ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಕರೋನಾ ಹರಡುವ ಭೀತಿಯಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಸದ್ಯ 4 ಸಾವಿರಕ್ಕೂ ಹೆಚ್ವು ಕೈದಿಗಳಿದ್ದಾರೆ. ಜೈಲಿನ ನಿಯಮ ಪ್ರಕಾರ ಹಾಗೂ ಅಲ್ಲಿರುವ ವ್ಯವಸ್ಥೆಗೆ ಸುಮಾರು 2 ಸಾವಿರ ಮಂದಿ ಮಾತ್ರ ಇರಬಹುದಷ್ಟೇ. ಸದ್ಯ ಜೈಲಿನಲ್ಲಿಯೂ ಕೂಡ ಕರೋನಾ ಸೋಂಕು ಹರಡುವ ಆತಂಕದಿಂದ 500- 600 ಮಂದಿಯನ್ನು ರಿಲೀಸ್ ಮಾಡಲು ಜೈಲಾಧಿಕಾರಿಗಳು ತೀರ್ಮಾನಿಸಿದ್ದಾರೆ.
ಬಾಕ್ಸ್….
ಯಾರಿಗೆಲ್ಲಾ ಬಿಡುಗಡೆ ಭಾಗ್ಯ?
ಸಣ್ಣ ಪುಟ್ಟ ಕಳ್ಳತನ, ಸುಲಿಗೆ, ದರೋಡೆ, ಅಟೆಂಷನ್ ಡೈವರ್ಷನ್… ಈ ರೀತಿಯ ಪ್ರಕರಣಗಳಲ್ಲಿ ಸಿಲುಕಿರುವ ಕೈದಿಗಳು ಬಿಡುಗಡೆಯಾಗಲಿದ್ದಾರೆ. ಈ ವಿಚಾರ ತಿಳಿದು ಬೆಂಗಳೂರು ನಗರದ ಸುಮಾರು 80ಕ್ಕೂ ಹೆಚ್ಚು ಠಾಣೆಗಳ ಪೊಲೀಸರು ಜೈಲಿಗೆ ಹೋಗಿದ್ದಾರೆ. ತಮ್ಮ ತಮ್ಮ ಠಾಣೆಯ ಅಪರಾಧಿಗಳ ಪೈಕಿ ಮಾಹಿತಿ ಸಂಗ್ರಹಿಸಿದ್ದಾರೆ. ಯಾಕೆಂದರೆ, ಒಮ್ಮೆ ಹೊರಗಡೆ ಹೋದರೆ ಕೈದಿಗಳು ಮತ್ತದೇ ತಮ್ಮ ಹಳೆಯ ಚಾಳಿ ಮುಂದುವರಿಸುವ ಸಂಭವವಿರುತ್ತದೆ. ಹಾಗೆಯೇ ಕೆಲವರ ಮೇಲಿನ ಪ್ರಕರಣಗಳು ಕೂಡಾ ತನಿಖಾ ಹಂತದಲ್ಲಿದೆ. ಹೀಗಾಗಿ ಬಿಡುಗಡೆಯಾಗುವ ಕೆಲವರನ್ನು ಮತ್ತೆ ಠಾಣಾ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.