Sunday, 15th December 2024

ಕೆಲಸ ಕೊಡಿಸುವುದಾಗಿ ಕರೆತಂದು ವೇಶ್ಯಾವಾಟಿಕೆಗೆ ಒತ್ತಾಯ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು:
ಅನ್ಯ ರಾಜ್ಯದ ಯುವತಿಯರನ್ನು ಕೆಲಸ ಕೊಡಿಸುವುದಾಗಿ ಕರೆತಂದು ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದ ಪ್ರಕರಣವೊಂದು ನಗರದಲ್ಲಿ ಬೆಳಕಿಗೆ ಬಂದಿದೆ.
ನಗರದ ಆರ್ಕೆಸ್ಟ್ರಾದಲ್ಲಿ ಕೆಲಸ ಕೊಡಿಸುವುದಾಗಿ ಪ್ರಜ್ವಲ್ ಎಂಬಾತ ನಗರಕ್ಕೆ 12 ಮಂದಿ ಯುವತಿಯರನ್ನು ಕರೆ ತಂದಿದ್ದ. ಆದರೆ ಲಾಕ್​ಡೌನ್ ಹಿನ್ನೆಲೆ ಆರ್ಕೆಸ್ಟ್ರಾ ಎಲ್ಲಾ ಬಂದ್​ ಆಗಿವೆ. ಇದನ್ನೇ ಬಂಡವಾಳ ಮಾಡಿಕೊಂಡು ಯುವತಿಯರನ್ನು ವೇಶ್ಯಾವಾಟಿಗೆ ಒತ್ತಾಯಿಸಿ ಪ್ರಜ್ವಲ್ ಹಿಂಸಿಸುತ್ತಿದ್ದ ಎನ್ನಲಾಗಿದೆ.
ಇದರಿಂದಾಗಿ ನೊಂದ ಓರ್ವ ಯುವತಿ ಸ್ನೇಹಿತನ ಬಳಿ ಅಳಲು ತೋಡಿಕೊಂಡಿದ್ದಳು. ಹೀಗಾಗಿ ಯುವಕ ಪರಿಚಿತ ವಕೀಲರಿಗೆ ವಿಷಯ ತಿಳಿಸಿದ್ದ. ತಕ್ಷಣ ಎಚ್ಚೆತ್ತುಕೊಂಡ ವಕೀಲರು ಟ್ವೀಟ್ ಮೂಲಕ ನಗರ ಪೊಲೀಸರ ಗಮನಕ್ಕೆ ತಂದಿದ್ದರು. ತಕ್ಷಣ ಕಾರ್ಯಪ್ರವೃತ್ತರಾಗಿ ಪೊಲೀಸರು ಯುವತಿಯರನ್ನ ರಕ್ಷಿಸಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ‌ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.