ಕರೋನಾದಿಂದ ಉದ್ಭವಿಸಬಹುದಾದ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳಿಗೆ ವಿಶೇಷ ಜವಾಬ್ದಾರಿಗಳನ್ನು ವಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಹೊರಡಿಸಿದ್ದಾರೆ. ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್, ಮೀನಾ ನಾಗರಾಜ್, ಗೌರವ್ ಗುಪ್ತ ಮೊದಲಾದ ಅಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾಾರಿಗಳನ್ನು ನೀಡಲಾಗಿದೆ. ಪ್ರಯೋಗಾಲಯ ಪರೀಕ್ಷೆ, ವಿದೇಶಗಳಿಂದ ಬರುವವರ ಪಟ್ಟಿ, ಕ್ವಾರಂಟೈನ್ ವ್ಯವಸ್ಥೆ, ಮೂಲ ಸೌಕರ್ಯ ಹೆಚ್ಚಿಸುವುದು ಇತ್ಯಾದಿ ಕಾರ್ಯಗಳನ್ನು ಈ ಅಧಿಕಾರಿಗಳು ಹೆಚ್ಚುವರಿಯಾಗಿ ನಿಭಾಯಿಸಬೇಕಾಗುತ್ತದೆ.
ಯಾವ್ಯಾವ ಅಧಿಕಾರಿಗಳಿಗೆ ಯಾವ್ಯಾಾವ ಜವಾಬ್ದಾರಿ:
* ಮೀನಾ ನಾಗರಾಜ್, ಅಟಲ್ ಜನಸ್ನೇಹಿ ಕೇಂದ್ರ- ಕಣ್ಗಾವಲು ವ್ಯವಸ್ಥೆೆ; ಕೋವಿಡ್ ರೋಗಿಗಳೊಂದಿಗೆ ಸಂಪರ್ಕ ಪತ್ತೆ ಹೆಚ್ಚುವಿಕೆ ಕಾರ್ಯ, ವಿದೇಶಗಳಿಂದ ರಾಜ್ಯಕ್ಕೆ ಆಗಮಿಸುವವರ ಪಟ್ಟಿ ಪಡೆಯುವುದು.
* ಡಾ. ಅರುಂಧತಿ ಚಂದ್ರಶೇಖರ್, ಮಿಷನ್ ನಿರ್ದೇಶಕರು- ಸಾಮುದಾಯಿಕ ಸರ್ವೇಕ್ಷಣೆ, ಕೋವಿಡ್ ಸೋಂಕು ಹರಡುವಿಕೆ ಪತ್ತೆ, ಕ್ವಾರಂಟೈನ್ ವ್ಯವಸ್ಥೆ, ಶಂಕಿತರನ್ನು ಮನೆಯಲ್ಲೇ ಪ್ರತ್ಯೇಕವಾಗಿರುವಂತೆ ನೋಡಿಕೊಳ್ಳುವುದು.
* ಡಾ. ಸಿ ಎನ್ ಮಂಜುನಾಥ್, ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆೆಯ ನಿರ್ದೇಶಕರು- ಕೊರೋನಾ ಪತ್ತೆಗೆ ಪ್ರಯೋಗಾಲಯದಲ್ಲಿ ಪರೀಕ್ಷೆ
* ಗೌರವ್ ಗುಪ್ತ, ಸರಕಾರದ ಪ್ರಧಾನ ಕಾರ್ಯದರ್ಶಿ- ಹೆಚ್ಚುವರಿ ಜವಾಬ್ದಾರಿ: ಎಲ್ಲಾ ಸಾಮಗ್ರಿಗಳ ಸಂಗ್ರಹಣೆ ಮತ್ತು ಉತ್ಪಾದನೆಯ ನಿರ್ವಹಣೆ
* ಗುಂಜನ್ ಕೃಷ್ಣ, ವಾಣಿಜ್ಯ ಕೈಗಾರಿಕಾ ಇಲಾಖೆ ನಿರ್ದೇಶಕರು- ಲಾಜಿಸ್ಟಿ ಪೂರೈಕೆ.
* ಪಿ.ಸಿ. ಜಾಫರ್, ಆರ್ಥಿಕ ಇಲಾಖೆ ಕಾರ್ಯದರ್ಶಿ-ತರಬೇತಿ ಮತ್ತು ಸೌಕರ್ಯ ವ್ಯವಸ್ಥೆೆ.
* ಗಂಗಾರಾಮ್ ಬಡೇರಿಯಾ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ- ಹೆಚ್ಚುವರಿ ಜವಾಬ್ದಾರಿ: ರೋಗಿಗಳನ್ನ ಇತರ ಸಂಪರ್ಕವಾಗದಂತೆ ಎಚ್ಚರಿಕೆ ವಹಿಸುವುದು; ಚಿಕಿತ್ಸೆಗೆ ಆಸ್ಪತ್ರೆಗಳನ್ನು ಸಜ್ಜಾಗಿಡುವುದು.
* ಎಸ್. ಜಿಯಾವುಲ್ಲಾ, ಎಂಎಸ್ಎಂಇ-ರೋಗಿಗಳನ್ನು ಇತರ ಸಂಪರ್ಕವಾಗದಂತೆ ಎಚ್ಚರಿಕೆ ವಹಿಸುವುದು; ಚಿಕಿತ್ಸೆಗೆ ಆಸ್ಪತ್ರೆಗಳನ್ನು ಸಜ್ಜಾಗಿಡುವುದು.
* ಟಿ.ಕೆ. ಅನಿಲ್ ಕುಮಾರ್, ಸಾರಿಗೆ ಮತ್ತು ಕಂದಾಯ ಇಲಾಖೆಗಳು- ಕಂಟಿಂಜೆನ್ಸಿ ಪ್ಲ್ಯಾನ್ ಅಥವಾ ಆವರ್ತ ಯೋಜನೆ; ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯ ನಡೆಸುವುದು.
* ಡಾ. ಇ ವಿ ರಮಣ ರೆಡ್ಡಿ, ಐಟಿ ಮತ್ತು ಬಿಟಿ ಇಲಾಖೆ- ಹೆಚ್ಚುವರಿ ಜವಾಬ್ದಾರಿ: ಐಟಿ, ಇಂಟರ್ನೆಟ್ ಸರ್ವಿಸ್, ವಿದ್ಯುತ್ ಕಂಪನಿಗಳು ಹಾಗೂ ಇತರೆ ಸಂಸ್ಥೆೆಗಳೊಂದಿಗೆ ಸಮನ್ವಯ ಸಾಧಿಸುವುದು.
* ಶಿಖಾ, ಬಿಎಂಟಿಸಿ- ಹೆಚ್ಚುವರಿ ಜವಾಬ್ದಾಾರಿ: ಸೋಷಿಯಲ್ ಮೀಡಿಯಾ, ಕೋವಿಡ್-19 ಜಾಲತಾಣ, ಪೋಸ್ಟರ್, ಬ್ಯಾನರ್, ವಿಡಿಯೋ, ಅಪಾಯ ಸಂವಹನಗಳು.
* ಮುನೀಶ್ ಮುದ್ಗಿಲ್, 104 ನಿರ್ವಹಣೆ; ತಂತ್ರಾಾಂಶ ಅಭಿವೃದ್ಧಿ; ಆ್ಯಪ್ ಅಭಿವೃದ್ಧಿ ಮತ್ತು ನಿರ್ವಹಣೆ; ಆರೋಗ್ಯ ಸಹಾಯವಾಣಿ.