Wednesday, 24th April 2024

ಕಾರ್ಮಿಕರು ಹೆದರಬೇಡಿ: ನ್ಯಾ.ಅರ್ಜುನ್ ಮಲ್ಲೂರ್

ಬಳ್ಳಾರಿ:

ಕೋವಿಡ್-19 ಹಿನ್ನೆಲೆ ಹಿರಿಯ ಸಿವಿಲ್ ನ್ಯಾಯಾಧೀಶ ಅರ್ಜುನ್ ಮಲ್ಲೂರ್ ನಗರದ ವಿವಿಧೆಡೆ ನಡೆಯುತ್ತಿರುವ ಕಟ್ಟಡ ಕಾಮಗಾರಿಗಳ ಸ್ಥಳದಲ್ಲಿರುವ ಕಾರ್ಮಿಕರು ತಂಗಿರುವ ಸ್ಥಳಕ್ಕೆ ಅಧಿಕಾರಿಗಳ ಜತೆಗೂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲಿಗೆ ಸರಕಾರಿ ಅತಿಥಿಗೃಹದ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ಜಿಲ್ಲಾಡಳಿತದ ಸಂಕೀರ್ಣದಲ್ಲಿದ್ದ ಕಾರ್ಮಿಕರನ್ನು ಭೇಟಿಯಾಗಿ ಅಲ್ಲಿ ಒದಗಿಸಲಾಗಿರುವ ಸೌಲಭ್ಯಗಳು, ಈ ಕೊರೊನಾ ಸಂದರ್ಭದಲ್ಲಿ ಗುತ್ತಿಗೆದಾರರು ಅವರಿಗೆ ಒದಗಿಸಲಾಗಿರುವ ಸೌಕರ್ಯಗಳನ್ನು ಪರಿಶೀಲಿಸಿದರು.
ನಂತರ ಅವರು ಮುಂಡರಗಿ ಬಳಿ‌‌ ನಿರ್ಮಿಸಲಾಗುತ್ತಿರುವ ಆಶ್ರಯ ಬಡಾವಣೆಯಲ್ಲಿದ್ದ ಕಾರ್ಮಿಕರನ್ನು ಭೇಟಿಯಾಗಿ ಅವರ ಅಹವಾಲುಗಳನ್ನು ಆಲಿಸಿದ ನ್ಯಾಯಾಧೀಶರು ಅಲ್ಲಿರುವ ಗುತ್ತಿಗೆದಾರರಿಗೆ ಕಾರ್ಮಿಕರಿಗೆ ಶೌಚಾಲಯ ಮತ್ತು ಅಗತ್ಯ ಸೌಕರ್ಯ ಕಲ್ಪಿಸಿ ಎಂದು ಸೂಚಿಸಿದರು.

ಕೋವಿಡ್-19 ಹಿನ್ನೆಲೆ ಕಾರ್ಮಿಕರು ಚಿಂತಿತರಾಗುವುದು ಬೇಡ. ತಾವು ಅರಾಮವಾಗಿ ಇಲ್ಲಿಯೇ ಇರಿ ತಮಗೆ ಬೇಕಾದ ಅಗತ್ಯ ವಸತಿ ಮತ್ತು ಊಟ ಹಾಗೂ ಇನ್ನೀತರ ಸೌಕರ್ಯಗಳನ್ನು ಈಗಾಗಲೇ ಕಲ್ಪಿಸಲಾಗಿದೆ. ಇನ್ನೂ ತಮಗೆ ತೊಂದರೆಗಳಿದ್ದಲ್ಲಿ ಇನ್ನೂ ಎರಡ್ಮೂರು ದಿನಗಳಲ್ಲಿ ಮತ್ತೆ ಪರಿಶೀಲನೆಗೆ ಆಗಮಿಸಲಿದ್ದು,ಗಮನಕ್ಕೆ ತನ್ನಿ ಎಂದು ಅಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಚಂದ್ರಶೇಖರ್ ಐಲಿ, ಕಾರ್ಮಿಕ ಇಲಾಖೆಯ ಇನ್ಸ್ಪೆಕ್ಟರ್ ರವಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

error: Content is protected !!