ದೆಹಲಿ,
ಕೊವಿಡ್ ರೋಗಿಗಳಿಗೆ ಮಾನಸಿಕ ಮಾನದಂಡಗಳ ಮೇಲ್ವಿಚಾರಣೆ ಮಾಡುವ ವೈರ್ ಲೆಸ್ ವ್ಯವಸ್ಥೆ ’ಕೊವಿಡ್-ಬೀಪ್’ ಗೆ ಪ್ರಧಾನಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಭಾನುವಾರ ಇಲ್ಲಿ ಚಾಲನೆ ನೀಡಿದರು.
ಕೊವಿಡ್-ಬೀಪ್ ಭಾರತದ ಮೊದಲ ದೇಶೀಯ ಮತ್ತು ಕಡಿಮೆ ವೆಚ್ಚದ ವ್ಯವಸ್ಥೆಯಾಗಿದ್ದು, ಇದನ್ನು ಹೈದರಾಬಾದ್ನ ಇಎಸ್ಐಸಿ ವೈದ್ಯಕೀಯ ಕಾಲೇಜು ಅಭಿವೃದ್ಧಿಪಡಿಸಿದೆ.
ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಅರಿವು ಬೇಕು, ಆತಂಕವಲ್ಲ ಎಂದು ಪ್ರತಿಪಾದಿಸಿದ ಸಚಿವರು, ಲಾಕ್ಡೌನ್ ತೆರವಾಗುತ್ತಿರುವ ಸಮಯದಲ್ಲಿ ಈ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ತಡೆಯಬೇಕಿದ್ದು, ಜಾಗೃತಿ ಹೆಚ್ಚು ಅಗತ್ಯವಾಗಿದೆ ಎಂದು ಹೇಳಿದರು.
ಕೊವಿಡ್ ಲಾಕ್ಡೌನ್ ಬಿಕ್ಕಟ್ಟು ಸಮಯದಲ್ಲಿ ಐಐಟಿ-ಹೈದರಾಬಾದ್ ಮತ್ತು ಪರಮಾಣು ಇಂಧನ ಇಲಾಖೆ ಸಹಯೋಗದೊಂದಿಗೆ ಇಎಸ್ಐಸಿ ವೈದ್ಯಕೀಯ ಕಾಲೇಜು ವಿಮಾದಾರರಿಗೆ ಮತ್ತೊಂದು ಆವಿಷ್ಕಾರ ಮಾಡಿದೆ. ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಭಾರತದ ಪ್ರತಿಷ್ಠಿತ ಸಂಸ್ಥೆಗಳು ಹೇಗೆ ಕಂಡುಹಿಡಿಯಬಲ್ಲವು ಎಂಬುದಕ್ಕೆ ಕೊವಿಡ್-ಬೀಪ್ ನಿದರ್ಶನವಾಗಿದೆ. ಕಡಿಮೆ ವೆಚ್ಚದ ಈ ವ್ಯವಸ್ಥೆಯ ಆವಿಷ್ಕಾರದಿಂದ ‘ಆತ್ಮ ನಿರ್ಭರ್ ಭಾರತ್’ಗೆ ನಿಜವಾದ ಅರ್ಥ ಕಲ್ಪಿಸಲಾಗಿದೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.