Thursday, 12th December 2024

ಕರೋನಾ ಸಾವು ಪ್ರಕರಣ ದಾಖಲಿಸಲು ಇ ಮೋರ್ ತಂತ್ರಾಂಶ

ಬೆಂಗಳೂರು:
ಕರೋನಾದಿಂದ ಸಾವನ್ನಪ್ಪಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾರಣ ತಿಳಿಯಲು ಐಸಿಎಂಆರ್-ಎಸ್ ಸಿಡಿಐಆರ್ ಅಭಿವೃದ್ಧಿಪಡಿಸಿರುವ ಇ-ಮೋರ್  ತಂತ್ರಾಂಶದ ದಾಖಲಿಸಲು ರಾಜ್ಯದ ಎಲ್ಲಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ  ಆರೋಗ್ಯ ಇಲಾಖೆ ಸೂಚಿಸಿದೆ.
ಕರೋನಾದಿಂದ ಮೃತಪಟ್ಟ ವ್ಯಕ್ತಿಯ ಸಂಪೂರ್ಣ ವರದಿ ಪಡೆಯಲು ಇ-ಜನ್ಮಾ ಪೋರ್ಟಲ್ ಸದ್ಯಕ್ಕೆ ಬಳಸಲಾಗುತ್ತಿದ್ದು, ಅಪೂರ್ಣ ಮಾಹಿತಿ ಲಭ್ಯವಾಗುತ್ತಿರುವ ಕಾರಣ ನೂತನ ತಂತ್ರಾಂಶ ಬಳಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚಿಗೆ ಪ್ರಕಟಿಸಿದ ಐಸಿಡಿ ಹತ್ತು ಕೋಡ್ ಗಳಲ್ಲಿ ಕೋವಿಡ್ 19 ಘಟಕವನ್ನು ವರದಿಯಲ್ಲಿ ಬಳಸಲು ಇ-ಮೋರ್ ತಂತ್ರಾಂಶದಲ್ಲಿ ಸೇರಿಸಲಾಗಿದೆ. ಇದನ್ನು ರಾಜ್ಯವ್ಯಾಪಿ ಅನುಷ್ಠಾನಗೊಳಿಸಲಾಗುತ್ತಿದೆ. ದತ್ತಾಂಶ ದಾಖಲಿಸಲು ಮತ್ತು ಸಾಂಕ್ರಾಮಿಕ ರೋಗ ತಡೆಗಟ್ಟಲು ಅನುಕೂಲವಾಗಲಿದೆ ಈ ತಂತ್ರಾಂಶ.
ಮರಣದ ವರದಿಗಳನ್ನು ನೀಡುವಾಗ ಈ ತಂತ್ರಾಂಶದಲ್ಲಿ ವರದಿ ಮಾಡಲು ನಿರ್ದೇಶನ ನೀಡುವುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.