಾಖೆಯ ಬುಲೆಟಿನ್ ನಲ್ಲಿ 5 ಮಂದಿಗೆ ಸೋಂಕು ತಗುಲಿರೋದು ವರದಿಯಾಗಿತ್ತು. ಸಂಜೆಯ ಬುಲೆಟಿನ್ ನಲ್ಲ 8 ಮಂದಿಗೆ ಸೋಂಕು ತಗುಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ದಾವಣಗೆರೆಯ 21 ಸೋಂಕಿತರ ಸಂಖ್ಯೆಯನ್ನು ಬುಲೆಟಿನ್ ನಲ್ಲಿ ಆರೋಗ್ಯ ಇಲಾಖೆ ತಿಳಿಸಿಲ್ಲ. ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, 21 ಮಂದಿಗೆ ಸೋಂಕು ತಗುಲಿರೋದನ್ನು ದೃಢಪಡಿಸಿದ್ದಾರೆ.
 ಸೋಂಕಿತರ ವಿವರ:
1. ರೋಗಿ-602: ಕಲಬುರಗಿಯ 13 ಬಾಲಕಿ. ರೋಗಿ-532ರ ಸಂಪರ್ಕ ಹೊಂದಿದ್ದರು.
2. ರೋಗಿ-603: ಕಲಬುರಗಿಯ 54 ಪುರುಷ. ರೋಗಿ-532ರ ಸಂಪರ್ಕದಲ್ಲಿದ್ದರು.
3. ರೋಗಿ-604: ಕಲಬುರಗಿಯ 41 ಪುರುಷ. ತೀವ್ರತರ ಉಸಿರಾಟದ ಸೋಂಕು.
4. ರೋಗಿ-605: ಬಾಗಲಕೋಟೆಯ 68 ವೃದ್ಧ. ರೋಗಿ-380ರ ದ್ವಿತೀಯ ಸಂಪರ್ಕದಲ್ಲಿದ್ದರು.
5. ರೋಗಿ-606: ಬಾಗಲಕೋಟೆಯ 60 ವೃದ್ಧೆ. ರೋಗಿ-380ರ ದ್ವಿತೀಯ ಸಂಪರ್ಕದಲ್ಲಿದ್ದರು.
6. ರೋಗಿ-607: ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ 23 ವರ್ಷದ ಯುವತಿ. ತೀವ್ರ ಉಸಿರಾಟದ ತೊಂದರೆ.
7. ರೋಗಿ-608: ಬೆಂಗಳೂರಿನ 34 ವರ್ಷದ ಯುವಕ. ಕಂಟೈನ್‍ಮೆಂಟ್ ಝೋನ್ ವಾರ್ಡ್-135ಕ್ಕೆ ಭೇಟಿ
8. ರೋಗಿ 609: ಕಲಬುರಗಿಯ 35 ವರ್ಷದ ಮಹಿಳೆ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ
9. ರೋಗಿ 610: ಕಲಬುರಗಿಯ 78 ವರ್ಷದ ವೃದ್ಧ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
10. ರೋಗಿ-611: ಕಲಬುರಗಿಯ 22 ವರ್ಷದ ಯುವಕ. ಸೋಂಕಿನ ಮೂಲ ಪತ್ತೆಯಾಗಿಲ್ಲ.
11. ರೋಗಿ-612: ಬೆಂಗಳೂರಿನ 45 ವರ್ಷದ ಮಹಿಳೆ. ರೋಗಿ ನಂಬರ್ 350ರ ಜೊತೆ ಸಂಪರ್ಕದಲ್ಲಿದ್ದರು.
12. ರೋಗಿ-613: ಬೆಂಗಳೂರಿನ 24 ವರ್ಷದ ಯುವತಿ. ರೋಗಿ ನಂಬರ್ 350ರ ಜೊತೆ ಸಂಪರ್ಕದಲ್ಲಿದ್ದರು.
13. ರೋಗ-614: ಬೆಂಗಳೂರಿನ 45 ವರ್ಷದ ಮಹಿಳೆ. ರೋಗಿ ನಂಬರ್ 350ರ ಜೊತೆ ಸಂಪರ್ಕದಲ್ಲಿದ್ದರು.
ಕಲಬುರಗಿಯಲ್ಲಿ ಆರು, ಬಾಗಲಕೋಟೆಯಲ್ಲಿ ಮೂರು, ಬೆಂಗಳೂರಿನ ನಾಲ್ವರಿಗೆ ಮತ್ತು ದಾವಣಗೆರೆಯ 21 ಮಂದಿಗೆ ಸೋಂಕು ತಗುಲಿದೆ.